ಬೆಂಗಳೂರಿನಲ್ಲಿ ಸಿಗುವ ತರಕಾರಿಯೂ ಸೇಫ್‌ ಅಲ್ಲ! – ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ!

ಬೆಂಗಳೂರಿನಲ್ಲಿ ಸಿಗುವ ತರಕಾರಿಯೂ ಸೇಫ್‌ ಅಲ್ಲ! – ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ!

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಬೆಂಗಳೂರಿನಲ್ಲಿ ತಿನ್ನುವ ಆಹಾರವೇ ವಿಷವಾಗ್ತಿದೆ. ಬೆಂಗಳೂರು ಸಿಟಿ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೃಢಪಟ್ಟಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್!‌ – ಶೀಘ್ರದಲ್ಲೇ ಮೆಟ್ರೋ ದರ ಏರಿಕೆ!

ಹೋಟೆಲ್‌ನಲ್ಲಿ ತಿನ್ನೋದು ಸೇಫ್‌ ಇಲ್ಲ ಎಂದು ಅನೇಕರು ಮನೆಯಲ್ಲೇ ಅಡುಗೆ ಮಾಡಿ ತಿನ್ನುತ್ತಿದ್ದಾರೆ. ಆದ್ರೀಗ ಮನೆಯಲ್ಲಿ ತಿನ್ನುವ ಆಹಾರ ಕೂಡ ಸೇಫ್‌ ಇಲ್ಲ. ಯಾಕಂದ್ರೆ ಮಾರ್ಕೆಟ್‌ನಲ್ಲಿ ಸಿಗುವ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ನಗರದ ತರಕಾರಿಗಳಲ್ಲಿ ಅಪಾಯಕಾರಿ ಅಂಶಗಳ ಬಗ್ಗೆ ಜನರ ದೂರು ನೀಡಿದ್ದರು. ಈ ಹಿನ್ನೆಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಜಂಟಿ ಸಮಿತಿ ಜಂಟಿಯಾಗಿ ವರದಿ ಸಲ್ಲಿಸಿದ್ದು, ವರದಿಯಲ್ಲಿ ಆತಂಕಕಾರಿ ಅಂಶ ಬೆಳಕಿಗೆ ಬಂದಿದ್ದು, ತರಕಾರಿಯಲ್ಲಿ ಕಲುಷಿತ ಅಂಶವಿದೆ ಎಂಬುದು ದೃಢವಾಗಿದೆ.

ಮಾರ್ಕೆಟ್‌ಗಳಲ್ಲಿ ಸಿಗುವ ತರಕಾರಿಗಳಲ್ಲಿ ಸೀಸದ(ಲೆಡ್) ಪ್ರಮಾಣ ಹೆಚ್ಚಿದೆ. ಈ ತರಕಾರಿ ತಿಂದ್ರೆ ಕಿಡ್ನಿ, ಮೆದುಳಿಗೆ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಗ್ರಹಿಸಿದ 72 ಮಾದರಿಗಳ ಪೈಕಿ 10 ಮಾದರಿಗಳಲ್ಲಿ 8 ಕೀಟನಾಶಕ ಅವಶೇಷಗಳು ಪತ್ತೆಯಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡುಬರುವ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು ಮಟ್ಟದಲ್ಲಿದೆ.

ಕಳೆದ ವರ್ಷ ಸಂಗ್ರಹಿಸಲಾದ 72 ತರಕಾರಿ ಮಾದರಿಗಳ ಸಮಗ್ರ ವಿಶ್ಲೇಷಣೆಯ ನಂತರ ಹೆಚ್ಚಿನ ಪ್ರಮಾಣದ ಸೀಸದ 19 ಮಾದರಿಗಳು ಪತ್ತೆಯಾಗಿದೆ. ಸೋರೆಕಾಯಿಯಲ್ಲಿ ಗಮನಿಸಲಾದ ಸೀಸದ ಸಾಂದ್ರತೆಯು 1.75ಎಂಜಿ/ಕೆಜಿ  ಪತ್ತೆಯಾಗಿದೆ. ತರಕಾರಿ ಬೆಳೆಯುವ ಮಣ್ಣು ಕೂಡ ಪರೀಕ್ಷೆಗೆ ಒಳಪಡಿಸಿದಾಗ ಕೀಟನಾಶಕ ಅಂಶ ಪತ್ತೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ 23 ಮಾದರಿ ಮಣ್ಣು ಪರೀಕ್ಷೆ ಮಾಡಲಾಗಿದ್ದು, ಈ ಸಂಗ್ರಹವಾದ ಮಣ್ಣು ಕೂಡ ಕಲುಷಿತ ಎಂದು ತಿಳಿದುಬಂದಿದೆ.

Shwetha M

Leave a Reply

Your email address will not be published. Required fields are marked *