7 ಸಿಕ್ಸ್ .. 7 ಫೋರ್.. ಶಿಮ್ರೋನ್ ಹೆಟ್ಮೆಯರ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಉಡೀಸ್

ಭರವಸೆಯ ಬ್ಯಾಟರ್ ಶಿಮ್ರೋನ್ ಹೆಟ್ಮೆಯರ್ ಬಾರಿಸಿದ ಭರ್ಜರಿ ಅರ್ಧಶತಕ ಹಾಗೂ ಗುಡಕೇಶ್ ಮೋತಿ ಅವರ ಬಿಗುವಿನ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಸೂಪರ್ 8 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 107 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಅಲ್ಲದೆ ಸೂಪರ್ 8ನ ಎ ಗುಂಪಿನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶಿಮ್ರಾನ್ ಬ್ಯಾಟ್ನಿಂದ 7 ಸಿಕ್ಸರ್ಗಳು ಮೂಡಿಬಂದಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೆಯರ್ ಕೇವಲ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 85 ರನ್ ಬಾರಿಸಿದ್ದಾರೆ. ಈ ವೇಳೆ ಬಾರಿಸಿದ ಏಳು ಸಿಕ್ಸರ್ಗಳೊಂದಿಗೆ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್! – ಶೀಘ್ರದಲ್ಲೇ ಮೆಟ್ರೋ ದರ ಏರಿಕೆ!
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ವೆಸ್ಟ್ ಇಂಡೀಸ್ 5.4 ಓವರ್‌ಗಳಲ್ಲಿ 54 ರನ್ ಸೇರಿಸಿ 2 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆಧಾರವಾದರು ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಶ್ರಿಮೋನ್ ಹೆಟ್ಮೆಯರ್ ಹಾಗೂ ರೋವನ್ ಪಾವೆಲ್. ಈ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಲು ಜಿಂಬಾಬ್ವೆ ಬೌಲರ್‌ಗಳು ವಿಫಲರಾದರು.
ಮೂರನೇ ವಿಕೆಟ್‌ಗೆ ಶ್ರಿಮೋನ್ ಹೆಟ್ಮೆಯರ್ ಹಾಗೂ ರೋವನ್ ಪಾವೆಲ್ ಜೋಡಿ 52 ಎಸೆತಗಳಲ್ಲಿ 122 ರನ್ ಸೇರಿಸಿ ಆರ್ಭಟಿಸಿತು. ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಶಿಮ್ರೋನ್ ಪ್ರಸಕ್ತ ಟಿ20 ವಿಶ್ವಕಪ್‌ನ ಜಂಟಿ ವೇಗದ ಶತಕ ಬಾರಿಸಿದರು. ಇವರು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇವರು 34 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಬಾರಿಸಿ ಸೇರಿದಂತೆ 85 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಆಟಗಾರ ರೋವನ್ ಪಾವೆಲ್ 35 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 59 ರನ್ ಸಿಡಿಸಿದರು. ಶೆರ್ಫೇನ್ ರುದರ್ಫೋರ್ಡ್ ತಂಡದ ಮೊತ್ತ ಹಿಗ್ಗಿಸಲು ಸಹಾಯಕಾರಿ ಆದರು. ಇವರು ಕೇವಲ 13 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 21 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ರನ್ ಕಲೆ ಹಾಕಿತು.

ನೋಡಿರಿ

