ಇಂದು ರಣಜಿ ಫೈನಲ್ – ಕರ್ನಾಟಕ Vs ಜಮ್ಮು & ಕಾಶ್ಮೀರ ಫೈಟ್‌ನಲ್ಲಿ ಗೆಲ್ಲೋದ್ಯಾರು?

ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೆಸ್ಟ್ ಟೂರ್ನಮೆಂಟ್ ಫೈನಲ್ ಹಂತ ತಲುಪಿದ್ದು, ಇಂದು ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವೆ ಬಿಗ್ ಫೈಟ್ ನಡೆಯಲಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರ ಫೈನಲ್ ಎಂಟ್ರಿಯಾಗಿದೆ. ಇತ್ತ 11 ವರ್ಷಗಳ ಬಳಿಕ ಕರ್ನಾಟಕ ಫೈನಲ್ ತಲುಪಿದೆ. ಈ ಎರಡು ತಂಡಗಳ ಜಿದ್ದಾಜಿದ್ದಿ ನೋಡಲು ರಾಜ್ಯದ ಮಾತ್ರವಲ್ಲದೇ ದೇಶವೇ ಕಾತುರದಿಂದ ಕಾಯುತ್ತಿದೆ. ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಿದ್ದು, ಈ ಐತಿಹಾಸಿಕ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 9:30 ರಿಂದ ಪಂದ್ಯ ಶುರುವಾಗಲಿದೆ.
ದೇವದತ್ ಪಡಿಕಲ್ ನಾಯಕತ್ವದ ಕರ್ನಾಟಕ ತಂಡದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಕೆ.ಎಲ್ ರಾಹುಲ್ , ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆರ್.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ದ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ.ಎಲ್, ವೈಶಾಖ್ ವಿಜಯ್‌ಕುಮಾರ್ ಕಣಕ್ಕಿಳಿಯಲಿದ್ದಾರೆ. ನಾವು ಈ ಬಾರಿ ಕಪ್ ಎತ್ತಲಿದ್ದೇವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಆಡಿರುವ ಅನುಭವವಿದೆ. ಪಿಚ್ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದೇವೆ ಹುಬ್ಬಳ್ಳಿಯಂತ ನಗರದಲ್ಲಿ ರಣಜಿ ಫೈನಲ್ ಆಡುತ್ತಿರುವುದು ಖುಷಿಯಿದೆ ಅಂತ ಕರ್ನಾಟಕ ತಂಡ ನಾಯಕ ದೇವದತ್ ಪಡಿಕಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೋಡಿರಿ