ಏಜ್ ಈಸ್ ಜಸ್ಟ್ ಎ ನಂಬರ್! – ಯುವಕರನ್ನೂ ನಾಚಿಸುವಂತಿದೆ 90 ವರ್ಷದ ಅಜ್ಜಿ ಕಾರ್ ಡ್ರೈವಿಂಗ್!

ಏಜ್ ಈಸ್ ಜಸ್ಟ್ ಎ ನಂಬರ್. ಸಾಧನೆ ಮಾಡಲು ಪರಿಶ್ರಮವೊಂದಿದ್ದರೆ ಸಾಕು. ವಯಸ್ಸು ಲೆಕ್ಕಕ್ಕೆ ಬರಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 90 ವರ್ಷದ ಅಜ್ಜಿ. ಇದೀಗ ಈ ಅಜ್ಜಿ ಕಾರು ಡ್ರೈವಿಂಗ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ಬರೋಬ್ಬರಿ 90 ವಯಸ್ಸಿನ ಅಜ್ಜಿಯೊಬ್ಬರು ಆತ್ಮವಿಶ್ವಾಸದಿಂದ ಕಾರು ಡ್ರೈವಿಂಗ್ ಮಾಡುತ್ತಿರುವ ವಿಡಿಯೊವೊಂದು ವೈರಲ್ ಈ ಅಜ್ಜಿ ರಸ್ತೆಯಲ್ಲಿ ಟ್ರಾಫಿಕ್ ಇದ್ರೂ ಒಂಚೂರು ಭಯಪಡದೇ, ಸುಜುಕಿ ಆಲ್ಟೋ ಕಾರನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸಿದ್ದಾರೆ. ಸದ್ಯ ಈ ಅಜ್ಜಿಯ ಧೈರ್ಯಕ್ಕೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
90 ವರ್ಷದ ಅಜ್ಜಿಯೊಬ್ಬರ ಈ ಉತ್ಸಾಹ ನೋಡಿದರೆ ನೀವು ನಿಜಕ್ಕೂ ಬೆರಗಾಗುತ್ತೀರಿ. ಈ ವಯಸ್ಸಿನಲ್ಲೂ ಇವರು ಕಾರು ಓಡಿಸುವುದನ್ನು ಕಂಡು ಯುವ ಜನರೇ ಅಚ್ಚರಿ ಪಟ್ಟಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವ್ಲಾಗರ್ ವಿಶಾಲ್ ಲಾಲೋತ್ರ ಎನ್ನುವವರು ಈ ದೃಶ್ಯ ಶೇರ್ ಮಾಡಿಕೊಂಡಿದ್ದು, ವೃದ್ಧಾಪ್ಯದ ಕಲ್ಪನೆಗಳನ್ನು ಧಿಕ್ಕರಿಸಿ, ವೃದ್ದೆಯೊಬ್ಬರು ಶಾಂತವಾಗಿ ಕಾರು ಸಂಚರಿಸುವುದನ್ನು ತೋರಿಸಲಾಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಅಜ್ಜಿಯ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ನೋಡುವಾಗಲೇ ಮಂದಹಾಸ ಮೂಡುತ್ತದೆ. ಟ್ರಾಫಿಕ್ ನಡುವೆಯೂ ಅಜ್ಜಿ ಯಾವುದೇ ಭಯವಿಲ್ಲದೆ, ಆತ್ಮವಿಶ್ವಾಸದಿಂದ ಕಾರು ಡ್ರೈವಿಂಗ್ ಮಾಡಿದ್ದು ನಿಜಕ್ಕೂ ಗ್ರೇಟ್ ಎಂದು ಕಮೆಂಟ್ ಮಾಡ್ತಿದ್ದಾರೆ.
View this post on Instagram

ನೋಡಿರಿ

