ವಿಶ್ವಕಪ್ ನಿಂದ ಪಾಕಿಸ್ತಾನ OUT – 1 ಪಂದ್ಯ ರದ್ದು.. 1 ಸೋಲು.. ಮುಂದೆ?
ಸೆಮೀಸ್ ಟಿಕೆಟ್ MAGIC ನಡೆಯುತ್ತಾ?

ವಿಶ್ವಕಪ್ ನಿಂದ ಪಾಕಿಸ್ತಾನ OUT – 1 ಪಂದ್ಯ ರದ್ದು.. 1 ಸೋಲು.. ಮುಂದೆ?ಸೆಮೀಸ್ ಟಿಕೆಟ್ MAGIC ನಡೆಯುತ್ತಾ?

ಟಿ-20 ವಿಶ್ವಕಪ್​ನಲ್ಲಿ ಸೂಪರ್ 8 ಪಂದ್ಯಗಳ ಹಂಗಾಮ ಜೋರಾಗಿದೆ. ಒಂದೊಂದು ಪಂದ್ಯಗಳ ರಿಸಲ್ಟ್ ಒಬ್ಬೊಬ್ರ ಲೆಕ್ಕಾಚಾರಗಳನ್ನ ಉಲ್ಟಾ ಮಾಡ್ತಿದೆ. ಆಲ್ರೆಡಿ ಗ್ರೂಪ್ 1​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ಬಿಗ್ ಮಾರ್ಜಿನ್​ನಲ್ಲಿ ಗೆದ್ದು ಮ್ಯಾಜಿಕ್ ಮಾಡಿದ್ರೆ ಅತ್ತ ಗ್ರೂಪ್ 2ನಲ್ಲಿ ಇಂಗ್ಲೆಂಡ್ ತಂಡ ಬ್ಯಾಕ್ ಟು ಬ್ಯಾಕ್ 2 ಪಂದ್ಯ ಗೆದ್ದು ಸೆಮೀಸ್ ಟಿಕೆಟ್ ಹೊಸ್ತಿಲಲ್ಲಿದೆ. ಇತ್ತ ಪಾಕಿಸ್ತಾನ ಆಲ್ಮೋಸ್ಟ್ ಟೂರ್ನಿಯಿಂದ ಹೊರಬೀಳೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ ಸಿಡಿದೆದ್ದ ಸ್ಮೃತಿ ಮಂಧಾನ  – ಅರ್ಧಶತಕದೊಂದಿಗೆ ವಿಶೇಷ ದಾಖಲೆ

ಗ್ರೂಪ್ ಸ್ಟೇಜ್​ನಲ್ಲಿ ಮೂರು ಪಂದ್ಯಗಳನ್ನ ಗೆದ್ದು ಭಾರತದ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ಈಗ ಸೂಪರ್ 8ನಲ್ಲೇ ಟೂರ್ನಿಗೆ ಗುಡ್ ಬೈ ಹೇಳೋ ಸ್ಟೇಜ್​ನಲ್ಲಿದೆ. ಮಂಗಳವಾರ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ನಡೆದ ಮ್ಯಾಚಲ್ಲಿ ಇಂಗ್ಲೆಂಡ್ ಹಾಗೇ ಪಾಕಿಸ್ತಾನ ನಡುವಿನ ಮ್ಯಾಚಲ್ಲಿ ಆಂಗ್ಲರ ಪಡೆ ಗೆದ್ದು ಬೀಗಿದೆ. ಆಲ್ರೆಡಿ ಲಂಕಾ ವಿರುದ್ಧ ವಿನ್ ಆಗಿದ್ದ ಇಂಗ್ಲೆಂಡ್ ಈಗ ಪಾಕ್ ವಿರುದ್ಧವೂ ಗೆದ್ದು 4 ಅಂಕಗಳೊಂದಿಗೆ ಸೆಮೀಸ್ ಟಿಕೆಟ್ ಫಿಕ್ಸ್ ಮಾಡಿಕೊಂಡಿದೆ. ಇತ್ತ ಪಾಕಿಸ್ತಾನ ಗೇಟ್​ಪಾಸ್ ಹೊಸ್ತಿಲಲ್ಲಿದೆ.

