ಭಾರತದಲ್ಲಿ ಚಕ್ರವರ್ತಿ ಚಕ್ರವ್ಯೂಹ – ವರುಣ್ ಸ್ಪಿನ್ ಬಲೆಗೆ ಬಿದ್ದವರೆಷ್ಟು?
ಬುಮ್ರಾಗಿಂತಲೂ ಗ್ರೇಟ್ ಈ ಸ್ಪಿನ್ನರ್

2024ರ ಟಿ-20 ವಿಶ್ವಕಪ್ನಿಂದ ಹಿಡ್ದು ಅಟ್ ಪ್ರಸೆಂಟ್ ವಿಶ್ವಕಪ್ನಲ್ಲೂ ಟೀಂ ಇಂಡಿಯಾ ಮೋಸ್ಟ್ ಡೇಂಜರಸ್ ಟೀಂ. ಭಾರತದ ಈ ಅಜೇಯ ವಿಜಯಯಾತ್ರೆ ಹಿಂದಿರೋದು ಆಬಿಯಸ್ಲಿ ಆಟಗಾರರೇ. ಬ್ಯಾಟಿಂಗ್, ಬೌಲಿಂಗ್ ಎಲ್ಲದ್ರಲ್ಲೂ ದಿ ಬೆಸ್ಟ್ ಪ್ಲೇಯರ್ಸ್ ಇದ್ದಾರೆ. ಌಂಡ್ ನಾವು ಪ್ರತೀ ಸಲ ಪಂದ್ಯ ಗೆದ್ದಾಗ ಅಭಿಷೇಕ್ ಬಗ್ಗೆ ಮಾತಾಡ್ತೀವಿ, ಕಿಶನ್ ಬಗ್ಗೆ ಹೇಳ್ತೀವಿ, ಬುಮ್ರಾರನ್ನ ಕೊಂಡಾಡ್ತೀವಿ. ಆದ್ರೆ ಪ್ರತೀ ಮ್ಯಾಚಲ್ಲೂ ಸುದ್ದಿ ಇಲ್ಲದೇ ಸದ್ದು ಮಾಡ್ತಿರೋ ರಿಯಲ್ ಹೀರೋ ಅಂದ್ರೆ ಅದು ವರುಣ್ ಚಕ್ರವರ್ತಿ. ಎದುರಾಳಿ ಬ್ಯಾಟರ್ಗಳನ್ನ ತಮ್ಮ ಸ್ಪಿನ್ ಬಲೆಯಲ್ಲಿ ಬೀಳಿಸಿ ಭಾರತಕ್ಕೆ ಗೆಲುವಿನ ಗಿಫ್ಟ್ ಕೊಡ್ತಿದ್ದಾರೆ. ವರುಣ್ ಅಖಾಡಕ್ಕಿಳಿದ್ರೆ ವಿಕೆಟ್ ಫಿಕ್ಸ್ ಎನ್ನುವಂತಾಗಿದೆ.
ಇದನ್ನೂ ಓದಿ : ಭಾರತಕ್ಕೆ ಇನ್ಮುಂದೆ REAL ಟಾಸ್ಕ್ – 3 ಎದುರಾಳಿಗಳೂ ಸೂಪರ್ ಸ್ಟ್ರಾಂಗ್!
ಭಾರತ ತಂಡ ಬ್ಯಾಟಿಂಗ್ನಲ್ಲಿ ಲೋ ಸ್ಕೋರ್ ಇದ್ದಾಗ್ಲೂ ಅದನ್ನ ಡಿಫೆನ್ಸ್ ಮಾಡಿಕೊಳ್ತಿರೋದೇ ಕ್ವಾಲಿಟಿ ಬೌಲರ್ಗಳಿಂದ. ಬುಮ್ರಾರಂತ ವರ್ಲ್ಡ್ ಕ್ಲಾಸ್ ಬೌಲರ್, ಹಾರ್ದಿಕ್ ಪಾಂಡ್ಯನಂಥ ಸ್ಟಾರ್ ಆಲ್ರೌಂಡರ್, ಅರ್ಶದೀಪ್ನಂಥ ಗೇಮ್ ಚೇಂಜರ್ ಜೊತೆಗೆ ವರುಣ್ ಚಕ್ರವರ್ತಿಯಂಥ ಮ್ಯಾಚ್ ವಿನ್ನರ್ ಟೀಮ್ನಲ್ಲಿದ್ದಾರೆ. ಅದ್ರಲ್ಲೂ ಬುಮ್ರಾ, ಪಾಂಡ್ಯ, ಅರ್ಶದೀಪ್ ವಿಕೆಟ್ ತೆಗೆದಾಗ ಸದ್ದು ಮಾಡ್ತಾರೆ. ಆದ್ರೆ ಸೈಲೆಂಟ್ ಕಿಲ್ಲರ್ನಂತೆ ಎದುರಾಳಿ ಬ್ಯಾಟರ್ಗಳಿಗೆ ಮಾರಕ ಆಗ್ತಿರೋದು ವರುಣ್ ಚಕ್ರವರ್ತಿಯವ್ರ ಸ್ಪಿನ್ ಬಲೆ.
