ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್!‌ – ಶೀಘ್ರದಲ್ಲೇ ಮೆಟ್ರೋ ದರ ಏರಿಕೆ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್!‌ – ಶೀಘ್ರದಲ್ಲೇ ಮೆಟ್ರೋ ದರ ಏರಿಕೆ!

ಸಿಲಿಕಾನ್‌ ಸಿಟಿ ಜನರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಇದೀಗ ಮತ್ತೆ ನಮ್ಮ ಮೆಟ್ರೋ ದರ ಏರಿಕೆ ವಿಚಾರ ಮುನ್ನಲೆಗೆ ಬಂದಿದೆ. ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ದಿವಾನ್‌ ಮನೆಗೆ ಗೌತಮ್ ರೀ ಎಂಟ್ರಿ!‌  – ಗೌತಮ್‌ ಆರ್ಭಟಕ್ಕೆ ಜೈದೇವ್‌ ಗಪ್‌ಚುಪ್!‌

ಇತ್ತೀಚೆಗಷ್ಟೇ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ದರ 5% ಏರಿಕೆ ಮಾಡಲು ಮುಂದಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದರ ಏರಿಕೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಆದ್ರೀಗ ಮತ್ತೆ ನಮ್ಮ ಮೆಟ್ರೋ ದರ ಏರಿಕೆ ವಿಚಾರ ಚರ್ಚೆಯಲ್ಲಿದೆ.

ಇತ್ತೀಚೆಗೆ ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಅಂತ ಬಿಎಂಆರ್‌ಸಿಎಲ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚಿಸಿದ್ದರು‌. ಬಿಎಂಆರ್‌ಸಿಎಲ್ ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದ್ದು, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್‌ಸಿಎಲ್ ಮುಂದಾಗುತ್ತಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗಲಿದೆ ಅಂತ ಹೇಳಲಾಗುತ್ತಿದೆ‌. ನಿಗದಿಯಾಗಿದ್ದ 5% ದರದಲ್ಲಿ ಇಳಿಕೆ ಆಗಬಹುದು ಅಥವಾ ಏರಿಕೆ ಆದರೂ ಆಗಬಹುದು ಎಂಬ ಚರ್ಚೆ ಜೋರಾಗಿದೆ.

ನಿಗದಿ ಆಗಿದ್ದ 5% ದರದಲ್ಲಿ 1% ಅಥವಾ 2% ಗೆ ದರ ನಿಗದಿ ಮಾಡಬಹುದು ಅಂತಾ ಹೇಳಲಾಗುತ್ತಿದೆ. ಅದಕ್ಕಿಂತ ಜಾಸ್ತಿ ಆಗಬಹುದು ಅಂತಾ ಕೂಡ ಚರ್ಚೆ ಇದೆ. ಆದರೆ, ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಅ ನಿಟ್ಟಿನಲ್ಲಿ ಆಡಿಟ್ ಮುಕ್ತಾಯ ಆದ ಹಿನ್ನೆಲೆ ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರವನ್ನ ಬಿಎಂಆರ್‌ಸಿಎಲ್ ಎಂಡಿ ಅವರು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. ಬೋರ್ಡ್ ಮೀಟಿಂಗ್ ಬಳಿಕ ಎಷ್ಟು ದರ ಏರಿಕೆ ಅಗುತ್ತೆ ಎನ್ನುವುದಕ್ಕೆ ಸ್ಪಷ್ಟನೆ ಸಿಗಲಿದೆ.

Shwetha M