ಆಡದ ಅಭಿಷೇಕ್.. ಕ್ಯಾಚ್ ಗಳು ಮಿಸ್ – SA ಸೋಲಿಸಲು ಭಾರತಕ್ಕೆ 5 ಟಾಸ್ಕ್
ಸೂಪರ್-8ನಲ್ಲೀಗ ಅಸಲಿ ಅಗ್ನಿ ಪರೀಕ್ಷೆ

ಟಿ-20 ವಿಶ್ವಕಪ್ನ ಸೂಪರ್ 8 ಪಂದ್ಯಗಳು ಸ್ಟಾರ್ಟ್ ಆಗಿದ್ದು ಇವತ್ತು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿವೆ. 2024ರ ಟಿ-20 ವಿಶ್ವಕಪ್ ಟೂರ್ನಿಯ ರನ್ನರ್ ಮತ್ತು ವಿನ್ನರ್ ನಡುವಿನ ಈ ಪಂದ್ಯಕ್ಕಾಗಿ ಕ್ರಿಕೆಟ್ ಜಗತ್ತೂ ಕಾಯ್ತಿದೆ. ಒಂದ್ಕಡೆ ಭಾರತದ ಅಜೇಯ ವಿಜಯಯಾತ್ರೆ ಇನ್ನೊಂದ್ಕಡೆ ಸೌತ್ ಆಫ್ರಿಕಾ ತಂಡದ ಸೋಲಿನ ಸೇಡು.. ಸೋ ಮ್ಯಾಚಲ್ಲಿ ಯಾರ್ ಗೆಲ್ತಾರೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ. ಕಳೆದ ವಿಶ್ವಕಪ್ನಿಂದ ಭಾರತ ತಂಡ ಅನ್ಬೀಟನ್ ಆಗಿ ಬಂದಿದ್ರೂ ಹರಿಣಪಡೆ ವಿರುದ್ಧದ ಗೆಲುವು ಸುಲಭ ಇಲ್ಲ.
ಇದನ್ನೂ ಓದಿ : ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ : ಡೊನಾಲ್ಡ್ ಟ್ರಂಪ್
ಯುಎಸ್ಎ ವಿರುದ್ಧ ಮೊದಲ ಪಂದ್ಯ ಗೆದ್ದು ನೆಕ್ಸ್ಟ್ ನಮೀಬಿಯಾ ತಂಡಕ್ಕೆ ನೀರು ಕುಡಿಸಿ ಲಂಕಾದಲ್ಲಿ ಪಾಕಿಸ್ತಾನವನ್ನ ಪಂಕ್ಚರ್ ಮಾಡಿ ನೆದರ್ಲ್ಯಾಂಡ್ ವಿರುದ್ಧ ಗೆಲುವಿನ ನಗಾರಿ ಬಾರಿಸಿ ಸೂಪರ್ 8ಗೆ ಬಂದಿರೋ ಭಾರತಕ್ಕೆ ಈಗ ಸೌತ್ ಆಫ್ರಿಕಾ ಸವಾಲ್. ಸೆಮೀಸ್ ಟಿಕೆಟ್ ಗಿಟ್ಟಿಸಿಕೊಳ್ಳೋಕೆ ಭಾರತ ಪಂದ್ಯವನ್ನ ಗೆಲ್ಲಲೇಬೇಕು. ಸದ್ಯಕ್ಕೆ ಭಾರತ ತಂಡ ರೆಡ್ ಹಾಟ್ ಫಾರ್ಮ್ನಲ್ಲಿದ್ದು ಜಗತ್ತಿನ ಯಾವುದೇ ಟೀಂ ಎದುರಾಳಿಯಾದ್ರೂ ಸೋಲಿಸ್ತೀವಿ ಅನ್ನೋ ಮೈಂಡ್ಸೆಟ್ನಲ್ಲಿದ್ದಾರೆ. ಆದ್ರೆ ಗೆಲುವು ಅಷ್ಟು ಈಸಿ ಇಲ್ಲ. ಒಂದಷ್ಟು ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಿದೆ.
ನಂಬರ್ 1 ಭಾರತಕ್ಕೂ ಇದೆ ವೀಕ್ ನೆಸ್!
