ದಿವಾನ್‌ ಮನೆಗೆ ಗೌತಮ್ ರೀ ಎಂಟ್ರಿ!‌  – ಗೌತಮ್‌ ಆರ್ಭಟಕ್ಕೆ ಜೈದೇವ್‌ ಗಪ್‌ಚುಪ್!‌

ದಿವಾನ್‌ ಮನೆಗೆ ಗೌತಮ್ ರೀ ಎಂಟ್ರಿ!‌  – ಗೌತಮ್‌ ಆರ್ಭಟಕ್ಕೆ ಜೈದೇವ್‌ ಗಪ್‌ಚುಪ್!‌

ಮಲ್ಲಿ ಈಗ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದೂ ಕೂಡ ತನಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ. ಆದ್ರೆ ಸುನಿಯನ್ನ ಕಳುಹಿಸಿದ್ದು ಜೈದೇವ್‌ ಅನ್ನೋದು ಗೊತ್ತಿಲ್ಲ. ಇವೆಲ್ಲದ್ರ ಮಧ್ಯೆ ಮಲ್ಲಿ ಲವ್‌ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಸುನೀಲ್‌ನ ನೋಡಿ ಭೂಮಿಕಾ ಶಾಕ್‌ ಆಗಿದ್ದಾಳೆ. ಇಷ್ಟು ಚಿಕ್ಕ ಹುಡುಗನಾ ಅಂತ ಮನಸಲ್ಲೇ ಅಂದ್ಕೊಂಡಿದ್ದಾಳೆ. ಮತ್ತೊಂದ್ಕಡೆ ಗೌತಮ್‌, ಶಕುಂತಲಾ ಮುಖಾಮುಖಿಯಾಗಿದ್ದು ದೊಡ್ಡ ಹೈಡ್ರಾಮವೇ ನಡೆದಿದೆ.

ಇದನ್ನೂ ಓದಿ: ಟಾಕ್ಸಿಕ್‌ಗಾಗಿ ರಾಕಿ ಭಾಯ್‌ ಹೊಸ ಅವತಾರ!‌ – ಗಡ್ಡ, ಮೀಸೆಗೆ ಕತ್ತರಿ.. ಯಶ್‌ ಈಗ ಸಖತ್‌ ಯಂಗ್

ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ಹೊಸ ಟ್ವಿಸ್ಟ್​ ಆ್ಯಂಡ್​ ಟರ್ನ್​ಗಳು ಎದುರಾಗ್ತಾನೆ ಇದೆ. ಇಷ್ಟು ದಿನ ಒಂದು ಲೆಕ್ಕ ಇನ್ಮುಂದೆ ಇನ್ನೊಂದು ಲೆಕ್ಕ ಅನ್ನೊದಕ್ಕೆ ಗೌತಮ್​ ರೆಡಿಯಾಗಿದ್ದಾನೆ. ಈ ಹಿಂದೆ ಗೌತಮ್‌ ದಿವಾನ್ ಗ್ರೂಪ್ ಆಫ್ ಕಂಪನಿಯ ಓಡೆಯನಾಗಿದ್ದ. ಮಲತಾಯಿ ಶಕುಂತಲಾ ಹಾಗೂ ತಮ್ಮ ಜೈದೇವ್​ ಮಾಡಿದ ಮೋಸದಿಂದ ತನ್ನ ಆಸ್ತಿಯನ್ನ ಬರೆದುಕೊಟ್ಟು ಗೌತಮ್​ ಮನೆ ಬಿಟ್ಟು ಬರುವಂತಾಗಿತ್ತು. ಸಾಲದಕ್ಕೆ ಭೂಮಿಕಾನೂ ಗೌತಮ್​ನಿಂದ ದೂರವಾಗಿದ್ಲು. ಇದೀಗ ಗೌತಮ್‌ ಭೂಮಿ ಒಂದಾಗಿದ್ದಾರೆ. ಗೌತಮ್‌ ಈಗ ಜೀರೋದಿಂದ ಹೀರೋ ಆಗಲು ಹೊರಟಿದ್ದಾನೆ. ಇವೆಲ್ಲದ್ರ ಮಧ್ಯೆ ಮಲ್ಲಿ ಪ್ರೀತಿ ವಿಚಾರ ಈಗ ಸೀರಿಯಲ್‌ ಹೈಲೈಟ್‌ ಆಗಿದೆ.

