ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು! – ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು! – ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ದಿನೇ ದಿನೆ ಬೆಳಕಿಗೆ ಬರುತ್ತಿದೆ. ರೆಸಾರ್ಟ್‌ನಲ್ಲೂ ಸೀಗದ ಸೌಲಭ್ಯ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸುಲಭವಾಗಿ ಸಿಗುತ್ತಿವೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ ಆಯ್ತು. ಈಗ ಹುಬ್ಬಳಿಯ ಜೈಲಿನಲ್ಲೂ ಕೈದಿಗಳು ಬಿಂದಾಸ್‌ ಜೀವನ ಮಾಡುತ್ತಿದ್ದಾರೆ. ಗಾಂಜಾ, ಮದ್ಯ, ಮಾಂಸ ಸೇವನೆಯಲ್ಲಿ ಕೈದಿಗಳು ತೇಲಾಡುತ್ತಿರುವ ವಿಡಿಯೋ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಮತ್ತೊಂದು ಎಟಿಎಂ ದರೋಡೆ – 3 ಕೋಟಿಯಷ್ಟು ಹಣ ಲಪಟಾಯಿಸಿದ ಕಂಪನಿ ಸಿಬ್ಬಂದಿ

ಮೂರು ದಿನದ ಹಿಂದೆಯಷ್ಟೆ ಹುಬ್ಬಳ್ಳಿ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಹುಬ್ಬಳ್ಳಿ ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಭೇಟಿ ನೀಡಿದ ಮೂರು ದಿನಗಳಲ್ಲೇ ಜೈಲಿನೊಳಗೆ ಎಗ್ಗಿಲ್ಲದೇ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಜೈಲಿನಲ್ಲಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದಾರೆ. ಗುಂಡು, ತುಂಡು, ಗಾಂಜಾ, ಟಿವಿ, ಮೊಬೈಲ್‌ಗಳನ್ನು ಬಳಸಿಕೊಂಡು ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಟೈಮ್‌ಪಾಸ್ ಮಾಡಲು ಕೇರಂ ಬೋರ್ಡ್ ವ್ಯವಸ್ಥೆ ಕೂಡ ಮಾಡಲಾಗಿದೆ.  ಇದ್ರ ವಿಡಿಯೋ ಭಾರಿ ವೈರಲ್‌ ಆಗಿದೆ.

ಇದೀಗ ವೈರಲ್‌ ಆಗ್ತಿರುವ ವಿಡಿಯೋ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಸತ್ಯ ಒಪ್ಪಿಕೊಂಡಿದ್ದಾರೆ. ವಿಡಿಯೋಗಳು ಸಬ್ ಜೈಲಿನದ್ದು, ಆದರೆ ಡಿಸೆಂಬರ್ 2025 ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಬಂಧಿತ ಘಟನೆ ನಡೆದಿರುವುದು ಸತ್ಯ. ಆದರೆ, ಅದು ನಾನು ಹುದ್ದೆ ಸ್ವೀಕರಿಸುವ ಮೊದಲು ನಡೆದದ್ದು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಹುದ್ದೆ ಸ್ವೀಕರಿಸಿದ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದೇನೆ. ಸಂಬಂಧಪಟ್ಟ ಸಿಬ್ಬಂದಿಯ ನಿರ್ಲಕ್ಷ್ಯ ಸಾಬೀತಾದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *