ಡೇಂಜರ್ ಝೋನ್ ನಲ್ಲಿ ಕರ್ನಾಟಕ – ಕೈ ಕೊಟ್ಟ ರಾಹುಲ್.. ಪಡಿಕ್ಕಲ್
JK ಕೋಚ್, ಕ್ಯಾಪ್ಟನ್ ಅತಿರೇಕ

ಕನ್ನಡಿಗರಿಗೆ ಈಗ ಡಬಲ್ ಶಾಕ್. ಒಂದ್ಕಡೆ ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಟೆನ್ಷನ್. ಇನ್ನೊಂದ್ಕಡೆ ಕರ್ನಾಟಕ ತಂಡ ರಣಜಿ ಫೈನಲ್ನಲ್ಲಿ ಮುಗ್ಗರಿಸಿದೆ. ದೇವದತ್ ಪಡಿಕ್ಕಲ್ ಕ್ಯಾಪ್ಟನ್ಸಿಯಲ್ಲಿ ಜಮ್ಮುಕಾಶ್ಮೀರ ವಿರುದ್ಧ ಹುಬ್ಬಳ್ಳಿಯಲ್ಲಿ ಅಖಾಡಕ್ಕಿಳಿದಿರೋ ಕನ್ನಡಿಗರಿಗೆ ಟಾಸ್ನಿಂದಲೇ ಬ್ಯಾಡ್ಲಕ್ ಸ್ಟಾರ್ಟ್ ಆಯ್ತು.. ಆಮೇಲೆ ಬೌಲಿಂಗ್ ಈಗ ಬ್ಯಾಟಿಂಗ್.
ಸ್ಟಾರ್ ಆಟಗಾರರ ದಂಡೇ ತುಂಬಿದ್ದ ಕರ್ನಾಟಕ ರಣಜಿ ತಂಡ ಈ ಸಲ ಚಾಂಪಿಯನ್ ಪಟ್ಟಕ್ಕೇರೋ ಫೇವರೆಟ್ ಟೀಂ ಆಗಿದೆ. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯ್ಕುಮಾರ್, ಸ್ಮರಣ್ ರವಿಚಂದ್ರನ್ ಸೇರಿದಂತೆ ಸಾಕಷ್ಟು ಅನುಭವಿಗಳೇ ತುಂಬಿದ್ದಾರೆ. ಹೀಗಾಗಿ ಈ ಸಲ ಕರ್ನಾಟಕ ಟ್ರೋಫಿ ಗೆದ್ದೇ ಗೆಲ್ಲುತ್ತೆ ಅಂತ್ಲೇ ಎಲ್ರೂ ಪ್ರೆಡಿಕ್ಟ್ ಮಾಡಿದ್ರು. ಬಟ್ ಮೂರನೇ ದಿನದಾಟದ ಪಂದ್ಯದಲ್ಲಿ ಟ್ವಿಸ್ಟ್ ಸಿಕ್ಕಿದೆ.
ಜಮ್ಮು ಕಾಶ್ಮೀರ ವಿರುದ್ಧ ಬೌಲಿಂಗ್ ನಲ್ಲಿ ಎಡವಿದ ಕರ್ನಾಟಕ!
ರಣಜಿ ಟ್ರೋಫಿ ಇತಿಹಾಸದಲ್ಲಿ 8 ಸಲ ಚಾಂಪಿಯನ್ ಆಗಿರೋ ಕರ್ನಾಟಕ ಮತ್ತೊಂದ್ಕಡೆ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಪಡೆದಿರೋ ಜಮ್ಮುಕಾಶ್ಮೀರ ತಂಡಗಳು ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ಕಣಕ್ಕಿಳಿದಿವೆ. ಫೆಬ್ರವರಿ 24ರಿಂದ ಪಂದ್ಯ ಆರಂಭವಾಗಿದ್ದು ಇವತ್ತು ಮೂರನೇ ದಿನದಾಟ ಕಂಪ್ಲೀಟ್ ಆಗಿದೆ. ತವರಿನ ಅಭಿಮಾನಿಗಳ ಎದುರಲ್ಲೇ ಕಪ್ ಕನಸಿನೊಂದಿಗೆ ಕಣಕ್ಕಿಳಿದ ಕನ್ನಡಿಗರಿಗೆ ಅಂದುಕೊಂಡಂತ ಸ್ಟಾರ್ಟ್ ಸಿಗ್ಲಿಲ್ಲ. ಜಮ್ಮು ಕಾಶ್ಮೀರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಹೀಗೆ ಬ್ಯಾಟಿಂಗ್ ಗೆ ಇಳಿದ ಜಮ್ಮುಕಾಶ್ಮೀರ ಆಟಗಾರರು ಅಕ್ಷರಶಃ ಕನ್ನಡಿಗ ಬೌಲರ್ಗಳನ್ನ ಚೆಂಡಾಡಿದ್ರು. ಮೊದಲ ಇನ್ನಿಂಗ್ಸ್ನಲ್ಲೇ ಬರೋಬ್ಬರಿ 584 ರನ್ಗಳನ್ನ ಕಲೆ ಹಾಕಿದ್ರು. ಆಲ್ಮೋಸ್ಟ್ ಎರಡೂವರೆ ದಿನ ಬ್ಯಾಟಿಂಗ್ ಮಾಡಿ ಕಂಪ್ಲೀಟ್ ಡಾಮಿನೇಟ್ ಮಾಡಿದರು. ಜೆಕೆ ಪರ ಶುಭಂ ಸೆಂಚುರಿ ಹೊಡೆದ್ರೆ ಇತರೆ ಐವರು ಬ್ಯಾಟರ್ಗಳಿಂದ ಫಿಫ್ಟಿ ಪ್ಲಸ್ ರನ್ಸ್ ಬಂತು. ಜಮ್ಮು ಬ್ಯಾಟರ್ಗಳನ್ನ ಕಟ್ಟಿ ಹಾಕುವಲ್ಲಿ ಕನ್ನಡಿಗರು ಅಕ್ಷರಶಃ ಹೈರಾಣಾಗಿದ್ರು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 5 ವಿಕೆಟ್ ಪಡೆದರೆ ವಿಧ್ಯಾದರ್, ವೈಶಾಕ್, ಶ್ರೇಯಸ್ ಮತ್ತು ಶ್ರೀಕರ್ ತಲಾ ಒಂದೊಂದು ವಿಕೆಟ್ ತಗೊಂಡದ್ರು. ಹೀಗಿದ್ರೂ ಜೆಕೆ ಟೀಂ ಮೊದಲ ಇನ್ನಿಂಗ್ಸ್ನಲ್ಲೇ ದಾಖಲೆಯ ರನ್ಸ್ ಪೇರಿಸಿ ಶಾಕ್ ಕೊಟ್ಟಿತ್ತು. ರನ್ಗಳ ಬೆಟ್ಟ ನೋಡಿದಾಗ್ಲೇ ಅಬ್ಬಬ್ಬಾ ಅನ್ನಿಸೋ ಥರ ಇತ್ತು. ಆದ್ರೆ ಈ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ಎಡವಿದೆ.
ಕ್ರೂಶಿಯಲ್ ಟೈಮಲ್ಲೇ ಕೈಕೊಟ್ಟ ಕರ್ನಾಟಕ ಬ್ಯಾಟರ್ಸ್!
ಮೊದಲ ಇನ್ನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರ ತಂಡ ಬರೋಬ್ಬರಿ 584 ರನ್ಗಳನ್ನ ಗಳಿಸಿ ಆಲೌಟ್ ಆಯ್ತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕರ್ನಾಟಕ ಪರ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿದೆ. ಅದೂ ಕೂಡ ಇಂಥಾ ಮಸ್ಟ್ ವಿನ್ ಮ್ಯಾಚ್ ಮ್ಯಾಚ್, ಕ್ರೂಶಿಯಲ್ ಸ್ಟೇಜ್ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಕರ್ನಾಟಕ ಪರ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ರಾಹುಲ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಕಳೆದ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ದೇವದತ್ ಪಡಿಕ್ಕಲ್ 11 ರನ್ಗಳಿಗೆ ಪೆವಿಲಿಯನ್ ಸೇರಿದ್ರು. ಇನ್ನು ಕರುಣ್ ನಾಯರ್ ಮತ್ತು ಸ್ಮರಣ್ ರವಿಚಂದ್ರನ್ ಅಂತೂ ಬಂದ ಪುಟ್ಟ ಹೋದ ಪುಟ್ಟ.. ರನ್ ಖಾತೆಯನ್ನೂ ತೆರೆಯದೆ ವಿಕೆಟ್ ಒಪ್ಪಿಸಿದ್ರು. ಆಕಿಬ್ ನಬಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಬೇಟೆಯಾಡಿದ್ರು. ಈ ಮೂಲಕ ಕರ್ನಾಟಕ 57 ರನ್ಗಳು ಇರುವಾಗ್ಲೇ ಪ್ರಮುಖ ನಾಲ್ಕು ವಿಕೆಟ್ಗಳನ್ನ ಕಳ್ಕೊಳ್ತು. ಇಂಥಾ ಅಂಡರ್ ಪ್ರೆಶರ್ನಲ್ಲೂ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿದ್ರು. ಶತಕವನ್ನೂ ಕಂಪ್ಲೀಟ್ ಮಾಡಿದ್ದಾರೆ. ಕರ್ನಾಟಕ ಆಲ್ರೆಡಿ 5 ವಿಕೆಟ್ಗಳನ್ನ ಕಳ್ಕೊಂಡಿರೋ ಕರ್ನಾಟಕ ನಾಲ್ಕನೇ ದಿನದಾಟದಲ್ಲಿ ಹೇಗೆ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ ನೋಡ್ಬೇಕು.
ಬೌಲಿಂಗ್ ನಲ್ಲಿ ಎಡವಿ ಬ್ಯಾಟಿಂಗ್ ನಲ್ಲೂ ಕೈಬಿಟ್ಟ ಕರ್ನಾಟಕ!
ಕರ್ನಾಟಕ ತಂಡ ಬೌಲಿಂಗ್ಗೆ ಬಂದಾಗ ಮೊದಲ ವಿಕೆಟ್ ಏನೋ ಬೇಗ ತಗೊಂಡ್ರು. ಆದ್ರೆ ನಂತರದಲ್ಲಿ ಒಂದೊಂದದು ವಿಕೆಟ್ ಬೀಳೋ ಹೊತ್ತಿಗೆಲ್ಲಾ ದೊಡ್ಡ ಅಂತರದಲ್ಲೇ ರನ್ಸ್ ಌಡ್ ಆಗಿರ್ತಿತ್ತು. ಅದ್ರಲ್ಲೂ ಪ್ರತೀ ಬ್ಯಾಟರ್ ಕೂಡ 50ಪ್ಲಸ್ ಸ್ಕೋರ್ ಮಾಡಿಯೇ ಹೋಗ್ತಿದ್ರು. ಹೀಗಾಗಿ ಜಮ್ಮು ಕಾಶ್ಮೀರ ತಂಡ ಬೃಹತ್ ರನ್ಗಳನ್ನ ಕಲೆ ಹಾಕಿತು. ಇನ್ನು ಚೇಸಿಂಗ್ ಬಂದ ಕರ್ನಾಟಕ ತಂಡದ ಮೇಲೆ ದೊಡ್ಡ ಜವಾಬ್ದಾರಿಯೇ ಇತ್ತು. ಆದ್ರೆ ಪ್ರೆಶರ್ನಲ್ಲಿದ್ದ ಬ್ಯಾಟರ್ಸ್ ಆರಂಭದಲ್ಲೇ ಪೆವಿಲಿಯನ್ ಪರೇಡ್ ನಡ್ಸಿದ್ರು. ಕರುಣ್ ಮತ್ತು ಸ್ಮರಣ್ ಅಂತೂ ಖಾತೆಯನ್ನೂ ತೆರೀಲಿಲ್ಲ. 584 ರನ್ ಟಾರ್ಗೆಟ್ ಇಟ್ಕೊಂಡು 57 ರನ್ಗೆ 4 ವಿಕೆಟ್ ಕಳ್ಕೊಂಡ್ರು. ಅಂದ್ರೆ ಕಂಪ್ಲೀಟ್ ಅಂಡರ್ ಪ್ರೆಶರ್ನಲ್ಲಿರೋದು ಗೊತ್ತಾಗ್ತಿತ್ತು.
ಜಮ್ಮುಕಾಶ್ಮೀರ ಕೋಚ್ ಉದ್ಧಟತನ.. ನಾಯಕನ ದರ್ಪ!
ಇನ್ನು ಈ ಪಂದ್ಯ ಗೆಲ್ಲೋದು ಕರ್ನಾಟಕಕ್ಕೆ ಚಾಂಪಿಯನ್ಶಿಪ್ ಅಷ್ಟೇ ಅಲ್ಲದೇ ಜಮ್ಮು ಕೋಚ್ ಮತ್ತು ಕ್ಯಾಪ್ಟನ್ಗೆ ತಿರುಗೇಟು ಕೊಡೋ ಮ್ಯಾಚ್ ಆಗಿದೆ. ಯಾಕಂದ್ರೆ ಜಮ್ಮುಕಾಶ್ಮೀರ ರಣಜಿ ತಂಡದ ಕೋಚ್ ಅಜಯ್ ಶರ್ಮಾ ಕರ್ನಾಟಕ ತಂಡವನ್ನ ಅವ್ರ ಮನೆಗೇ ನುಗ್ಗಿ ಹೊಡಿತೀವಿ ಅಂತಾ ಬಿಲ್ಡಪ್ ಕೊಟ್ಟಿದ್ರು. ಇತ್ತ ಜಮ್ಮುಕಾಶ್ಮೀರ ಕ್ಯಾಪ್ಟನ್ ಪರಸ್ ಡೋಗ್ರಾ ದರ್ಪ ತೋರಿರೋ ಘಟನೆಯೂ ನಡೆದಿದೆ. ಎರಡನೇ ದಿನದಾಟದಲ್ಲಿ ಕೆವಿ ಅನೀಶ್ ಹೆಲ್ಮೆಟ್ಗೆ ಡಿಚ್ಚಿ ಹೊಡೆದಿದ್ರು. ಈ ವೇಳೆ ಮಯಾಂಕ್ ಮತ್ತು ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ಕಂಟ್ರೋಲ್ ಮಾಡಿದ್ರು. ಡೋಗ್ರಾ ವರ್ತನೆ ನೋಡಿದ್ರೆ ಅಂಪೈರ್ಗೆ ಅವ್ರನ್ನ ಔಟ್ ಮಾಡಿ ಕಳಿಸೋ ರೈಟ್ಸ್ ಕೂಡ ಇತ್ತು. ಅಂಡರ್ ಲಾ 42ರ ಅಡಿಯಲ್ಲಿ ಬ್ಯಾಟರ್ವೊಬ್ಬ ಎಕ್ಸ್ಟ್ರೀಮ್ ಸೀರಿಯಸ್ ಮಿಸ್ ಬಿಹೇವ್ ಮಾಡಿದ್ರೆ ಔಟ್ ಅಂತಾ ಘೋಷಣೆ ಮಾಡಿ ಕಳಿಸ್ಬೋದಿತ್ತು. ಬಟ್ ವಾರ್ನ್ ಮಾಡಿ ನಂತ್ರ ಪಂದ್ಯದ ಶೇಕಡಾ 50ರಷ್ಟು ಸಂಭಾವನೆ ಶುಲ್ಕ ಮತ್ತು 2 ಡಿಮೆರಿಟ್ ಅಂಕ ನೀಡ್ಲಾಗಿದೆ.
ಇನ್ನು ಕರ್ನಾಟಕ ತಂಡ ಕೊನೇ ಭಾರಿಗೆ 2014 -15 ರಲ್ಲಿ ವಿನಯ್ ಕುಮಾರ್ ಅವರ ನೇತೃತ್ವದಲ್ಲಿ ರಣಜಿ ಟ್ರೋಫಿಯನ್ನು ಗೆದ್ದಿತ್ತು. ಕೆ ಎಲ್ ರಾಹುಲ್, ಕರುಣ್ ನಾಯಕ್, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್ ಅಂದೂ ಆಡಿದ್ದು, ಇಂದೂ ಕೂಡ ಕಣಕ್ಕಿಳಿದಿದ್ದಾರೆ. ಬಟ್ ಗೇಮ್ ಆಲ್ರೆಡಿ ಜಮ್ಮು ಕಾಶ್ಮೀರ ಕಡೆ ಟರ್ನ್ ಆಗಿದ್ದು ನಾಲ್ಕನೇ ದಿನದಾಟದಲ್ಲೇ ಒಂದು ಕ್ಲೈಮ್ಯಾಕ್ಸ್ ಪಿಕ್ಚರ್ ಅಂತೂ ಸಿಗುತ್ತೆ.

ನೋಡಿರಿ

