ದರ್ಶನ್ಗೆ ಕೋರ್ಟ್ ಗುಡ್ನ್ಯೂಸ್ – ಗನ್ ಹಿಡಿಯೋಕೆ ಹೊರ ಬರ್ತಾರಾ ದಾಸ?

ದರ್ಶನ್ ಅವರ ಪರವಾಗಿ ಕೋರ್ಟ್ ಅಲ್ಲಿ ಆದೇಶ ಒಂದು ಬಂದಿದೆ. ಇದರಿಂದ ಅವರಿಗೆ ಸಣ್ಣ ರಿಲೀಫ್ ಸಿಕ್ಕಿದೆ. ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ A2 ಆಗಿದ್ದಾರೆ. ಅವರಿಗೆ 2024ರಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಸಿಕ್ಕ ಬಳಿಕ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಈ ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಸಬಹುದೆಂದು ಗನ್ ಲೈಸೆನ್ಸ್ ಅಮಾನತುಪಡಿಸಲಾಗಿತ್ತು. ನಟ ದರ್ಶನ್ ಅವರು ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
‘2008ರಿಂದಲೂ ದರ್ಶನ್ ಲೈಸೆನ್ಸ್ ಇರುವ ಗನ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ ಸರಂಡರ್ ಮಾಡಲಾಗಿದೆ. ದರ್ಶನ್ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತುಪಡಿಸಿದ್ದಾರೆ’ ಎಂದು ದರ್ಶನ್ ಪರ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಾಡಿದರು. ‘ಹೆಸರಿನ ಕಾರಣಕ್ಕಲ್ಲ ಆರೋಪವಿರುವ ಕಾರಣಕ್ಕೆ’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. ಆ ಬಳಿಕ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಮಾರ್ಚ್ 6ರವರೆಗೆ ಮಧ್ಯಂತರ ತಡೆ ಅನ್ವಯ ಆಗಲಿದೆ.
ದರ್ಶನ್ ಅವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಅವರಿಗೆ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಅವರ ಅಭಿಮಾನಿಗಳು ದರ್ಶನ್ ಆಗಮನಕ್ಕೆ ಕಾದಿದ್ದಾರೆ. ಇದರ ಜೊತೆಗೆ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು, ಸಾಕ್ಷಿಗಳ ವಿಚಾರಣೆ ಮಾಡಲಾಗತ್ತಿದೆ. ಅವರು ಜೈಲಿನಿಂದ ಹೊರ ಬಂದರೂ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ನೋಡಿರಿ

