ಉಸಿರಾಡುವ ಗಾಳಿಯೇ ವಿಷವಾಗುತ್ತಿದೆ! – ಬೆಂಗಳೂರು, ಉಡುಪಿಯಲ್ಲಿ ಏರ್ ಕ್ವಾಲಿಟಿ ಕಳಪೆ!

ಉಸಿರಾಡುವ ಗಾಳಿಯೇ ವಿಷವಾಗುತ್ತಿದೆ! – ಬೆಂಗಳೂರು, ಉಡುಪಿಯಲ್ಲಿ ಏರ್ ಕ್ವಾಲಿಟಿ ಕಳಪೆ!

ರಾಜ್ಯದಲ್ಲಿ ಉಸಿರಾಡುವ ಗಾಳಿಯೇ ವಿಷವಾಗುತ್ತಿದೆ. ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟವೂ ಹದಗೆಡುತ್ತಿದೆ.ಉ ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಉಡುಪಿಯ AQI ಇನ್ನಷ್ಟು ಹದಗೆಟ್ಟಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಗುವ ತರಕಾರಿಯೂ ಸೇಫ್‌ ಅಲ್ಲ! – ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ!

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಉಡುಪಿಯ ಏರ್ ಕ್ವಾಲಿಟಿ 176 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಉಡುಪಿಯ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ

  • ಬೆಂಗಳೂರು –135
  • ಮಂಗಳೂರು-176
  • ಮೈಸೂರು –145
  • ಬೆಳಗಾವಿ – 175
  • ಕಲಬುರ್ಗಿ-136
  • ಶಿವಮೊಗ್ಗ – 170
  • ಬಳ್ಳಾರಿ – 114
  • ಹುಬ್ಬಳ್ಳಿ- 152
  • ಉಡುಪಿ –176
  • ವಿಜಯಪುರ –144
  • ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

Shwetha M

Leave a Reply

Your email address will not be published. Required fields are marked *