ಸೂಪರ್ 8 ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಕೆಲ ವೀಕ್ನೆಸ್ ಅಂತೂ ಇದೆ. ಏನಂದ್ರೆ ಮೊದಲ ಪಂದ್ಯದಲ್ಲಿ ಅಮೆರಿಕನ್ನರ ವಿರುದ್ಧ ಭಾರತದ ಟಾಪ್ ಆರ್ಡರ್ ಕಂಪ್ಲೀಟ್ ಕುಸಿದಿತ್ತು. ಎರಡನೇ ಪಂದ್ಯದಲ್ಲಿ ಮೆನ್ ಇನ್ ಬ್ಲೂ ತಂಡ ಕೊನೆಯಲ್ಲಿ ಐದು ವಿಕೆಟ್‌ಗಳನ್ನು ಕಳ್ಕೊಂಡು ಕೇವಲ 25 ರನ್ ಗಳಿಸಿತ್ತು. ಇನ್ನು ಪಾಕಿಸ್ತಾನ ಮ್ಯಾಚಲ್ಲಿ ಪಾಕ್ ಸ್ಪಿನ್ನರ್‌ಗಳು ಭಾರತೀಯರಿಗೆ ಕಾಟ ಕೊಟ್ಟಿದ್ರು. ನೆದರ್‌ಲ್ಯಾಂಡ್ಸ್ ವಿರುದ್ಧವೂ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಸ್ಟ್ರೈಕ್ ರೇಟ್ ಕಡಿಮೆ ಇದೆ. ಅದೆಲ್ಲಕ್ಕಿಂತ ಜಾಸ್ತಿ ತಲೆಬಿಸಿ ತಂದಿರೋದು ಕಳಪೆ ಫೀಲ್ಡಿಂಗ್. ಸೋ ಭಾರತ ಎಲ್ಲೆಲ್ಲಾ ಸ್ಟ್ರಾಂಗ್ ಆಗ್ಬೇಕು ಏನೆಲ್ಲಾ ಮೈನಸ್ ಇದೆ ಅನ್ನೋದನ್ನ ಒಂದೊಂದಾಗೇ ನೋಡ್ತಾ ಹೋಗೋಣ.
ನಂಬರ್ 1
ಕಳಪೆ ಫೀಲ್ಡಿಂಗ್ ನಿಂದಾಗಿ 9 ಕ್ಯಾಚ್ ಗಳನ್ನ ಬಿಟ್ಟಿರೋ ಭಾರತ!
ಭಾರತ ನಾಲ್ಕು ಲೀಗ್ ಪಂದ್ಯಗಳಲ್ಲಿ ಅಜೇಯವಾಗಿ ಆಡಿರಬಹುದು. ಆದ್ರೆ ಈ ಪಂದ್ಯಾವಳಿಯಲ್ಲೇ ನಾಲ್ಕು ಪಂದ್ಯಗಳಿಂದ ಬರೋಬ್ಬರಿ 9 ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ದಾರೆ. T20 ವಿಶ್ವಕಪ್‌ನಲ್ಲಿ ಯಾವುದೇ ತಂಡ ಬಿಟ್ಟಿರಯವ ಎರಡನೇ ಅತಿ ಹೆಚ್ಚು ಕ್ಯಾಚ್‌ಗಳಾಗಿವೆ. ಈ ಅನಗತ್ಯ ಪಟ್ಟಿಯಲ್ಲಿ ಐರ್ಲೆಂಡ್ (10) ಮಾತ್ರ ಭಾರತಕ್ಕಿಂತ ಮುಂದಿದೆ. ಈ ವಿಶ್ವಕಪ್‌ನಲ್ಲಿ ನಮೀಬಿಯಾ ಆರು ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಸೋ ಫೀಲ್ಡಿಂಗ್ ವಿಚಾರದಲ್ಲಿ ನಮೀಬಿಯಾ ಭಾರತಕ್ಕಿಂತ ಬೆಟರ್ ಆಗಿದೆ. ಕ್ಯಾಚ್ಗಳ ಬಿಟ್ಟಾಗಲೇ ಮ್ಯಾಚ್ ಬಿಡೋ ಪ್ರಸಂಗಗಳೂ ಬರ್ತಾವೆ. ನಾಕೌಟ್ ಸ್ಟೇಜ್ನಲ್ಲಂತೂ ಒಂದೊಂದು ರನ್ಸ್, ಒಂದೊಂದು ಕ್ಯಾಚ್ ಕೂಡ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಹೀಗಾಗಿ ಫೀಲ್ಡಿಂಗ್ ಬಗ್ಗೆ ಭಾರತ ವರ್ಕ್ ಮಾಡಲೇಬೇಕು.
ನಂಬರ್ 2
ಆಫ್ ಸ್ಪಿನ್ ಬೌಲಿಂಗ್ ವಿರುದ್ಧ ಬ್ಯಾಟರ್ಸ್ ಸ್ಟ್ರಗಲ್!
