2ನೇ ದಿನ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿದ J & K – ಆಲೌಟ್ ಮಾಡೋಕೆ ಕರ್ನಾಟಕ ಆಟಗಾರರ ಒದ್ದಾಟ

ರಣಜಿ ಟ್ರೋಫಿ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದ್ದು, ಕರ್ನಾಟಕಕ್ಕೆ ಸೋಲಿನ ಭೀತಿ ಎದುರಾಗಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಶುಭಂ ಪುಂಡಿರ್ (121) ಶತಕ ಬಾರಿಸಿದರೆ, ಯಾವರ್ ಹಸನ್ (88) ಮತ್ತು ಅಬ್ದುಲ್ ಸಮದ್ (61), ಕನ್ಹಯ್ಯ ವಾಧವನ್ (70), ಸಾಹಿಲ್ ಲೂತ್ರಾ (57) ಅರ್ಧಶತಕಗಳ ಕೊಡುಗೆ ನೀಡಿದ್ದಾರೆ. ಕರ್ನಾಟಕ ಆಟಗಾರರು ಜಮ್ಮು ಕಾಶ್ಮೀರವನ್ನ ಆಲೌಟ್ ಮಾಡೋಕೆ ಒದ್ದಾಡುತ್ತಿದೆ.
ಇನ್ನು ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನವಾದ ಇಂದು ಮೈದಾನದಲ್ಲೇ ಫೈಟ್ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ, ಅನುಭವಿ ಆಟಗಾರ ಪರಾಸ್ ಡೋಗ್ರಾ ಅವರು ಕರ್ನಾಟಕದ ಫೀಲ್ಡರ್‌ಗೆ ತಲೆಯಿಂದ ಗುದ್ದುವ ಮೂಲಕ ಕರ್ನಾಟಕ ಪ್ಲೇಯರ್‌ಗಳನ್ನು ಕೆಣಕಿದ್ದಾರೆ. ಜಮ್ಮು-ಕಾಶ್ಮೀರ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪ್ರಸಿದ್ಧ್ ಕೃಷ್ಣ ಅವರ ಎಸೆತವನ್ನು ಡೋಗ್ರಾ ಬೌಂಡರಿಗಟ್ಟಿದಾಗ, ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬದಲಿ ಆಟಗಾರ ಕೆ.ವಿ. ಅನೀಶ್ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಅನೀಶ್ ಸತತವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರಿಂದ ತಾಳ್ಮೆ ಕಳೆದುಕೊಂಡ ಡೋಗ್ರಾ, ನೇರವಾಗಿ ಅನೀಶ್ ಬಳಿ ತೆರಳಿ ತಮ್ಮ ಹೆಲ್ಮೆಟ್‌ನಿಂದ ಡಿಚ್ಚಿ ಹೊಡೆದಿದ್ದಾರೆ.
ಇದನ್ನೂ ಓದಿ: 5 ಮ್ಯಾಚ್.. 11 ಸಲ ಡಕ್ ಔಟ್ – ಟೀಂ ಇಂಡಿಯಾಗೆ ಆಟಗಾರರೇ ವಿಲನ್
ತಕ್ಷಣವೇ ಮಧ್ಯಪ್ರವೇಶಿಸಿದ ಮಯಾಂಕ್ ಅಗರ್ವಾಲ್ ಮತ್ತು ಅಂಪೈರ್‌ಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಓವರ್ ಮುಗಿದ ನಂತರ ಡೋಗ್ರಾ ಕ್ಷಮೆ ಕೇಳಿದರೂ, ಅನೀಶ್ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಪರಾಸ್ ಡೋಗ್ರಾ ವರ್ತನೆಯಿಂದ ಕೆರಳಿದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್, ಡೋಗ್ರಾ ವಿರುದ್ಧ ವಾಗ್ದಾಳಿ ನಡೆಸಿದರು. ಮೈದಾನದಲ್ಲಿ ರಾಹುಲ್ ಸತತವಾಗಿ ಡೋಗ್ರಾ ವಿರುದ್ಧ ಮಾತಿನ ಪ್ರಹಾರ ನಡೆಸುತ್ತಿದ್ದುದು ಕಂಡುಬಂದಿತು.

ನೋಡಿರಿ