ಸತತ 17 ಪಂದ್ಯಗಳಲ್ಲಿ ವಿಕೆಟ್ ತೆಗೆದು ವರುಣ್ ದಾಖಲೆ!
ವರುಣ್ ಚಕ್ರವರ್ತಿಯವ್ರ ಕನ್ಸಿಸ್ಟೆನ್ಸಿ ಬೌಲಿಂಗ್ಗೆ ಇದೇ ಸಾಕ್ಷಿ. ಭಾರತದ ಪರ ಸತತ 17 ಪಂದ್ಯಗಳಿಂದ ಪ್ರತೀ ಮ್ಯಾಚಲ್ಲೂ ಮಿನಿಮಮ್ ಒಂದಾದ್ರೂ ವಿಕೆಟ್ ಪಡೆದಿದ್ದಾರೆ. ಇದು ಭಾರತದ ಪರ ಟಿ-20ಐನಲ್ಲಿ ಸತತವಾಗಿ 17 ಪಂದ್ಯಗಳಲ್ಲಿ ವಿಕೆಟ್ ತೆಗೆದ ಬೌಲರ್ ಎನಿಸಿಕೊಂಡಿದ್ದಾರೆ. ಅರ್ಶ್ದೀಪ್ ಸಿಂಗ್ ಅವ್ರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಈ ಮೂಲಕ ಟಿ-20ಐನಲ್ಲಿ ಸತತವಾಗಿ ಅತೀ ಹೆಚ್ಚು ಪಂದ್ಯಗಳಲ್ಲಿ ವಿಕೆಟ್ ಪಡೆದವ್ರ ಪಟ್ಟಿಯಲ್ಲಿ ಜಗತ್ತಿನಲ್ಲೇ ನಂಬರ್ 4ನಲ್ಲಿದ್ದಾರೆ. ನೇಪಾಳದ ಸಂದೀಪ್ ಲಾಮಿಚಾನೆ 2022ರಲ್ಲಿ ಸತತ 26 ಪಂದ್ಯಗಳಲ್ಲಿ ವಿಕೆಟ್ ಪಡೆದು ಈ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ವರುಣ್ ಚಕ್ರವರ್ತಿ 10 ಪಂದ್ಯಗಳ ಟಿ20ಐ ಬ್ಲಾಕ್ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 27 ವಿಕೆಟ್ಗಳನ್ನು ಪಡೆದು ಅಜಂತಾ ಮೆಂಡಿಸ್ ಅವರ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ವರುಣ್ ಬೌಲಿಂಗ್ ಜಡ್ಜ್ ಮಾಡೋದೇ ಬ್ಯಾಟರ್ ಗಳಿಗೆ ಕಷ್ಟ!
ವರುಣ್ ಚಕ್ರವರ್ತಿಯವ್ರ ಸಾಮರ್ಥ್ಯವೇ ಅಂಥಾದ್ದು. ಯಾಕಂದ್ರೆ ವರುಣ್ ಯಾವ್ ಥರ ಬೌಲ್ ಮಾಡ್ತಾರೆ ಅನ್ನೋದೇ ಜಡ್ಜ್ ಮಾಡೋಕೆ ಆಗಲ್ಲ. ಅದು ಗೂಗ್ಲಿಯೇ? ಅಥವಾ ಡೈರೆಕ್ಟಾ, ಅಥವಾ ಸ್ಲೋ ಬಾಲ್, ಸ್ಪೀಡ್ ಇದ್ಯಾ ಗೊತ್ತಾಗಲ್ಲ. ಬಾಲ್ ಟು ಬಾಲ್ ವೇರಿಯೇಷನ್ಸ್ ಇರುತ್ತೆ. ಬಟ್ ಸ್ಟಂಪ್ಸ್ನೆ ಟಾರ್ಗೆಟ್ ಮಾಡಿ ಬಾಲ್ ಹಾಕ್ತಾರೆ. ಬ್ಯಾಟರ್ ಚೂರು ಯಾಮಾರಿದ್ರೂ ಬೇಲ್ಸ್ ಎಗರುತ್ತೆ. ಌಕ್ಚುಲಿ ವರುಣ್ ಚಕ್ರವರ್ತಿ 3 ವರ್ಷ ಭಾರತದ ಪರ ಆಡಿರಲಿಲ್ಲ. 2024ರಲ್ಲಿ ಮತ್ತೆ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರು. 2024 ಮತ್ತು 2025 ರ ಅವಧಿಯಲ್ಲಿ 27 ಪಂದ್ಯಗಳಲ್ಲಿ ಒಟ್ಟು 47 ವಿಕೆಟ್ಗಳನ್ನು ಬೇಟೆಯಾಡಿದ್ದಾರೆ. ಈ ವರ್ಷ 7 ಪಂದ್ಯಗಳಿಂದ 13 ವಿಕೆಟ್ ತೆಗೆದಿದ್ದಾರೆ. ಭಾರತ 2026 ರ ಟಿ 20 ವಿಶ್ವಕಪ್ ಗೆದ್ದರೆ ಪ್ಲೇಯರ್ ಆಫ್ ಟೂರ್ನಮೆಂಟ್ ರೇಸ್ನಲ್ಲಿ ಫಸ್ಟ್ ಪ್ಲೇಸ್ನಲ್ಲಿರ್ತಾರೆ. ಅಷ್ಟಕ್ಕೂ ವರುಣ್ ಒಬ್ಬ ಸಕ್ಸಸ್ಫುಲ್ ಬೌಲರ್ ಆಗೋಕೆ ಕಾರಣವೂ ಇದೆ. ಅದೇನಂದ್ರೆ ಅವ್ರು ರನ್ಸ್ ಕೊಡಲ್ಲ. ಕೊಟ್ರೂ ಅಂದ್ರೆ ತುಂಬಾ ದುಬಾರಿ ಅನ್ಸಿದ್ರೂ 34 ಅಥವಾ 35 ರನ್ಸ್ ಅಷ್ಟೇ ಕೊಟ್ಟಿದ್ದಾರೆ. ಇದ್ರಲ್ಲೂ ಒಂದು ಅಥವಾ ಎರಡು ವಿಕೆಟ್ಟ್ ತೆಗೆದಿರ್ತಾರೆ. ಕೆಲವು ವರ್ಷಗಳ ಹಿಂದೆ ಬುಮ್ರಾ ಟಿ20ಯಲ್ಲಿ ಏನ್ ಮ್ಯಾಜಿಕ್ ಮಾಡ್ತಿದ್ರೋ ಈಗ ವರುಣ್ ಅದನ್ನೇ ಮಾಡ್ತಿದ್ದಾರೆ.
ಬುಮ್ರಾಗಿಂತ ವರುಣ್ ಮಾರಕ ಬೌಲರ್ ಎಂದ ಶ್ರೀಕಾಂತ್!
ಜಸ್ಪ್ರೀತ್ ಬುಮ್ರಾರನ್ನು ಜಗತ್ತಿನಲ್ಲೇ ದಿ ಬೆಸ್ಟ್ ಫಾಸ್ಟ್ ಬೌಲರ್ ಎನ್ನಲಾಗುತ್ತೆ. ಆದ್ರೆ ಬುಮ್ರಾಗಿಂತ ವರುಣ್ ಚಕ್ರವರ್ತಿ ಮಾರಕ ಬೌಲರ್ ಅಂತಾ ಭಾರತದ ಮಾಜಿ ಕ್ರಿಕಟಿಗ ಕೆ ಶ್ರೀಕಾಂತ್ ಹೇಳಿದ್ದಾರೆ. ಈಗಾಗ್ಲೇ 2026 ರ ಟಿ20 ವಿಶ್ವಕಪ್ನಲ್ಲಿ ನಾಲ್ಕು ಪಂದ್ಯಗಳಲ್ಲಿ ವರುಣ್ 9 ವಿಕೆಟ್ಗಳನ್ನು ಕಬಳಿಸಿದ್ದಾರೆ. ಸರಾಸರಿ 6.88 ಮತ್ತು 5.16 ರ ಎಕಾನಮಿ ರೇಟ್ ಇದೆ. ಅದ್ರಲ್ಲೂ ನೆದರ್ಲ್ಯಾಂಡ್ಸ್ ವಿರುದ್ಧ 14 ರನ್ ನೀಡಿ 3 ವಿಕೆಟ್ ಪಡೆದಿದ್ರು. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ ಮೂರು ಪಂದ್ಯಗಳಲ್ಲಿ 6.00 ಎಕಾನಮಿಯಲ್ಲಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದಾರೆ. 17 ರನ್ ನೀಡಿ 2 ವಿಕೆಟ್ ಪಡೆದಿರೋದು ಅವ್ರ ಬೆಸ್ಟ್ ಇನ್ನಿಂಗ್ಸ್. ವರುಣ್ ಚಕ್ರವರ್ತಿ ಮತ್ತು ಬುಮ್ರಾ ಒಟ್ಟಿಗೆ 21 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ವರುಣ್ 30 ವಿಕೆಟ್ ಪಡೆದಿದ್ರೆ ಬುಮ್ರಾ 22 ವಿಕೆಟ್ ಬೇಟೆಯಾಡಿದ್ದಾರೆ. ಹೀಗಾಗಿ ವರುಣ್ ಬೆಸ್ಟ್ ಅಂದಿರೋ ಶ್ರೀಕಾಂತ್, ವರುಣ್ಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಬ್ಯಾಟ್ಸ್ಮನ್ಗಳು ವರುಣ್ ಆಟವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದಿದ್ದಾರೆ.
ಒಟ್ನಲ್ಲಿ ವರುಣ್ ಚಕ್ರವರ್ತಿ ಪ್ರತೀ ಮ್ಯಾಚಲ್ಲೂ ಸದ್ದಿಲ್ಲದೇ ತಮ್ಮ ಕೆಲಸ ಮಾಡ್ತಿದ್ದಾರೆ. ಹಲವು ತಿಂಗಳಿಂದಲೂ ಟಿ-20ಐನ ನಂಬರ್ 1 ರ್ಯಾಂಕಿಂಗ್ ಬೌಲರ್ ಆಗಿದ್ದಾರೆ. ಈ ವಿಶ್ವಕಪ್ನಲ್ಲೂ ಭಾರತದ ಪರ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಆಲ್ರೆಡಿ ಸೂಪರ್ 8 ಫೈಟ್ ಸ್ಟಾರ್ಟ್ ಆಗಿದೆ. ಗ್ರೂಪ್ 1ನಲ್ಲಿರೋ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಇವತ್ತು ಮುಖಾಮುಖಿ ಆಗಲಿವೆ. ಈ ಮ್ಯಾಚ್ ಅಂತೂ ಹೈವೋಲ್ಟೇಜ್ ಆಗಿರೋದ್ರಲ್ಲಿ ಡೌಟೇ ಇಲ್ಲ. ಈ ಪಂದ್ಯದಲ್ಲೂ ವರುಣ್ ಚಕ್ರವರ್ತಿ ಮೇಲೆ ಎಲ್ಲರ ಕಣ್ಣಿದೆ. ಕೂಲ್ ಌಂಡ್ ಕಾಮ್ ಆಗಿಯೇ ಬೌಲ್ ಮಾಡೋ ವರುಣ್ ವಿಕೆಟ್ ಬಿದ್ರೂ ಸೈಲೆಂಟಾಗಿ ಇರ್ತಾರೆ. ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಲ್ಲ. ನೆಕ್ಸ್ಟ್ ಬಾಲ್ಗೆ ರೆಡಿಯಾಗ್ತಾರೆ. ಈಗಾಗ್ಲೇ ಸೌತ್ ಆಫ್ರಿಕಾ ಆಟಗಾರ ಡೆವಾಲ್ಡ್ ಬ್ರೆವಿಸ್ ವರುಣ್ರನ್ನ ಫೇಸ್ ಮಾಡೋಕೆ ಬ್ಲ್ಯೂ ಪ್ರಿಂಟ್ ರೆಡಿಯಾಗಿದೆ ಅನ್ನೋ ಮೂಲಕ ವರುಣ್ ಎಷ್ಟು ಡೇಂಜರಸ್ ಅನ್ನೋದನ್ನ ಹೇಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ವರುಣ್ ಭಾರತದ ಪರ ಗೇಮ್ ಚೇಂಜರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