ಹ್ಯಾರಿ ಬ್ರೂಕ್ ಒನ್ ಮ್ಯಾನ್ ಶೋ.. ಸೆಮೀಸ್ ಗೆ ಇಂಗ್ಲೆಂಡ್!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಚೂಸ್ ಮಾಡಿಕೊಂಡ ಪಾಕಿಸ್ತಾನ 20 ಓವರ್​ಗಳಲ್ಲಿ 9 ವಿಕೆಟ್ ಕಳ್ಕೊಂಡು 164 ರನ್ಸ್ ಕಲೆ ಹಾಕಿತ್ತು. 165 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್​ ಆರಂಭದಲ್ಲೇ ಸಾಲು ಸಾಲು ವಿಕೆಟ್​ಗಳನ್ನ ಕಳ್ಕೊಳ್ತು. ಸಾಲ್ಟ್ ಡಕ್ ಔಟ್, ಬಟ್ಲರ್ 2 ರನ್, ಬೆಥೆಲ್ 8 ರನ್, ಟಾಮ್ 2 ರನ್, ಕರನ್ 16 ರನ್.. 58 ರನ್​ಗಳಿಗೆ 4 ವಿಕೆಟ್ ಕಳ್ಕೊಂಡಾಗಿತ್ತು. ಆದ್ರೆ ನಂಬರ್ 3ನಲ್ಲಿ ಆಡಿದ ಹ್ಯಾರಿ ಬ್ರೂಕ್ ಸಿಂಗಲ್ ಶೇರ್​ನಂತೆ ನಿಂತು ಪಾಕಿಸ್ತಾನಿಯರ ಬೆಂಡೆತ್ತಿದ್ರು. 51 ಎಸೆತಗಳಲ್ಲಿ 100 ರನ್ ಕಲೆ ಹಾಕಿದ್ರು. ಇತ್ತ ವಿಲ್ ಜಾಕ್ಸ್ 28 ರನ್ ಗಳಿಸಿ ಸಾಥ್ ಕೊಟ್ರು. ಅಂತಿಮವಾಗಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ಪಂದ್ಯವನ್ನ ಗೆದ್ದುಕೊಳ್ತು. ಈ ಮೂಲಕ ಸೆಮೀಸ್ ಟಿಕೆಟ್​ನೂ ಪಡ್ಕೊಂಡ್ರು. ಸೋ ಈಗ ಪಾಕಿಸ್ತಾನ ಸೆಮಿಫೈನಲ್​ಗೆ ಹೋಗ್ಬೇಕು ಅಂದ್ರೆ ಪವಾಡವೇ ನಡೀಬೇಕಿದೆ.

ಲಂಕಾ ವಿರುದ್ಧ ಗೆದ್ರೂ ಪಾಕ್ ಗೆ ಸಿಗಲ್ಲ ಸೆಮೀಸ್ ಟಿಕೆಟ್?

ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡ್ಲಾಗಿದೆ. ಈಗ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಸೋತಿದೆ. ನೆಕ್ಸ್​ಟ್ ಲಂಕಾ ವಿರುದ್ಧ ಕೊನೇ ಮ್ಯಾಚ್ ಆಡಿದ್ರೂ 3 ಅಂಕ ಅಷ್ಟೇ ಆಗುತ್ತೆ.

ಪಾಕ್ ಸೆಮೀಸ್ ಟಿಕೆಟ್ ಲೆಕ್ಕಾಚಾರ!

ಫೆ.28ಕ್ಕೆ ಶ್ರೀಲಂಕಾ ವಿರುದ್ಧ ಮಸ್ಟ್ & ಶುಡ್ ಗೆಲ್ಲಲೇಬೇಕು

ನ್ಯೂಝಿಲೆಂಡ್ ತಂಡ ಲಂಕಾ & ಇಂಗ್ಲೆಂಡ್ ವಿರುದ್ಧ ಸೋಲಬೇಕು

ಒಟ್ಟು 3 ಅಂಕಗಳೊಂದಿಗೆ ಪಾಕಿಸ್ತಾನ ಸೆಮಿಫೈನಲ್​ ಗೇರಬಹುದು

ನ್ಯೂಝಿಲೆಂಡ್ ಒಂದು ಪಂದ್ಯ ಗೆದ್ದರೆ ನೆಟ್ ರನ್ ರೇಟ್ ನಲ್ಲಿ ನಿರ್ಧಾರ

ಲಂಕಾ ವಿರುದ್ಧದ ಕೊನೇ ಪಂದ್ಯ ಮಳೆಯಿಂದ ರದ್ದಾದ್ರೆ ಪಾಕ್ ಔಟ್

ಪಾಕಿಸ್ತಾನ ಲಂಕಾ ವಿರುದ್ಧ ಗೆಲ್ಲೋದೇ ಡೌಟ್ ಇದೆ. ಗೆದ್ರೂ ಬೇರೆ ತಂಡಗಳ ಸೋಲು ಗೆಲುವನ್ನ ಲೆಕ್ಕಾಚಾರ ಹಾಕಿಕೊಳ್ತಾ ಕೂರಬೇಕು. ಬಟ್ ಅದೆಲ್ಲ ಆಗದೇ ಇರೋ ಮಾತು. ಸೋ 95 ಪರ್ಸೆಂಟ್ ಆಲ್ರೆಡಿ ಪಾಕಿಸ್ತಾನ ಟೂರ್ನಿಗೆ ಗುಡ್ ಬೈ ಹೇಳೋದು ಕನ್ಫರ್ಮ್ ಆಗಿದೆ. ಇದಕ್ಕೂ ಮೀರಿ ಸೆಮೀಸ್ ಟಿಕೆಟ್ ಸಿಗ್ಬೇಕು ಅಂದ್ರೆ ಲಕ್ ಮೇಲಷ್ಟೇ ಡಿಪೆಂಡ್ ಆಗ್ಬೇಕು.

Shantha Kumari

Leave a Reply

Your email address will not be published. Required fields are marked *