ಎರಡು ಬಾರಿ ಮದುವೆಯಾಗಲಿದ್ದಾರೆ ವಿರೋಶ್‌! –  ರಶ್ಮಿಕಾ, ವಿಜಯ್‌ ಈ ನಿರ್ಧಾರ ಯಾಕೆ?

ಎರಡು ಬಾರಿ ಮದುವೆಯಾಗಲಿದ್ದಾರೆ ವಿರೋಶ್‌! –  ರಶ್ಮಿಕಾ, ವಿಜಯ್‌ ಈ ನಿರ್ಧಾರ ಯಾಕೆ?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಜೋಡಿ ಇದೀಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ಫೆಬ್ರವರಿ 26ರಂದು ಈ ಜೋಡಿ ವಿವಾಹ ನಡೆಯಲಿದೆ. ಈಗಾಗಲೇ ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಇದೀಗ ಮದುವೆ ಬಗ್ಗೆ ಮತ್ತೊಂದು ಅಪ್‌ಡೇಟ್‌ ಸಿಕ್ಕಿದೆ. ರಶ್ಮಿಕಾ, ವಿಜಯ್‌ ಎರಡು ಬಾರಿ ಮದುವೆಯಾಗಲಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ ಭೀತಿ! – ತಾಲೂಕಿನ 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ!

ರಾಜಸ್ಥಾನದ ಉದಯಪುರದ ಬಳಿಯ ಐಶಾರಾಮಿ ರೆಸಾರ್ಟ್​​ನಲ್ಲಿ ರಶ್ಮಿಕಾ, ವಿಜಯ್‌ ಮದುವೆ ಆಗ್ತಿದ್ದಾರೆ. ಇಂದು ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ ವಿರೋಶ್‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದೂ ಕೂಡ ಎರಡು ಬಾರಿ ಮದುವೆಯಾಗಲಿದ್ದಾರೆ.

ನಾಳೆ (ಫೆಬ್ರವರಿ 26) ಬೆಳಿಗ್ಗೆ ಮೊದಲಿಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ  ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇಬ್ಬರೂ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ. ಈ ಮಾದರಿಯಿಂದ, ಎರಡೂ ಕಡೆಯ ಕುಟುಂಬದವರಿಗೆ ಪರಸ್ಪರರ ಕುಟುಂಬಗಳ ಸಂಪ್ರದಾಯಗಳ ಅರಿವು, ಪರಿಚಯ ಆದಂತಾಗುತ್ತದೆ. ಮತ್ತು ಎರಡೂ ಕುಟುಂಬದವರು ಪರಸ್ಪರರ ಸಂಪ್ರದಾಯ, ಆಚರಣೆಗಳನ್ನು ಗೌರವಿಸಿದಂತೆ ಆಗುತ್ತದೆ. ಹಾಗಾಗಿಯೇ ಎರಡು ಬಾರಿ ಮದುವೆ ಆಗುತ್ತಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.

ಇನ್ನು ಮಾರ್ಚ್ 4 ರಂದು ಹೈದರಾಬಾದ್​​ನ ತಾಜ್ ಕೃಷ್ಣ ಹೋಟೆಲ್​​ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದೆ. ರಿಸೆಪ್ಷನ್​​ನಲ್ಲಿ ಚಿತ್ರರಂಗದ ಹಲವಾರು ಮಂದಿ ಗಣ್ಯರು ಮತ್ತು ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ.

Shwetha M

Leave a Reply

Your email address will not be published. Required fields are marked *