ಅಬ್ಬಬ್ಬಾ.. ಸುಟ್ಟುಹೋದ ಈ ಶರ್ಟ್‌ ಬೆಲೆ 1 ಲಕ್ಷ ರೂಪಾಯಿ! – ಏನಿದರ ಸ್ಪೆಷಾಲಿಟಿ?

ಅಬ್ಬಬ್ಬಾ.. ಸುಟ್ಟುಹೋದ ಈ ಶರ್ಟ್‌ ಬೆಲೆ 1 ಲಕ್ಷ ರೂಪಾಯಿ! – ಏನಿದರ ಸ್ಪೆಷಾಲಿಟಿ?

ಇದು ಫ್ಯಾಷನ್‌ ಯುಗ. ಯಾವಾಗ ಏನು ಟ್ರೆಂಡಿಂಗ್‌ನಲ್ಲಿರುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಒಂದು ಕಾಲದಲ್ಲಿ ಧರಿಸೋ ಬಟ್ಟೆ ನೀಟ್‌ ಆಗಿ ಇರ್ಬೇಕು. ಯಾವುದೇ ಕಲೆ ಇರಬಾರದು ಎಂದು ಹೇಳ್ತಿದ್ರು. ಆದ್ರೆ ಈಗ ಹಾಗಲ್ಲ. ಹರಿದಿರೋ ಬಟ್ಟೆ ಹಾಕೋದು ಕೂಡ ಟ್ರೆಂಡ್‌ ಆಗಿದೆ. ಇದೀಗ ಇಲ್ಲೊಂದು ಸುಟ್ಟ ಬಟ್ಟೆಯನ್ನ ಮಾರಾಟಕ್ಕೆ ಇಡಲಾಗಿದೆ. ಇದ್ರ ಬೆಲೆ ಕೇಳಿದ್ರೆ ಶಾಕ್‌ ಆಗೋದು ಪಕ್ಕಾ.

ಇದನ್ನೂ ಓದಿ: ರೀಲ್ಸ್ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! – ಇನ್ಮುಂದೆ ಈ ಸ್ಥಳಗಳಲ್ಲಿ ರೀಲ್ಸ್‌ ಮಾಡುವಂತಿಲ್ಲ!

ವೆಟ್‌ಮೆಂಟ್ಸ್ ಎಂಬ ಫ್ಯಾಷನ್ ಬ್ರ್ಯಾಂಡ್ ವಿಭಿನ್ನ ಶರ್ಟ್ ಒಂದನ್ನು ಗ್ರಾಹಕರಿಗೆ ಪರಿಚಯಿಸಿದೆ.  ಈ ಶರ್ಟ್‌ ಒಂದು ಸೈಡ್‌ ಸುಟ್ಟು ಹೋಗಿರುವಂತೆ ಡಿಸೈನ್‌ ಮಾಡಲಾಗಿದೆ. ಇದರ ವಿನ್ಯಾಸ, ಬೆಲೆ ಕೇಳಿ ಜನ ಶಾಕ್‌ ಆಗಿದ್ದಾರೆ.

ದುಬಾರಿ ಬಟ್ಟೆಗಳನ್ನು ಐರನ್‌ ಮಾಡುವಾಗ ಹುಷಾರಾಗಿ ಇರ್ತೇವೆ. ಬಟ್ಟೆ ಎಲ್ಲಿ ಸುಟ್ಟು ಹೋಗುತ್ತೆ ಅನ್ನೋ ಭಯಕ್ಕೆ. ಮೂರ್ನಾಲ್ಕು  ಭಾರಿ ಗಮನಿಸಿ ಐರನ್ ಮಾಡುತ್ತೇವೆ‌‌‌. ಒಂದ್ವೇಳೆ ಅದು ಸುಟ್ಟು ಹೋದ್ರೆ ಮತ್ತೆ ಅದನ್ನ ಬಳಸುವುದೇ ಇಲ್ಲ. ಆದ್ರೀಗ ವೆಟ್‌ಮೆಂಟ್ಸ್ ಕಂಪನಿಯು  ಸುಟ್ಟ ಹೋಗಿವಂತಹ ಡಿಸೈನ್‌  ಬಿಳಿ ಶರ್ಟ್ ಅನ್ನು ಮಾರುಕಟ್ಟೆಗೆ ತಂದಿದೆ. ಇಸ್ತ್ರಿ ಬರ್ನ್ ಗ್ರಾಫಿಕ್ ಶರ್ಟ್ ಎಂಬ ಶೈಲಿಯ ಹೆಸರಿನಲ್ಲಿ ಮಾರಾಟವಾಗುವ ಈ ಡ್ರೆಸ್‌ ಅನ್ನು ಸ್ಕಾರ್ಚ್ ತರಹದ ಮುದ್ರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಬಟ್ಟೆಯನ್ನು $1,139 (ಸುಮಾರು 1.03 ಲಕ್ಷ ರುಪಾಯಿ) ಮಾರಾಟ ಮಾಡಲಾಗುತ್ತಿದೆ. ಈ ಶರ್ಟ್‌ನ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳ ಮೂಲಕ ಬ್ರ್ಯಾಂಡ್‌ನ ಕಾಲೆಳೆಯುತ್ತಿದ್ದಾರೆ.

ಶರ್ಟ್‌ನ ಚಿತ್ರ ವೈರಲ್ ಆದ ತಕ್ಷಣ, ಹಲವು ಬಳಕೆದಾರರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ‌. ನೆಟ್ಟಿಗರೊಬ್ಬರು ನಾನು ಇದನ್ನು ವರ್ಷಗಳಿಂದ ಉಚಿತವಾಗಿ ಧರಿಸುತ್ತಿದ್ದೇನೆ ಎಂದಿದ್ದಾರೆ‌. ಮತ್ತೊಬ್ಬರು ನನ್ನ ಬಿಳಿ ಶರ್ಟ್ ಅನ್ನು ನಾನು ಸುಲಭವಾಗಿ ಸುಡಬಹುದು. ಏಕೆ ಹಣ ಪಾವತಿಸಬೇಕು? ಎಂದಿದ್ದಾರೆ. ‌ನಾನು ಬಾಲ್ಯದಲ್ಲೇ ಇಂತಹ ಕೆಲಸದಿಂದ ಬಟ್ಟೆ ಹಾಳು ಮಾಡಿದ್ದೇನೆ. ಈಗ ಇದು ಲಕ್ಷ ರುಪಾಯಿಗೆ ಮಾರಾಟ ಆಗುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.

Shwetha M