ಭಾರತ ಬ್ಯಾಟಿಂಗ್ನಲ್ಲಿ ರನ್ಸ್ ಮಳೆ ಹರಿಸ್ತಿದ್ರೂ ಆಫ್ ಸ್ಪಿನ್ ಅಂತಾ ಬಂದಾಗ ಅಷ್ಟಕ್ಕಷ್ಟೇ ರನ್ಸ್ ಬಂದಿದೆ. ಈ ಬಾರಿಯ ಟೂರ್ನಿಯಲ್ಲಿ ಕನಿಷ್ಠ ಆರು ಓವರ್‌ಗಳ ಆಫ್-ಸ್ಪಿನ್ ಎದುರಿಸಿದ 13 ತಂಡಗಳಲ್ಲಿ ಪ್ರತೀ ಓವರ್ಗೆ ಲೋ ಸ್ಕೋರ್ ಕಲೆ ಹಾಕಿರೋದ್ರಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ನೇಪಾಳ ಒಂದು ಓವರ್ಗೆ ಆಫ್ ಸ್ಪಿನ್ ವಿರುದ್ಧ (5.25) ಮತ್ತು ಓಮನ್ (5.42) ರನ್ಸ್ ಸ್ಕೋರ್ ಮಾಡಿದ್ದಾರೆ. ನೆಕ್ಸ್ಟ್ ಭಾರತ 6.23 ರನ್ಗಳನ್ನ ಸ್ಕೋರ್ ಮಾಡಿದೆ. ಭಾರತಕ್ಕೆ ಹೋಲಿಸಿದ್ರೆ ನಮೀಬಿಯಾನೇ ಬೆಟರ್ ಇದೆ. ನಮೀಬಿಯಾ (6.80 ರನ್ ಸ್ಕೋರ್ ಮಾಡಿದೆ. ಉಳಿದಂತೆ ಬೇರೆಲ್ಲಾ ತಂಡಗಳು 8 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರಿಂಗ್ ಗಳಿಸಿವೆ. ಅದ್ರಲ್ಲೂ ಸೂರ್ಯಕುಮಾರ್ ಯಾದವ್ (27 ಎಸೆತಗಳಲ್ಲಿ 28 ರನ್) ಮತ್ತು ತಿಲಕ್ ವರ್ಮಾ (31 ಎಸೆತಗಳಲ್ಲಿ 26 ರನ್) ಇವ್ರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮಧ್ಯಮ ಓವರ್‌ಗಳಲ್ಲಿ ಆಫ್-ಸ್ಪಿನ್ನರ್‌ಗಳ ವಿರುದ್ಧ ಒದ್ದಾಡ್ತಿದ್ದಾರೆ. ಹೀಗಾಗಿ ಆಫ್ ಸ್ಪಿನ್ನಲ್ಲಿ ಭಾರತದ ಬ್ಯಾಟರ್ಗಳು ಇನ್ನಷ್ಟು ಇಂಪ್ರೆಸ್ಸಿವ್ ಆಗ್ಬೇಕಿದೆ.
ನಂಬರ್ 3
ಅಭಿಷೇಕ್ ಶರ್ಮಾ ಹ್ಯಾಟ್ರಿಕ್ ಡಕ್ ಔಟ್!
ಭಾರತಕ್ಕೆ ಇರೋ ಇನ್ನೊಂದು ಟೆನ್ಷನ್ ಅಂದ್ರೆ ಅದು ಅಭಿಷೇಕ್ ಶರ್ಮಾ. ಗೇಮ್ ಚೇಂಜರ್ ಆಗಿದ್ದ ಅಭಿಷೇಕ್ ಈಗ ಡಕ್ ಸ್ಟಾರ್ ಆಗಿದ್ದಾರೆ. ಅದೂ ಕೂಡ ಹ್ಯಾಟ್ರಿಕ್ ಡಕ್. ಅಭಿಷೇಕ್ ಶರ್ಮಾ ಪ್ರಸ್ತುತ ವಿಶ್ವದ ನಂಬರ್ 1 ಟಿ20ಐ ಬ್ಯಾಟ್ಸ್‌ಮನ್. ಆದಾಗ್ಯೂ, ಅವರು ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಇನ್ನೂ ಒಂದೇ ಒಂದು ರನ್ ಗಳಿಸಿಲ್ಲ. ನೆದರ್ಲ್ಯಾಂಡ್ಸ್ ವಿರುದ್ಧ 3ನೇ ಬಾರಿ ಶೂನ್ಯಕ್ಕೆ ಔಟಾದ ನಂತರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಅತಿ ಹೆಚ್ಚು ಡಕ್ ಔಟ್ ಆದ ಭಾರತೀಯ ಎನಿಸಿಕೊಂಡಿದ್ದಾರೆ. ಸೋ ಸೂಪರ್ 8ನಲ್ಲೂ ಅವ್ರು ಕಂ ಬ್ಯಾಕ್ ಮಾಡಿಲ್ಲ ಅಂದ್ರೆ ಅದು ಭಾರತಕ್ಕೆ ಹೊರೆಯಾಗೋದ್ರಲ್ಲಿ ಅನುಮಾನವೇ ಇಲ್ಲ.
