ಏಪ್ರಿಲ್ 1 ರಿಂದ ಪಾನ್ ಕಾರ್ಡ್ ಬಳಕೆಗೆ ಹೊಸ ನಿಯಮಗಳು ಜಾರಿ – ಹೊಸ ರೂಲ್ಸ್ ಏನು?

ನಿಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಲ್ಲಿ ಪಾನ್ ಕಾರ್ಡ್ ತುಂಬಾ ಮುಖ್ಯ. ಆದ್ರೆ ಆದಾಯ ತೆರಿಗೆ ಇಲಾಖೆಯು ಪಾನ್ ಕಾರ್ಡ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ. ಏಪ್ರಿಲ್ 1, 2026 ರಿಂದ ದೇಶದಾದ್ಯಂತ ಹೊಸ ನಿಯಮಗಳು ಜಾರಿಗೆ ಬರಲಿದೆ.
ಇದನ್ನೂ ಓದಿ: ಭಾರತಕ್ಕೆ ಸಿಗಲ್ವಾ ಸೆಮೀಸ್ ಟಿಕೆಟ್? – ಯಾರು ಗೆಲ್ಬೇಕು.. ಯಾರು ಸೋಲ್ಬೇಕು?
ಹಳೆಯ ತೆರಿಗೆ ಪಾವತಿ ಕಾನೂನನ್ನು ಬದಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಕಾಯಿದೆ ಜಾರಿ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಾನ್ ಕಾರ್ಡ್ ಬಳಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಗದು ವಹಿವಾಟು, ವಾಹನಗಳ ಖರೀದಿ ಮತ್ತು ಆಸ್ತಿ ವರ್ಗಾವಣೆಗೆ ಪನ್ ಕಾರ್ಡ್ ಸಲ್ಲಿಸುವ ಮಿತಿಯನ್ನು ಹೆಚ್ಚಿಸಿದೆ. ಮತ್ತು ಈಗಾಗಲೇ ಜಾರಿಯಲ್ಲಿರುವ ನಿಯಮಗಳಲ್ಲಿ ಕೆಲವೊಂದನ್ನು ಬದಲಾವಣೆ ಮಾಡಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಬಿಲ್ ಗಳು
ಹೋಟೆಲ್ ಬಿಲ್, ರೆಸ್ಟೋರೆಂಟ್ ಬಿಲ್, ಸಮಾವೇಶ ಅಥವಾ ರ್ಯಾಲಿ, ಬ್ಯಾಂಕ್ವೆಟ್ ಹಾಲ್ ಮುಂತಾದ ಬಿಲ್ ಗಳನ್ನು ಪಾವತಿಸುವಾಗ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಪಾವತಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದೆ. ಈ ಹಿಂದೆ ಪಾನ್ ಮಿತಿ 50 ಸಾವಿರ ರೂಪಾಯಿಗಳಾಗಿತ್ತು. ಇದೀಗ ಕೇಂದ್ರ ಸರ್ಕಾರ ಈ ಮಿತಿಯನ್ನು ಹೆಚ್ಚಳ ಮಾಡಿ ಪ್ರತಿಯೊಬ್ಬರೂ ಪಾನ್ ಕಾರ್ಡ್ ಪಾವತಿ ಕಡ್ಡಾಯಗೊಳಿಸಲಿದೆ.
ವಿಮಾ ಪಾಲಿಸಿ ಕ್ಷೇತ್ರ
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ನಿಯಮಗಳ ಪ್ರಕಾರ ವಿಮಾ ಪಾಲಿಸಿಗಳ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರೀಮಿಯಂ ಪಾವತಿಸುವ ಸಂದರ್ಭದಲ್ಲಿ ಮಾತ್ರವಲ್ಲದೆ, ವಿಮಾ ಕಂಪನಿಗಳೊಂದಿಗೆ ಖಾತೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೂ ಪಾನ್ ಕಾರ್ಡ್ ಕಡ್ಡಾಯಗೊಳಿಸಬಹುದು. ಇದರಿಂದ ತೆರೆಗೆ ವಂಚಕರನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ರಿಯಲ್ ಎಸ್ಟೇಟ್
ಯಾವುದೇ ಸ್ಥಿರ ಆಸ್ತಿಯ ಖರೀದಿ/ಮಾರಾಟ/ಉಡುಗೊರೆ ಅಥವಾ ಜಂಟಿ ಅಭಿವೃದ್ಧಿ ಒಪ್ಪಂದದಂತಹ ಸಂದರ್ಭಗಳಲ್ಲಿ, ನಗದು ವಹಿವಾಟಿನ ಮೌಲ್ಯವು ರೂ. 20 ಲಕ್ಷ ಮೀರಿದರೆ ಪಾನ್ ಕಾರ್ಡ್ ಅಗತ್ಯವಿರುತ್ತದೆ, ಪ್ರಸ್ತುತ ಮಿತಿ ರೂ. 10 ಲಕ್ಷ. ಇದರರ್ಥ ರೂ. 2 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗಳ ನೋಂದಣಿಗೆ ಪಾನ್ ಕಾರ್ಡ್ ಕಡ್ಡಾಯವಾಗಿರುವುದಿಲ್ಲ. ಇನ್ನು ಮುಂದೆ ಇದು ಕಡ್ಡಾಯಗೊಳಿಸಲಾಗಿದೆ.
ಮೋಟಾರು ವಾಹನಗಳ ಖರೀದಿ
ಮೋಟಾರು ವಾಹನ ಕಾಯ್ದೆಯಡಿ ನೋಂದಣಿಗೆ ಅಗತ್ಯವಿರುವ 5 ಲಕ್ಷ ರೂ.ಗಿಂತ ಹೆಚ್ಚಿನ ಎಲ್ಲಾ ವಹಿವಾಟುಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. 5 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳ ಖರೀದಿಗೆ ಪಾನ್ ಕಾರ್ಡ್ ಅಗತ್ಯವಿಲ್ಲ. ಆದರೆ, ಅದಕ್ಕಿಂತ ಮೇಲ್ಪಟ್ಟ ವಾಹನಗಳ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ಠೇವಣಿ, ಹಿಂಪಡೆಯುವಿಕೆ
ಒಂದು ಹಣಕಾಸು ವರ್ಷದಲ್ಲಿ ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗೆ ಪಾನ್ ಕಡ್ಡಾಯವಾಗಿದೆ.
ಪ್ರಸ್ತುತ, ಈ ಮಿತಿಯನ್ನು 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಠೇವಣಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಒಂದು ಹಣಕಾಸು ವರ್ಷದಲ್ಲಿ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗೆ ಪಾನ್ ಕಾರ್ಡ್ ಕಡ್ಡಾಯವಾಗಲಿದೆ. ಇದು ಏಪ್ರಿಲ್ 1 ರಿಂದ ಜಾರಿಯಾಗಲಿದೆ.

ನೋಡಿರಿ