ಹೌದು, ಜೈದೇವ್‌ ಮಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಸುನೀಲ್‌ನ ಚೂ ಬಿಟ್ಟಿದ್ದಾನೆ. ಪ್ರೀತಿಯಲ್ಲಿ ಬಿದ್ದವರಂತೆ ಮಲ್ಲಿ ಮುಂದೆ ಡ್ರಾಮಾ ಮಾಡಲು ಹೇಳಿದ್ದ. ಬಾಸ್‌ ಹೇಳಿದಂತೆ ಸುನಿ ಕೂಡ ಮಾಡ್ತಿದ್ದಾನೆ. ಸುನೀಲ್‌ ನಾಟಕ ನೋಡಿದ ಮಲ್ಲಿ ಎಲ್ಲವನ್ನ ನಿಜ ಅಂದ್ಕೊಂಡಿದ್ದಾಳೆ. ಇದೀಗ ಮಲ್ಲಿ ಸುನೀಲ್‌ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆದ್ರೀಗ ಭೂಮಿಕಾ ಬಾಳಿಗೆ ಮಲ್ಲಿಯೇ ವಿಲನ್‌ ಆಗ್ತಾಳಾ ಅನ್ನೋ ಪ್ರಶ್ನೆ ಮೂಡಿದೆ.

ಹೌದು, ಸುನೀಲ್‌ ಮೇಲೆ ಪ್ರೀತಿ ಆಗ್ತಿದ್ದಂತೆ ಮಲ್ಲಿ ಕ್ಲಾಸ್​ ಬಂಕ್ ಮಾಡಿ ಆತನೊಂದಿಗೆ ಓಡಾಡ್ತಿದ್ದಾಳೆ.. ಮಲ್ಲಿ ಕ್ಲಾಸ್​ ಬಂಕ್​ ಮಾಡಿ ಓಡಾಡ್ತಿರೋದು ಭೂಮಿಕಾಳಿಗೆ ಗೊತ್ತಾಗಿದೆ. ಮಲ್ಲಿ ಮತ್ತೇ ಮೋಸ ಹೋಗಬಾರದು ಅಂತಾ ಭೂಮಿಗೆ ಕಾಳಜಿ ಇದೆ.. ಹೀಗಾಗಿ ಮಲ್ಲಿ ಜೊತೆ ಓಡಾಡ್ತಿರೋ ಹುಡುಗ ಯಾರು ಭೂಮಿಕಾ ತಿಳಿದುಕೊಳ್ಳಲು ಪ್ರಯತ್ನಿಸ್ತಿದ್ದಾಳೆ. ವಿಷಯ ಮಲ್ಲಿಗೆ ಗೊತ್ತಾಗಿದೆ. ಕೋಪದಿಂದ ಮನೆಗೆ ಬಂದು ನಿಮಗೆ ಏನಾದ್ರು ಕೇಳೊದಿದ್ರೆ ನೇರವಾಗಿ ಕೇಳಬಹುದಿತ್ತಲ್ಲ. ಹೀಗೆಲ್ಲಾ ಕದ್ದು ಮುಚ್ಚಿ ಬರುವ ಅಗತ್ಯ ಏನಿತ್ತು ಎಂದು ಭೂಮಿಕಾಳನ್ನ ಪ್ರಶ್ನಿಸಿದ್ದಾಳೆ.. ಮಲ್ಲಿ ಪ್ರಶ್ನೆಗೆ ಭೂಮಿಕಾ, ನೀನು ಜೈದೇವನಿಂದ ಮೋಸ ಹೋಗಿದ್ದೀಯಾ. ಮತ್ತೆ ನಿನ್ನ ಜೀವನದಲ್ಲಿ ತಪ್ಪು ಆಗುವುದು ನನಗೆ ಇಷ್ಟವಿಲ್ಲ ಎಂದಿದ್ದಾಳೆ.. ಆದ್ರೂ ಮಲ್ಲಿ ಭೂಮಿಕಾಳ ಮೇಲೆ ಮುನಿಸಿಕೊಂಡಿದ್ದಾಳೆ. ಇದೀಗ ಮಲ್ಲಿ ಹುಡುಗನನ್ನ ಭೂಮಿಕಾ ಮನೆಗೆ ಕರೆಸಿದ್ದಾಳೆ. ಸುನೀ ಮನೆಗೆ ಬರ್ತಿದ್ದಂತೆ ಭೂಮಿ ಶಾಕ್‌ ಆಗಿದ್ದಾಳೆ.

