ಫೇಸ್‌ಬುಕ್‌, ವಾಟ್ಸಪ್‌ ಸ್ಟೇಟಸ್‌ ಹಾಕಿ ಆತ್ಮಹ*ತ್ಯೆಗೆ ಶರಣಾದ ವಿದ್ಯಾರ್ಥಿ! – ಡೆಟ್‌ನೋಟ್‌ನಲ್ಲಿ ಶಾಕಿಂಗ್‌ ವಿಚಾರ!

ಫೇಸ್‌ಬುಕ್‌, ವಾಟ್ಸಪ್‌ ಸ್ಟೇಟಸ್‌ ಹಾಕಿ ಆತ್ಮಹ*ತ್ಯೆಗೆ ಶರಣಾದ ವಿದ್ಯಾರ್ಥಿ! – ಡೆಟ್‌ನೋಟ್‌ನಲ್ಲಿ ಶಾಕಿಂಗ್‌ ವಿಚಾರ!

ನೀನೇ ಖುಷಿಯಾಗಿರು. ನಾನು ಪ್ರಪಂಚವೇ ಬಿಟ್ಟು ಹೋಗುತ್ತಿದ್ದೀನಿ ಎಂದು ಸ್ಟೇಟಸ್‌ ಹಾಕಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತುರುವೇಕೆರೆ ಪಟ್ಟಣದ ಡಿಪ್ಲೋಮಾ ಕಾಲೇಜಿನ ಹಿಂಭಾಗದಲ್ಲಿರುವ ನೀರಿನ ಗುಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಕಲ್ಯಾಣ! – ಉದಯಪುರದಲ್ಲಿ ಶ್ರೀವಲ್ಲಿ ವಿವಾಹ!

ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೆನಹಳ್ಳಿ ಗ್ರಾಮದ ಧನುಷ್ (19) ಮೃತ ಯುವಕ. ಆತ ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಸಮೀಪದ ಗೋಪ್ಪೆನಹಳ್ಳಿ ಗ್ರಾಮದ ನಿವಾಸಿಯಾಗಿದ್ದ. ಧನುಷ್ ತುರುವೇಕೆರೆ ಪಟ್ಟಣದಲ್ಲಿರುವ ಡಿಪ್ಲೊಮಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದನು.

ಬುಧವಾರ (ಫೆ.25) ಬೆಳಿಗ್ಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ. ಆದರೆ ಸಂಜೆಯಾದರೂ ಕೂಡ ಮನೆಗೆ ಮರಳಿರಲಿಲ್ಲ. ಜೊತೆಗೆ ಪೋಷಕರ ಕಾಲ್‌ನ್ನು ಕೂಡ ರಿಸೀವ್ ಮಾಡಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಈ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಭಾಗ ಇರುವ ಕಟ್ಟೆಯೊಂದರ ಬಳಿ ಬ್ಯಾಗ್, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಜೊತೆಗೆ ಆತ್ಮಹತ್ಯೆಗೂ ಮುನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ್ದನ್ನು ಗಮನಿಸಿದ್ದರು. ಕೂಡಲೇ ಪೋಷಕರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದಾಗ ನೀರಿನ ಕಟ್ಟೆಯಲ್ಲಿ ವಿದ್ಯಾರ್ಥಿ ಧನುಷ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನ ಕಟ್ಟೆಯಿಂದ ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಇನ್ನು ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ, ಧನುಷ್ ಆತ್ಮ*ಹ*ತ್ಯೆಗೆ ಮುನ್ನ ತನ್ನ ಮೊಬೈಲ್‌ನಲ್ಲಿ ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಜೊತೆಗಿನ ಫೋಟೋ ಹಾಕಿ ವಿದಾಯ ಸಂದೇಶವನ್ನು ಸ್ಟೇಟಸ್ ಆಗಿ ಹಾಕಿದ್ದ ವಿಷಯ ಬೆಳಕಿಗೆ ಬಂದಿದೆ. “ನೀನೇ ಖುಷಿಯಾಗಿರು, ನಾನು ಹೋಗ್ತಾ ಇದಿನಿ ಬಾಯ್… ಈ ಪ್ರಪಂಚನೇ ಬಿಟ್ಟು ಹೋಗ್ತಿದಿನಿ” ಎಂಬ ಹೃದಯಕಲಕುವ ಸಂದೇಶವನ್ನು ಆತ ಬರೆದಿದ್ದಾನೆ.

Shwetha M

Leave a Reply

Your email address will not be published. Required fields are marked *