ಕನ್ನಡಿಗನಿಗೆ ಡಿಚ್ಚಿ ಕೊಟ್ಟ ಡೋಗ್ರಾಗೆ ಬಿಸಿಸಿಐನಿಂದ ಶಿಕ್ಷೆ – ಅಶಿಸ್ತಿನ ವರ್ತನೆ ತೋರಿದ ಡೋಗ್ರಾಗೆ ಬಿತ್ತು ದಂಡ

ಕನ್ನಡಿಗನಿಗೆ ಡಿಚ್ಚಿ ಕೊಟ್ಟ ಡೋಗ್ರಾಗೆ ಬಿಸಿಸಿಐನಿಂದ ಶಿಕ್ಷೆ –  ಅಶಿಸ್ತಿನ ವರ್ತನೆ ತೋರಿದ ಡೋಗ್ರಾಗೆ ಬಿತ್ತು ದಂಡ

ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಕ್ಯಾಪ್ಟನ್ ಪರಸ್ ಡೋಗ್ರಾ ಅತಿರೇಕದ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ. ಪರಸ್ ಡೋಗ್ರಾ ಕೆವಿ ಅನೀಶ್​ ತಲೆಗೆ ಹೆಲ್ಮೆಟ್​ನಿಂದ ಡಿಚ್ಚಿ ಹೊಡೆದಿದ್ದಾರೆ. ಪಂದ್ಯದ ನಡುವೆ ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿತ್ತು. ಈ ಅಶಿಸ್ತಿನ ವರ್ತನೆಗೆ ಕೊನೆಗೂ ಬಿಸಿಸಿಐ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:ಕರ್ನಾಟಕದ ಆಟಗಾರರನ್ನು ಕೆಣಕಿದ ಜಮ್ಮುಕ್ಯಾಪ್ಟನ್ – ಅನೀಶ್ ಹೆಲ್ಮೆಟ್‌ಗೆ ಡಿಚ್ಚಿಕೊಟ್ಟು ಡೋಗ್ರಾ ಅತಿರೇಕದ ವರ್ತನೆ

ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಆಟದ ನಿಯಮದ ವಿರುದ್ಧ ನಡೆದುಕೊಂಡಿದ್ದರು.   ರಣಜಿ ಫೈನಲ್ ಪಂದ್ಯದ ಎರಡನೇ ದಿನದಾಟದಂದು ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ, ಜೆಕೆ ನಾಯಕ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಪರಾಸ್ ಡೋಗ್ರಾ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದನ್ನು ಗಮನಿಸಿದ ಅಂಪೈರ್​ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕೊನೆಗೂ ನಿಯಮ ಮುರಿದ ಡೋಗ್ರಾ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಂಡಿದೆ. ಬಿಸಿಸಿಐ  ಪರಸ್ ಡೋಗ್ರಾ ಅವರಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಿದೆ. ಅಲ್ಲದೆ ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.

Sulekha