ನಂಬರ್ 4
ಡೆತ್ ಓವರ್ ಗಳಲ್ಲಿ ಹೆಚ್ಚಿನ ರನ್ ಕೊಡ್ತಿರೋ ಭಾರತ!
ಭಾರತದ ಬೌಲಿಂಗ್ ಸೂಪರ್ ಸಾಲಿಡ್ ಆಗಿದೆ ಅನ್ನಿಸ್ಬೋದು. ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಭಾರತೀಯ ಬೌಲಿಂಗ್ ಬಲಿಷ್ಠವಾಗಿ ಕಾಣಿಸಬಹುದು. ಆದ್ರೆ ಟೂರ್ನಮೆಂಟ್‌ನಲ್ಲಿ ಇದುವರೆಗೆ ಬಲಿಷ್ಠ ತಂಡದ ಬ್ಯಾಟಿಂಗ್ ದಾಳಿ ಎದುರಿಸಿರಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಕ್ರಮವಾಗಿ 34, 11 ಮತ್ತು 20 ರನ್‌ಗಳನ್ನು ಬಿಟ್ಟುಕೊಟ್ಟರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಕ್ರಮವಾಗಿ 4, 4 ಮತ್ತು 3 ವಿಕೆಟ್‌ಗಳನ್ನು ಪಡೆದಿದ್ರು. ಬಟ್ ಕೊನೇ ಮ್ಯಾಚಲ್ಲಿ ನೆದರ್ಲ್ಯಾಂಡ್ಸ್ ಬ್ಯಾಟ್ಸ್‌ಮನ್‌ಗಳಾದ ಜ್ಯಾಕ್ ಲಯನ್-ಕ್ಯಾಚೆಟ್ ಮತ್ತು ನೋಹ್ ಕ್ರೋಸ್ ಭಾರತಕ್ಕೆ ಕಾಡಿದ್ರು. ಡಚ್ ಬ್ಯಾಟ್ಸ್‌ಮನ್‌ಗಳು ಕೊನೆಯ ನಾಲ್ಕು ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ 61 ರನ್‌ಗಳನ್ನು ಗಳಿಸಿದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಡೆತ್ ಓವರ್‌ಗಳಲ್ಲಿ ಹೆಚ್ಚಿನ ರನ್ಸ್ ಹೋಗದಂತೆ ತಡೆಯಬೇಕಿದೆ.
ನಂಬರ್ 5
ಗ್ರೂಪ್ ಸ್ಟೇಜ್ ನಲ್ಲಿ ಅಜೇಯವಾಗಿರುವ ಸೌತ್ ಆಫ್ರಿಕಾ!
ಭಾರತಕ್ಕೆ ಇರೋ 5ನೇ ಚಾಲೆಂಜ್ ಅಂದ್ರೆ ಇದೇ ನೋಡಿ. ದಕ್ಷಿಣ ಆಫ್ರಿಕಾ ಕೂಡ ಟೂರ್ನಮೆಂಟ್‌ನಲ್ಲಿ ಅಜೇಯವಾಗಿದೆ. +1.943 ನಿವ್ವಳ ರನ್ ದರದೊಂದಿಗೆ ಗುಂಪು ಹಂತದಲ್ಲಿ ಯಾವುದೇ ಪಂದ್ಯವನ್ನು ಸೋತಿಲ್ಲ. ದಕ್ಷಿಣ ಆಫ್ರಿಕಾ 8 ಅಂಕಗಳನ್ನು ಹೊಂದಿದ್ದು, ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್‌ಗಿಂತ ಮೇಲಿದೆ. ಹೀಗಾಗಿ ಹರಿಣಪಡೆ ಕೂಡ ಫೈಟ್ ಕೊಡೋಕೆ ಕಾಯ್ತಿದೆ. ಸೂಪರ್ 8 ಸುತ್ತು ಗೆಲ್ಲೋದು ಅಷ್ಟು ಈಸಿ ಇಲ್ಲ. ಅದ್ರಲ್ಲೂ ಇವತ್ತಿನ ಪಂದ್ಯ ಭಾರತಕ್ಕೆ ಹೊಸ ಅಗ್ನಿಪರೀಕ್ಷೆಯಾಗಲಿದೆ.

ನೋಡಿರಿ

