ಕಿಶನ್ ಒನ್ ಡೌನ್.. ತಿಲಕ್ ಔಟ್! – ತಂಡದಲ್ಲಿ ಇದ್ದೂ ಇಲ್ಲದಾದ ರಿಂಕು
ZIM ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಸ್ಕೂಲ್ ಟೆಸ್ಟ್ಗಳಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತಗೊಂಡು ಮೇನ್ ಎಕ್ಸಾಮ್ನಲ್ಲಿ ಫೇಲ್ ಆದ್ರಂತೆ. ಹಂಗಾಗಿದೆ ಸದ್ಯ ಟೀಂ ಇಂಡಿಯಾ ಕಥೆ. 2024ರ ಟಿ-20 ವಿಶ್ವಕಪ್ನಿಂದ ಹಿಡಿದು 2026ರ ವಿಶ್ವಕಪ್ವರೆಗೆ ಒಂದೇ ಒಂದು ಸರಣಿನೂ ಸೋಲದಂತೆ ಬಂದವ್ರು ಈಗ ಮೇನ್ ಮ್ಯಾಚಲ್ಲೇ ಪಲ್ಟಿ ಹೊಡೆದಿದ್ದಾರೆ. ಇದ್ರ ಎಫೆಕ್ಟ್ ಸೆಮೀಸ್ ಟಿಕೆಟ್ ಮೇಲೆ ತಟ್ಟಿದೆ. ಈಗ ಗುರುವಾರ ಜಿಂಬಾಬ್ವೆ ವಿರುದ್ಧ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕಿದೆ. ಬಿಗ್ ಮಾರ್ಜಿನ್ ವಿಕ್ಟರಿ ಬೇಕಿದೆ. ಈ ಪಂದ್ಯ ಅಂದುಕೊಂಡಂತೆ ಗೆಲ್ಬೇಕು ಅಂದ್ರೆ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಆಗ್ಬೇಕಿದೆ. ಮಾಜಿ ಕ್ರಿಕೆಟರ್ಸ್ ಕೂಡ ಒಂದಷ್ಟು ಸಜೇಷನ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : 7 ಸಿಕ್ಸ್ .. 7 ಫೋರ್.. ಶಿಮ್ರೋನ್ ಹೆಟ್ಮೆಯರ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಉಡೀಸ್
ಗೇಮ್ ಅಂದ್ಮೇಲೆ ಸೋಲು ಗೆಲುವು ಕಾಮನ್. ಪ್ರತೀ ಮ್ಯಾಚ್ನೂ ಗೆಲ್ಬೇಕು ಅಂತಾ ಹೇಳೋಕಾಗಲ್ಲ. ಆದ್ರೆ ಬೇಡದೇ ಇರೋ ಟೈಮಲ್ಲಿ ಬೇಕಾಬಿಟ್ಟಿಯಾಗಿ ಸೋತ್ರೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತೆ. ಈಗ ಆಗ್ತಿರೋದೂ ಅದೇ. ಸೌತ್ ಆಫ್ರಿಕಾ ವಿರುದ್ಧ ಅಟ್ಲೀಸ್ಟ್ ಫೈಟ್ ಕೊಟ್ಟು ಸೋಲ್ಬೇಕಿತ್ತು. ಕಂಪ್ಲೀಟ್ ಸರೆಂಡರ್ ಆಗಿದ್ದಕ್ಕೆ ಸೆಮೀಸ್ ಟಿಕೆಟ್ಟೇ ಮಿಸ್ ಆಗೋ ಹಂತದಲ್ಲಿದೆ. ಈಗ ವೆಸ್ಟ್ ಇಂಡೀಸ್ ಪಡೆಯ ರಣಾರ್ಭಟ ನೋಡಿದ್ರೆ ಕ್ರೂಶಿಯಲ್ ಸ್ಟೇಜ್ನಲ್ಲಿದ್ದ ಭಾರತ ಕ್ರಿಟಿಕಲ್ ಕಂಡೀಷನ್ಗೆ ಜಾರಿದೆ. ಆಲ್ಮೋಸ್ಟ್ ಐಸಿಯು ಸ್ಟೇಜ್ ನಲ್ಲಿದ್ದು ಕಂ ಬ್ಯಾಕ್ ಮಾಡ್ಬೇಕು ಜಿಂಬಾಬ್ವೆ ವಿರುದ್ಧದ ಮ್ಯಾಚಲ್ಲಿ ಶತಾಯ ಗತಾಯ ಗೆಲ್ಬೇಕು. ಬರೀ ಗೆದ್ರೆ ಸಾಕಾಗಲ್ಲ ಅವ್ರು 20 ಓವರ್ಗಳಿಗೆ ಮ್ಯಾಚ್ ಆಡಿದ್ರೆ ಇವ್ರು 10 ಓವರ್ ಮ್ಯಾಚ್ ಅನ್ನೋ ಥರ ಪರ್ಫಾಮ್ ಮಾಡ್ಬೇಕು. ಆಗಷ್ಟೇ ಗೆಲ್ಲೋಕೆ ಸಾಧ್ಯ.
