ಭಾರತಕ್ಕೆ ಸಿಗಲ್ವಾ ಸೆಮೀಸ್ ಟಿಕೆಟ್? – ಯಾರು ಗೆಲ್ಬೇಕು.. ಯಾರು ಸೋಲ್ಬೇಕು?
ಸೌತ್ ಆಫ್ರಿಕಾನೇ ಈಗ ಆಪತ್ಬಾಂಧವ

ಭಾರತಕ್ಕೆ ಸಿಗಲ್ವಾ ಸೆಮೀಸ್ ಟಿಕೆಟ್? – ಯಾರು ಗೆಲ್ಬೇಕು.. ಯಾರು ಸೋಲ್ಬೇಕು?ಸೌತ್ ಆಫ್ರಿಕಾನೇ ಈಗ ಆಪತ್ಬಾಂಧವ

ಸೌತ್ ಆಫ್ರಿಕಾ ವಿರುದ್ಧದ ಸೂಪರ್ -8 ಮ್ಯಾಚಲ್ಲಿ ಭಾರತ ಸೋಲ್ತು ಅನ್ನೋದಕ್ಕಿಂತ 76 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತ್ರಲ್ಲ ಅದೇ ದೊಡ್ಡ ಡ್ಯಾಮೇಜ್ ಮಾಡ್ತಿದೆ. ಇದೊಂದು ಸೋಲು ಸೆಮಿಫೈನಲ್ ಟಿಕೆಟ್​ನೂ ಕಳ್ಕೊಳ್ಳೋ ಆತಂಕ ತಂದಿಟ್ಟಿದೆ. ಹಾಗಂತ ಭಾರತಕ್ಕೆ ಚಾನ್ಸೇ ಇಲ್ಲ ಅಂತಿಲ್ಲ. ಆದ್ರೀಗ ಭಾರತ ತಾನು ಗೆಲ್ಲೋದಲ್ದೇ ಬೇರೆಯವ್ರ ಸೋಲು ಗೆಲುವನ್ನೂ ಲೆಕ್ಕಾಚಾರ ಮಾಡಿಕೊಳ್ಬೇಕು. ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಸಿಗೋಕೆ ಇರೋ ದಾರಿ ಏನು? ಹೇಗೆದೆ ಲೆಕ್ಕಾಚಾರ? ಭಾರತವನ್ನು ಸೋಲಿಸಿರೋ ಅದೇ ಸೌತ್ ಆಫ್ರಿಕಾನೇ ಹೇಗೆ ಆಪತ್ಬಾಂಧವ ಆಗ್ಬೇಕು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ –   ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಉಗ್ರ ಹೋರಾಟ  

ಸೂಪರ್ 8 ಹಂತದ ಒಂದೊಂದು ಪಂದ್ಯಗಳೂ ಸೆಮೀಸ್ ಟಿಕೆಟ್ ಲೆಕ್ಕಾಚಾರಗಳನ್ನ ತಲೆಕೆಳಗಾಗಿಸುತ್ತೆ. ಹಾಗೆ ಯಾವುದೋ ಪಂದ್ಯದ ರಿಸಲ್ಟ್ ಇನ್ಯಾರದ್ದೂ ಭವಿಷ್ಯ ನಿರ್ಧರಿಸುತ್ತೆ. ಭಾರತದ ವಿಚಾರದಲ್ಲಿ ಆಗೋದೂ ಇದೇ. ಯಾಕಂದ್ರೆ ಸೌತ್ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿರುವುದರಿಂದ ನೆಟ್ ರನ್ ರೇಟ್ (NRR) -3.800 ಗೆ ಕುಸಿದಿದೆ. ಹೀಗಾಗಿ ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಲೇಬೇಕು.

2 ಪಂದ್ಯಗಳನ್ನೂ ಗೆಲ್ಲಬೇಕು.. ಉಳಿದವ್ರ ಫಲಿತಾಂಶವನ್ನೂ ಕಾಯಬೇಕು!

