ಹೆಲ್ಮೆಟ್‌ ಧರಿಸದೆ ಯುವತಿಯರ ಜಾಲಿ ರೈಡ್‌! – ಯಮರೂಪಿ ಹಂಪ್ಸ್‌ಗೆ ಕಾಲೇಜು ವಿದ್ಯಾರ್ಥಿನಿ ಬಲಿ!

ಹೆಲ್ಮೆಟ್‌ ಧರಿಸದೆ ಯುವತಿಯರ ಜಾಲಿ ರೈಡ್‌! – ಯಮರೂಪಿ ಹಂಪ್ಸ್‌ಗೆ ಕಾಲೇಜು ವಿದ್ಯಾರ್ಥಿನಿ ಬಲಿ!

ವಾಹನ ಸವಾರರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ನಿಯಮ ತಂದ್ರೂ ಅದನ್ನ ಪಾಲಿಸುವುದೇ ಇಲ್ಲ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ, ರಸ್ತೆಯಲ್ಲಿ ಓಡಾಡುವುದು ಸಾಮಾನ್ಯ ಆಗಿದೆ. ಇದೀಗ ಯುವತಿಯೊಬ್ಬಳು ಬೈಕ್‌ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾಳೆ.

ಇದನ್ನೂ ಓದಿ: ನದಿಗೆ ಬಿದ್ದ ಬಸ್ -18 ಮಂದಿ ಸಾವು.. 24ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ!

ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಮತ್ತೋರ್ವ ಯುವತಿ ಸ್ವಾತಿ (24) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?

ಮೃತ ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಫೈನಲ್ ಇಯಿರ್ ಓದುತ್ತಿದ್ದಳು. ಸ್ವಾತಿಗೆ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.  ಸ್ವಾತಿ ಹಾಗೂ ಪ್ರಿಯಾ ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ಜಾಲಿ ರೈಡ್‌ಗೆ ಹೊರಟಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದಳು. ರಸ್ತೆಯಲ್ಲಿ ಸಾಗುವಾಗ ಹಂಪ್ಸ್ ಕಾಣದೇ ಇಬ್ಬರು ರಸ್ತೆಗೆ ಹಾರಿ ಬಿದ್ದಿದ್ದಾರೆ. ಪರಿಣಾಮ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ವಾತಿ ಸ್ಥಿತಿ ಗಂಭೀರವಾಗಿದೆ.

ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿಯನ್ನು ಬೆಂಗಳೂರಿನ ಆಸ್ಪತ್ರೆ ರವಾನೆ ಮಾಡಲಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Shwetha M

Leave a Reply

Your email address will not be published. Required fields are marked *