5 ಮ್ಯಾಚ್.. 11 ಸಲ ಡಕ್ ಔಟ್ – ಟೀಂ ಇಂಡಿಯಾಗೆ ಆಟಗಾರರೇ ವಿಲನ್
ಸೆಮೀಸ್ ಟಿಕೆಟ್ ಗೆ ಇರೋ ಸಮಸ್ಯೆ ಏನು?

5 ಮ್ಯಾಚ್.. 11 ಸಲ ಡಕ್ ಔಟ್ – ಟೀಂ ಇಂಡಿಯಾಗೆ ಆಟಗಾರರೇ ವಿಲನ್ಸೆಮೀಸ್ ಟಿಕೆಟ್ ಗೆ ಇರೋ ಸಮಸ್ಯೆ ಏನು?

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸೆಮಿಫೈನಲ್ ಟಿಕೆಟ್ ರೇಸ್ ಕಗ್ಗಂಟಾಗಿದೆ.. ಹಾಗಂತ ಸಾಧ್ಯನೇ ಇಲ್ಲ ಅಂತಲ್ಲ. ಬಟ್ ಅದಕ್ಕೆ ಟೀಂ ಎಫರ್ಟ್ ಜೊತೆ ಲಕ್ ಕೂಡ ಮ್ಯಾಟ್ರ್ ಆಗುತ್ತೆ. ಸೂಪರ್ 8 ಹಂತದ ಮುಂದಿನ 2 ಪಂದ್ಯಗಳಲ್ಲಿ ಭಾರತ ಭರ್ಜರಿಯಾಗಿ ಗೆಲ್ಬೇಕು ಅಂದ್ರೆ ತಂಡದಲ್ಲಿನ ಕೆಲ ವೀಕ್​ನೆಸ್​​ಗಳನ್ನ ಮೊದಲು ಸರಿ ಮಾಡಿಕೊಳ್ಬೇಕು. ಅದ್ರಲ್ಲೂ ಡಕ್​ಔಟ್ ಸುಳಿಯಿಂದ ಬಿಸಿಡಿಕೊಳ್ಬೇಕು.

ಇದನ್ನೂ ಓದಿ : ರಿಂಕು ಸಿಂಗ್‌ ತಂದೆ ಆರೋಗ್ಯ ಸ್ಥಿತಿ ಗಂಭೀರ! – ಟೀಂ ಇಂಡಿಯಾ ಕ್ಯಾಂಪ್ ತೊರೆದ ಪ್ಲೇಯರ್!

ಗ್ರೂಪ್​ 1ನಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಬಿಗ್ ಮಾರ್ಜಿನ್​ನಿಂದ ಗೆದ್ದು ನೆಟ್ ರನ್​ರೇಟ್​ನಲ್ಲಿ ಧೂಳೆಬ್ಬಿಸಿದ್ದಾರೆ. ಸೋ ಮುಂದಿನ ಪಂದ್ಯಗಳಲ್ಲಿ ಒಂದೊಂದು ಮ್ಯಾಚ್ ಗೆದ್ಕೊಂಡ್ರೂ ಅವ್ರಿಗೆ ಸೆಮೀಸ್ ಟಿಕೆಟ್ ಚಾನ್ಸಸ್ ಜಾಸ್ತಿ ಇರುತ್ತೆ. ಆದ್ರೆ ಈಗ ಭಾರತ ಮುಂದಿನ ಎರಡೂ ಪಂದ್ಯಗಳನ್ನ ದೊಡ್ಡ ಅಂತರದಲ್ಲಿ ಗೆಲ್ಬೇಕು. ದಾಖಲೆಯ ಗೆಲುವು ಸಿಗ್ಬೇಕು. ಸಿಕ್ರೂ ಉಳಿದ ತಂಡಗಳ ಜೊತೆ ಕ್ಯಾಲ್ಕುಲೇಟ್ ಮಾಡ್ಬೇಕು. ಭಾರತದ ಈ ಸಂದಿಗ್ಧ ಸ್ಥಿತಿಗೆ ಕಾರಣವೇ ಆಟಗಾರರ ಕಳಪೆ ಪ್ರದರ್ಶನ. ಸೋತಿರೋದು ಸೌತ್ ಆಫ್ರಿಕಾ ವಿರುದ್ಧ ಮಾತ್ರವೇ ಆದ್ರೂ ಈ ಬಾರಿಯ ಟೂರ್ನಿಯಲ್ಲಿ ಭಾರತದ ಆಟಗಾರರು ಸೊನ್ನೆ ಸುತ್ತೋದ್ರಲ್ಲೇ ದಾಖಲೆ ಬರೆದಿದ್ದಾರೆ.

