ಇರಾನ್ ಮೇಲೆ ಅಮೆರಿಕ ಯುದ್ಧ ಸಾಧ್ಯತೆ – ತನ್ನ ನಾಗರಿಕರಿಗೆ ಇರಾನ್ ಬಿಟ್ಟು ಬನ್ನಿ ಎಂದ ಭಾರತ

ಭಾರತ ಸರ್ಕಾರ ಇರಾನ್ನಲ್ಲಿರುವ ತನ್ನ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ದೇಶ ಬಿಟ್ಟು ಹೊರಡಿ ಎಂದು ಸಲಹೆ ನೀಡಿದೆ. ಫೆಬ್ರವರಿ 23ರಂದು ಬಿಡುಗಡೆ ಮಾಡಿದ ಹೊಸ ಸಲಹೆಯಲ್ಲಿ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಮನೆಗೆ ಮರಳಲು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವ ಸಾರಿಗೆಯನ್ನು ಬೇಕಾದರೂ ಬಳಸುವಂತೆ ಮನವಿ ಮಾಡಿದೆ. ಇರಾನ್ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಸಂಘರ್ಷದ ಭಯ ಹೆಚ್ಚುತ್ತಿರುವ ಕಾರಣದಿಂದ ಅಮೆರಿಕದ ಈ ಎಚ್ಚರಿಕೆ ಬಂದಿದೆ.
ಇದನ್ನೂ ಓದಿ: ATM ದರೋಡೆ ಆಯ್ತು.. ಈಗ ಬ್ಯಾಂಕ್ ಟಾರ್ಗೆಟ್! – ಬೆಂಗಳೂರಿನ ಕೆನರಾ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನ!
2026ರ ಜನವರಿ 5ರಂದು ಭಾರತ ಸರ್ಕಾರ ಹೊರಡಿಸಿದ ಸಲಹೆಯ ಮುಂದುವರಿಕೆಯಾಗಿ ಮತ್ತು ಇರಾನ್ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರಾನ್ನಲ್ಲಿರುವ ಭಾರತೀಯ ಪ್ರಜೆಗಳು (ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್ನಿಂದ ಹೊರಹೋಗಲು ಸೂಚಿಸಲಾಗಿದೆ.“ಎಲ್ಲಾ ಭಾರತೀಯ ನಾಗರಿಕರು ಮತ್ತು ಪಿಐಒಗಳು ಸರಿಯಾದ ಎಚ್ಚರಿಕೆ ವಹಿಸಬೇಕು. ಪ್ರತಿಭಟನೆಗಳು ಅಥವಾ ಪ್ರದರ್ಶನಗಳ ಪ್ರದೇಶಗಳನ್ನು ತಪ್ಪಿಸಬೇಕು, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಬೇಕು” ಎಂದು ಸಲಹೆಯಲ್ಲಿ ಸೂಚಿಸಲಾಗಿದೆ.
ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಇದೀಗ ಇರಾನ್ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಭಾರತ ಸರ್ಕಾರದ ಈ ಸಲಹೆ ಅನ್ವಯಿಸುತ್ತದೆ. ಇರಾನ್ನಲ್ಲಿರುವ ಭಾರತೀಯರು ಜಾಗರೂಕರಾಗಿರಲು, ಪ್ರತಿಭಟನಾ ಪ್ರದೇಶಗಳ ಕಡೆ ಹೋಗುವುದನ್ನು ತಪ್ಪಿಸಲು ಮತ್ತು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರಲು ಜನರಿಗೆ ಸೂಚಿಸಲಾಗಿದೆ.

ನೋಡಿರಿ