ಗ್ರೂಪ್ 1ನಲ್ಲಿ ಭಾರತ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೇ ಸೌತ್ ಆಫ್ರಿಕಾ ತಂಡಗಳಿವೆ. ಭಾರತ ಮುಂದಿನ ಪಂದ್ಯಗಳಲ್ಲಿ ಅಂದ್ರೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಪಂದ್ಯಗಳಲ್ಲೂ ಶತಾಯ ಗತಾಯ ಗೆಲ್ಲಲೇಬೇಕು. ಜೊತೆಗೆ ಆದಷ್ಟು ಬಿಗ್ ಮಾರ್ಜಿನ್​ನಿಂದ ಗೆಲ್ಬೇಕು. ಇಷ್ಟೇ ಸಾಕಾ ಅಂದ್ರೆ ಖಂಡಿತ ಇಲ್ಲ. ಉಳಿದಿರೋ ತಂಡಗಳ ಸೋಲು ಗೆಲುವುಗಳನ್ನೂ ಲೆಕ್ಕಾಚಾರ ಹಾಕಿಕೊಳ್ಬೇಕು.

ಭಾರತದ ಸೆಮೀಸ್ ಟಿಕೆಟ್ ಲೆಕ್ಕಾಚಾರ!

  1. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು
  2. ನೆಟ್ ರನ್ ರೇಟ್ ಮೈನಸ್ ಇರೋದ್ರಿಂದ ದೊಡ್ಡ ಗೆಲುವು
  3. ಸೌತ್ ಆಫ್ರಿಕಾ ಕೂಡ ಜಿಂಬಾಬ್ವೆ, ವೆಸ್ಟ್ ಇಂಡೀಸ್ ಸೋಲಿಸಬೇಕು
  4. ಇತರೆ ತಂಡಗಳಿಗಿಂತ ಬೆಟರ್ ರನ್ ರೇಟ್ ಮಾಡಬೇಕು
  5. ಸೌತ್ ಆಫ್ರಿಕಾ 2 ಪಂದ್ಯ ಸೋತರೂ ಭಾರತಕ್ಕೆ ಪ್ಲಸ್

ಈ ಎಲ್ಲಾ ಲೆಕ್ಕಾಚಾರಗಳು ಇದ್ರೂ ಕೂಡ ಟೀಂ ಇಂಡಿಯಾ ಡೈರೆಕ್ಟ್ ಸೆಮಿಫೈನಲ್​ಗೇರಬೇಕಿದ್ದರೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಭಾರೀ ಅಂತರದಿಂದ ಸೋಲಿಸಬೇಕು. ಈ ಮೂಲಕ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು. ಇದರಿಂದ ಝಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ಉಳಿದ 2 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೂ ಅಂಕ ಪಟ್ಟಿಯಲ್ಲಿ ರನ್ ರೇಟ್ ಕಡಿಮೆ ಇದ್ರೆ ಔಟ್ ಆಗ್ತಾರೆ. ಆಗ ಟಾಪ್-2ನಲ್ಲಿ ಭಾರತ ಕಾಣಿಸಿಕೊಳ್ಬೋದು. ಒಟ್ನಲ್ಲಿ ಸೌತ್ ಆಫ್ರಿಕಾ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳು ಡೇಂಜರಸ್ ಆಗಿಯೇ ಇವೆ. ಮುಂದಿನ ಪಂದ್ಯಗಳಲ್ಲಿ ಅವ್ರೂ ಗೆಲ್ಲಲೇಬೇಕು ಅಂತಾ ಕಣಕ್ಕಿಳೀತಾರೆ. ಹೀಗಾಗಿ ಭಾರತದ ಸೆಮೀಸ್ ಟಿಕೆಟ್ ಫಿಫ್ಟಿ ಫಿಫ್ಟಿ ಇದೆ ಅಂತಾನೇ ಹೇಳ್ಬೋದು.

Shwetha M

Leave a Reply

Your email address will not be published. Required fields are marked *