5 ಪಂದ್ಯ.. 11 ಡಕ್.. ಸೊನ್ನೆಯಲ್ಲೂ ಭಾರತ ನಂಬರ್ 1

10ನೇ ಆವೃತ್ತಿಯ ವಿಶ್ವಕಪ್​ನಲ್ಲಿ ಯಾವ ತಂಡ ಟ್ರೋಫಿ ವಿನ್ನಿಂಗ್ ಫೇವರೆಟ್ ಟೀಂ ಆಗಿತ್ತೋ ಅದೇ ಭಾರತ ಈಗ ಡಕ್ ಔಟ್​ನಲ್ಲಿ ನಂಬರ್ 1 ಆಗಿದೆ. ಭಾರತಕ್ಕೆ ಕಾಡ್ತಿರೋ ಅತೀ ದೊಡ್ಡ ಸಮಸ್ಯೆ ಅಂದ್ರೆ ಇದೇ ನೋಡಿ. ಪ್ರಸ್ತುರ ನಡೆಯುತ್ತಿರೋ ಮಾರ್ಕ್ಯೂ ಈವೆಂಟ್‌ನಲ್ಲಿ ಭಾರತದ ಪರ 11 ಬ್ಯಾಟರ್​ಗಳು ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಭಾರತವು ಅತಿ ಹೆಚ್ಚು ಸೊನ್ನೆಗಳನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಫಸ್ಟ್ ಪ್ಲೇಸ್​ನಲ್ಲಿದೆ.  ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ 3 ಸಲ ಝೀರೋಗೆ ಔಟ್ ಆಗಿದ್ದಾರೆ. 3 ಪಂದ್ಯಗಳನ್ನ ಆಡಿರೋ ಆಕ್ಷರ್ ಪಟೇಲ್ 2 ಸಲ ಡಕ್ ಔಟ್.. ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ ಡಕ್ ಔಟ್. ಶಿವಂ ದುಬೆ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಕೂಡ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಭಾರತದ ಪರ 11 ಆಟಗಾರರು ಡಕ್ ಔಟ್ ಆಗಿದ್ದಾರೆ. ಅದಕ್ಕಿಂತ ಶಾಕಿಂಗ್ ಅಂದ್ರೆ ಓಪನರ್​ಗಳ ಜೀರೋ ರೇಸ್.

5 ಪಂದ್ಯ.. 4 ಬಾರಿ ಓಪನರ್ ಡಕ್ ಔಟ್!

ಭಾರತದ ಪರ ಓಪನರ್​ಗಳೇ ಡಕ್ ಔಟ್ ಆಗ್ತಿರೋದೇ ದೊಡ್ಡ ತಲೆನೋವಾಗಿದೆ. ಕಳೆದ 5 ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್​ಗಳಲ್ಲಿ ಒಬ್ಬ ಓಪನರ್​ ಡಕ್ ಔಟ್ ಆಗಿದ್ದಾರೆ. ಇದೇ ದೊಡ್ಡ ಹೊಡೆತ ಕೊಡ್ತಾ ಇರೋದು. ಗ್ರೂಪ್ ಸ್ಟೇಜ್ ವೇಳೆ ಮೂರು ಪಂದ್ಯಗಳಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ ಡಕ್ ಔಟ್ ಆಗಿದ್ರು. ಅಮೆರಿಕ, ಪಾಕಿಸ್ತಾನ ಹಾಗೇ ನೆದರ್ ಲ್ಯಾಂಡ್ ವಿರುದ್ಧ. ಒಂದೂ ರನ್ಸ್ ಬಂದಿಲ್ಲ. ನಮೀಬಿಯಾ ವಿರುದ್ಧ ಅಭಿಷೇಕ್ ಆಡಿರಲಿಲ್ಲ. ಆವತ್ತು ಸಂಜು ಮತ್ತು ಕಿಶನ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಸೋ ಓಪನರ್ಸ್ ಡಕ್ ಔಟ್ ಆಗಿಲ್ಲ. ನೆಕ್ಸ್ಟ್ ಸೂಪರ್ 8 ಹಂತದಲ್ಲಿ ಇಶಾನ್ ಕಿಶನ್ ಡಕ್ ಔಟ್. ಸೌತ್ ಆಫ್ರಿಕಾ ವಿರುದ್ಧ 4 ಬಾಲ್ ಫೇಸ್ ಮಾಡಿ ಖಾತೆಯನ್ನೂ ತೆರೆಯದೇ ಕ್ಯಾಚ್ ಕೊಟ್ರು. ಓಪನರ್​ಗಳ ಇದೇ ಡಕ್​ಔಟ್ ಸರಣಿಯೇ ಭಾರತಕ್ಕೆ ಅತಿದೊಡ್ಡ ತಲೆನೋವಾಗಿದೆ.

ಭಾರತಕ್ಕಿರೋ ಸವಾಲುಗಳು!

  1. ಟಾಪ್ ಆರ್ಡರ್ ರನ್ಸ್ ಬೇಕು, ಸ್ಕ್ರೈಕ್ ರೇಟ್ ಬೆಟರ್ ಆಗ್ಬೇಕು
  2. ಶಿವಂ ದುಬೆ ಬಿಟ್ರೆ ಮಿಡಲ್ ಆರ್ಡರ್ ನಲ್ಲೂ ರನ್ಸ್ ಬರ್ತಿಲ್ಲ
  3. ಕ್ಯಾಚ್ ಮಿಸ್, ಮಿಸ್ ಫೀಲ್ಡಿಂಗ್ ಅಲರ್ಟ್ ಆಗಬೇಕು
  4. ಕ್ಯಾಪ್ಟನ್ ಬೌಲಿಂಗ್ ನಲ್ಲಿ ವೇರಿಯೇಷನ್ಸ್ ಮಾಡಬೇಕು
  5. ಎಲ್ಲಕ್ಕಿಂತ ಮುಖ್ಯವಾಗಿ ಓವರ್ ಕಾನ್ಫಿಡೆನ್ಸ್ ಬಿಟ್ಟು ಆಡಬೇಕು

Shantha Kumari