ಟೀಮ್ ಇಂಡಿಯಾ ಬಿರುಗಾಳಿ ಬ್ಯಾಟಿಂಗ್‌ಗೆ ಜಿಂಬಾಬ್ವೆ ತತ್ತರ – ಭಾರತದ ವಿರುದ್ಧ ಕೊನೇ ತನಕ ಹೋರಾಡಿ ಸೋತ ಬೆನೆಟ್
ದುಬಾರಿ ದುಬೆ ಬೌಲಿಂಗ್ ನೋಡಿ ಫ್ಯಾನ್ಸ್ ಟೆನ್ಷನ್..!

ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧ 72 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಭಾರತದ ಸೆಮಿಫೈನಲ್ ಕನಸು ಇನ್ನು ಗರಿಗೆದರಿದೆ. ಸತತ ಎರಡನೇ ಪಂದ್ಯದಲ್ಲಿ ಸೋತ ಜಿಂಬಾಬ್ವೆ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.
ಇದನ್ನೂ ಓದಿ:ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ಸೌತ್ ಆಫ್ರಿಕಾ – ಭಾರತದ ಸೆಮಿಫೈನಲ್ ಹಾದಿ ಈಗ ಸುಲಭ!
ಟಿ20 ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು ಜಿಂಬಾಬ್ವೆ. ಆಗಲೇ ಜಿಂಬಾಬ್ವೆ ತಂಡಕ್ಕೆ ತಮ್ಮದು ತಪ್ಪು ನಿರ್ಧಾರ ಅಂತಾ ಅರಿವಾಗತೊಡಗಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಸಂಜು ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 48 ರನ್ ಸೇರಿಸಿದರು. ಸಂಜು ಹೊಡಿ ಬಡಿ ಆಟ ಆರಂಭಿಸಿ, 24 ರನ್ ಗಳಿಸಿ ಔಟಾದರು. ಅಭಿಷೇಕ್ ಶರ್ಮಾ ಕೂಡಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದೇ ಮೊದಲ ಬಾರಿ ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಿಂದ ಅಮೋಘ 55 ರನ್ ಹೊರಹೊಮ್ಮಿತು. ಅಭಿಷೇಕ್ 26 ಎಸೆತಗಳಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್ ಅರ್ಧಶತಕವನ್ನು ಪೂರೈಸಿದರು. ನಂತರ ಬಂದ ಪ್ರತಿಯೊಬ್ಬ ಬ್ಯಾಟರ್ ಕೂಡಾ ಹೊಡಿ ಬಡಿ ಆಟದ ಮೂಲಕ ಸ್ಕೋರ್ ಏರಿಸುವಲ್ಲಿ ಸಫಲರಾದರು. ಇಶಾನ್ ಕಿಶನ್ 38 ರನ್, ನಾಯಕ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದಂತೆ 33 ರನ್, ಹಾರ್ದಿಕ್ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ ಅಜೇಯ 50 ರನ್ , ತಿಲಕ್ ವರ್ಮಾ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿದಂತೆ ಅಜೇಯ 44 ರನ್ ಬಾರಿಸಿದರು. ಭಾರತ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 256 ರನ್ ಬೃಹತ್ ಸ್ಕೋರ್ ದಾಖಲಿಸಿತು.
ಟೀಮ್ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಸಾಧಾರಣ ಆರಂಭ ಪಡೆಯಿತು. ಆದರೆ, ಬ್ರಿಯಾನ್ ಬೆನೆಟ್ ಮಾತ್ರ ಟೀಮ್ ಇಂಡಿಯಾ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸದರು. ಒಂದೊಂದೇ ವಿಕೆಟ್ ಗಳು ಉದುರುತ್ತಿದ್ದರೂ ಬೆನೆಟ್, ಕೊನೆಯವರೆಗೂ ಕ್ರೀಸ್‌ನಲ್ಲಿಯೇ ಉಳಿದು 59 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 97 ರನ್ ಗಳಿಸಿದರು. ಆದರೂ ಕೂಡಾ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಇನ್ನು ಭಾರತದ ಪರ ಶಿವಂ ದುಬೆ ದುಬಾರಿಯಾದರು. ಅದರಲ್ಲೂ ಒಂದೇ ಓವರ್ ನಲ್ಲಿ 26 ರನ್ ನೀಡುವ ಮೂಲಕ ಆಟಗಾರರ ತಲೆನೋವಿಗೂ ಕಾರಣರಾದರು.

ನೋಡಿರಿ