ಭಾರತದ ಗೆಲುವು ಹೇಗಿರಬೇಕು?
ಭಾರತ 200 ರನ್ ಗಳಿಸಿದ್ರೆ ಜಿಂಬಾಬ್ವೆ 120 ರನ್ಸ್ ಒಳಗೆ ಆಲೌಟ್
ಜಿಂಬಾಬ್ವೆ 150 ರನ್ಸ್ ಹೊಡೆದ್ರೆ ಭಾರತ 10, 11 ಓವರ್ ನಲ್ಲೇ ರೀಚ್
ಗೆಲುವಿನ ಪಾಯಿಂಟ್ಸ್ ಜೊತೆ ನೆಟ್ರನ್ ರೇಟ್ ಇಂಪ್ರೂ ಆಗ್ಬೇಕು. ಇಂಥಾ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಕೂಡ ಅಷ್ಟೇ ಬಲಿಷ್ಠ ಆಗಿರಬೇಕಾಗುತ್ತೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮೂರು ಬದಲಾವಣೆಗಳನ್ನ ಮಾಡಿ ಅಂತಾ ಕ್ರಿಕೆಟ್ ಎಕ್ಸ್ಪರ್ಟ್ಸ್ ಹೇಳಿದ್ದಾರೆ.
ಭಾರತದ ವಿನ್ನಿಂಗ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ಶಿವಂ ದುಬೆ
ಅಕ್ಷರ್ ಪಟೇಲ್
ಕುಲ್ದೀಪ್ ಯಾದವ್
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ಇಲ್ಲಿ ಕಳೆದ ಪಂದ್ಯಕ್ಕೂ ಈ ಪಂದ್ಯಕ್ಕೂ ಮೂರು ಚೇಂಜಸ್ ಕಾಣ್ಬೋದು. ತಿಲಕ್ ಬದಲಿಗೆ ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಹಾಗೇ ರಿಂಕು ಬದಲಿಗೆ ಕುಲ್ದೀಪ್ ಯಾದವ್ರನ್ನ ಕಣಕ್ಕಿಳಿಸಬೇಕು ಅಂತಾ ಸಜೇಷನ್ ಕೊಟ್ಟಿದ್ದಾರೆ. ತಿಕಲ್ ಬ್ಯಾಟಿಂಗ್ನಲ್ಲಿ ಡಲ್ ಆಗಿದ್ದಾರೆ. 5 ಪಂದ್ಯಗಳಿಂದ 107 ರನ್ಸ್ ಕಲೆ ಹಾಕಿದ್ದಾರೆ. ಅದೂ ಕೂಡ ಕೇವಲ 118.89 ಸ್ಟ್ರೈಕ್ರೇಟ್ನಲ್ಲಿ. 5 ಪಂದ್ಯಗಳಿಂದ ಬಂದಿರೋದೇ 3ಸಿಕ್ಸ್.. ಅದೂ ನಂಬರ್ 3 ಬ್ಯಾಟ್ಸ್ಮನ್. ಇನ್ನು ರಿಂಕು ಸಿಂಗ್ ಫಿನಿಶರ್ ರೋಲ್ನಲ್ಲಿದ್ದುಕೊಂಡು 5 ಮ್ಯಾಚಿಂದ 24 ರನ್ಸ್ ಹೊಡೆದಿದ್ದಾರೆ. ಸೋ ರಿಂಕು ಆಡಿಸೋದಕ್ಕಿಂತ ಕುಲ್ದೀಪ್ ಆಡಿದ್ರೆ ಅಟ್ಲೀಸ್ಟ್ ಬೌಲಿಂಗ್ನಲ್ಲಾದ್ರೂ ಯೂಸ್ ಆಗ್ತಾರೆ. ಇನ್ನು ವಾಷಿಂಗ್ಟನ್ ಸುಂದರ್ ಎರಡು ಮ್ಯಾಚ್ ಆಡಿ ಎರಡ್ರಲ್ಲೂ ಒಂದೂ ವಿಕೆಟ್ ಇಲ್ಲ. ಸೋ ಈ ಮೂವರು ಆಡದೆ ಇರೋದೇ ಬೆಟರ್. ಆದ್ರೆ ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು. ಯಾವ ಕಾಂಬಿನೇಷನ್ ಕಣಕ್ಕಿಳಿಸಿದ್ರೂ ಕೊನೆಗೆ ಹೇಗೆ ಪರ್ಫಾಮ್ ಮಾಡಿದ್ರೂ ಅನ್ನೋದು ಮುಖ್ಯ ಆಗುತ್ತೆ. ಯಾಕಂದ್ರೆ ಡು ಆರ್ ಡೈ ಸ್ಟೇಜ್ನಲ್ಲಿದ್ದಾರೆ.

ನೋಡಿರಿ