ಹೌದು, ಸುನೀಲ್‌ ಮಲ್ಲಿಗಿಂತ ತುಂಬಾ ಚಿಕ್ಕವ. ಹೀಗಾಗಿ ಆತನನ್ನು ನೋಡಿ ಶಾಕ್‌ ಆಗಿದ್ದಾಳೆ. ಇಷ್ಟು ಚಿಕ್ಕ ಹುಡುಗನ್ನ ಮಲ್ಲಿ ಲವ್‌ ಮಾಡ್ತಿದ್ದಾಳಾ ಅಂತ ಶಾಕ್‌ ಆಗಿದ್ದಾಳೆ. ಇದೀಗ ಮಲ್ಲಿ ಪ್ರೀತಿಗೆ ಭೂಮಿಕಾ ಅಡ್ಡಿ ಆಗ್ತಾಳಾ ಅನ್ನೋ ಪ್ರಶ್ನೆ ಮೂಡಿದೆ. ಒಂದ್ವೇಳೆ ಭೂಮಿಕಾ ಮಲ್ಲಿಗೆ ಸುನಿ ಸಹವಾಸ ಬಿಡು ಅಂತ ಹೇಳಿದ್ರೆ, ಆಕೆ ಭೂಮಿ ವಿರುದ್ದ ತಿರುಗಿ ಬೀಳುವ ಸಾಧ್ಯತೆ ಇದೆ.

ಮತ್ತೊಂದ್ಕಡೆ ಹಲವು ವರ್ಷಗಳ ಬಳಿಕ ಗೌತಮ್​ ಮತ್ತು ಶಕುಂತಲಾ ಮುಖಾಮುಖಿಯಾಗಿದ್ದಾರೆ. ಅಪ್ಪನ ಕಾರ್ಯಕ್ಕಾಗಿ ಗೌತಮ್‌ ಆ ಮನೆಗೆ ಕಾಲಿಟ್ಟಿದ್ದಾನೆ. ಗೌತಮ್‌ ಬಂದಿರೋದು ನೋಡಿ ಶಕುಂತಲಾಗೂ ಶಾಕ್​ ಆಗಿದೆ. ಇದನ್ನ ನೋಡಿದ ಜೈದೇವ್‌ ಫುಲ್‌ ನೀನ್‌ ಕ್ರಿಯೇಟ್‌ ಮಾಟಿದ್ದಾನೆ. ಅಪ್ಪನ ಸಮಾಧಿಗೆ ಗೌತಮ್​ ಮತ್ತು ಭೂಮಿಕಾ ಪೂಜೆ ಸಲ್ಲಿಸಲು ಹೋದಾಗ, ಅವರು ನಿನ್ನ ಅಪ್ಪ ಅಲ್ಲ, ನನ್ನ ಅಪ್ಪ, ನಿನಗ್ಯಾವ ಹಕ್ಕಿದೆ ಎಂದು ಹೇಳಿ, ಪೂಜೆಗೆಂದು ತಂದಿದ್ದ ಹೂವಿನ ಬಟ್ಟಲನ್ನು ಬೀಸಾಡಿದ್ದಾನೆ. ಇದ್ರಿಂದ ಸಿಟ್ಟಾದ ಗೌತಮ್‌ ಜೈದೇವ್‌ಗೆ ಕಪಾಳ ಮೋಕ್ಷ ಮಾಡಿದ್ದಾನೆ. ಇದೀಗ ಗೌತಮ್‌ ಅದೇ ಮನೆಯಲ್ಲಿ ಉಳಿದು ಕೊಳ್ತಾನಾ? ಜೈದೇವ್‌ಗೆ ಸರಿಯಾದ ಪಾಠ ಕಲಿಸ್ತಾನಾ? ಭೂಮಿ ಹಾಗೂ ಮಲ್ಲಿ ನಡುವೆ ಬಿರುಕು ಮೂಡುತ್ತಾ? ಜೈದೇವ್​ನ ಕುಂತತ್ರಕ್ಕೆ ಮಲ್ಲಿ ಬಲಿಯಾಗೋದನ್ನ ಭೂಮಿಕಾ ಇದನ್ನ ತಡಿತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಮುಂಬರುವ ಎಲಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M

Leave a Reply

Your email address will not be published. Required fields are marked *