ಬ್ರೆಜಿಲಿಯನ್ ಕೋಳಿ ಭಾರತಕ್ಕೆ ಬರುತ್ತಾ?- ಸುಂಕ ಸಮಸ್ಯೆ ಇತ್ಯರ್ಥವಾದರೆ ಕೋಳಿ ಮಾಂಸದ ರುಚಿ ಸವಿಯಬಹುದು!

ಬ್ರೆಜಿಲಿಯನ್ ಕೋಳಿ ಭಾರತಕ್ಕೆ ಬರುತ್ತಾ?- ಸುಂಕ ಸಮಸ್ಯೆ ಇತ್ಯರ್ಥವಾದರೆ ಕೋಳಿ ಮಾಂಸದ ರುಚಿ ಸವಿಯಬಹುದು!

ನಾನ್‌ವೆಜ್ ಪ್ರಿಯರಿಗೆ ಶೀಘ್ರದಲ್ಲೇ ಬ್ರೆಜಿಲಿಯನ್ ಚಿಕನ್ ಟೇಸ್ಟ್ ಮಾಡುವ ಅವಕಾಶ ಸಿಗಲಿದೆ. ಯಾಕೆಂದರೆ, ಬ್ರೆಜಿಲಿಯನ್ ಕೋಳಿ ಭಾರತಕ್ಕೆ ಎಂಟ್ರಿಕೊಡುವ ಚಾನ್ಸ್ ಹೆಚ್ಚಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ : ಡೊನಾಲ್ಡ್ ಟ್ರಂಪ್

ಭಾರತದಲ್ಲಿ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಜೊತೆಗೆ ಕೋಳಿ ಮಾಂಸ ಜನಪ್ರಿಯ ಆಹಾರವೂ ಹೌದು. ದೇಶೀಯ ಕೋಳಿಗಳ ಜೊತೆಗೆ ವಿವಿಧ ತಳಿಯ ಕೋಳಿಗಳು ಕೂಡಾ ಇವೆ. ಇದೀಗ ಬ್ರೆಜಿಲಿಯನ್ ಕೋಳಿ ಕೂಡಾ ಭಾರತಕ್ಕೆ ಬರಲಿದೆ ಎಂಬ ಮಾತು ಕೇಳಿಬಂದಿದೆ. ಇತ್ತೀಚೆಗೆ ಬ್ರೆಜಿಲ್​ ಸರ್ಕಾರ ಮತ್ತು ಅಲ್ಲಿನ ಕೈಗಾರಿಕಾ ಸಂಘಟನೆಭಾರತಕ್ಕೆ ಹೆಚ್ಚು ಪ್ರಮಾಣದಲ್ಲಿ ಕೋಳಿ ಮಾಂಸ ರಫ್ತು ಮಾಡುವ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕೋಳಿಗೆ ಬದಲಾಗಿ ಭಾರತದಿಂದ ಕೆಲವು ಹಣ್ಣುಗಳು ಮತ್ತು ಬೀಜಗಳನ್ನು ಬ್ರೆಜಿಲ್ ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ. ಪ್ರಸ್ತುತ ಬ್ರೆಜಿಲ್ ವಿಶ್ವದ ಅತಿದೊಡ್ಡ ಕೋಳಿ ರಫ್ತುದಾರ ದೇಶವಾಗಿದೆ. 150 ಕ್ಕೂ ಹೆಚ್ಚು ದೇಶಗಳಿಗೆ ಅದು ಕೋಳಿ ಮಾಂಸ ಕಳುಹಿಸುತ್ತದೆ. ಆದರೆ ಭಾರತಕ್ಕೆ ಬಹಳ ಕಡಿಮೆ ಪ್ರಮಾಣ ಮಾತ್ರ ರಫ್ತು ಮಾಡುತ್ತದೆ. 2025ರಲ್ಲಿ ಬ್ರೆಜಿಲ್ ಭಾರತಕ್ಕೆ ಕೇವಲ 2.47 ಟನ್ ಕೋಳಿ ಮಾತ್ರ ಕಳುಹಿಸಿದೆ. ಅದೇ ಸಮಯದಲ್ಲಿ ಅದರ ಪ್ರಮುಖ ಮಾರುಕಟ್ಟೆಯಾದ ಯುಎಇಗೆ 4,79,900 ಟನ್‌ಗಳಷ್ಟು ಕೋಳಿ ರಫ್ತು ಮಾಡಿದೆ.

ಇಷ್ಟು ಸಮಯ ಭಾರತಕ್ಕೆ ಹೆಚ್ಚು ಕೋಳಿ ಬರದೆ ಇರಲು ಕಾರಣ ಸುಂಕ ಸಮಸ್ಯೆ. ಭಾರತವು ಕೋಳಿ ತುಂಡುಗಳ ಮೇಲೆ 100% ಸುಂಕ ಮತ್ತು ಸಂಪೂರ್ಣ ಕೋಳಿ ಮೇಲೆ 30% ಸುಂಕ ವಿಧಿಸಿದೆ. ಇದರಿಂದ ಬ್ರೆಜಿಲ್‌ನ ಕೋಳಿ ಭಾರತದಲ್ಲಿ ದುಬಾರಿ ಆಗುತ್ತದೆ. ಹೀಗಾಗಿ ವ್ಯಾಪಾರ ಹೆಚ್ಚಾಗಲು ಸಾಧ್ಯವಾಗುತ್ತಿಲ್ಲ. ಬ್ರೆಜಿಲ್ ಕೃಷಿ ಸಚಿವ ಕಾರ್ಲೋಸ್ ಅವರ ಪ್ರಕಾರ, ಭಾರತ ಮತ್ತು ಬ್ರೆಜಿಲ್ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿವೆ. ಬ್ರೆಜಿಲ್ ಭಾರತದಿಂದ ದಾಳಿಂಬೆ ಮತ್ತು ಮಕಾಡಾಮಿಯಾ ಬೀಜಗಳನ್ನು ಆಮದು ಮಾಡಲು ಸಿದ್ಧವಾಗಿದೆ. ಪ್ರತಿಯಾಗಿ ಬ್ರೆಜಿಲಿಯನ್ ಕೋಳಿ ಮತ್ತು ಯೆರ್ಬಾ ಮೇಟ್‌ಗೆ ಅವಕಾಶ ಹೆಚ್ಚಿಸಲು ಬಯಸುತ್ತಿದೆ.

Sulekha

Leave a Reply

Your email address will not be published. Required fields are marked *