ಶ್ರೀಲಂಕಾ ವಿರುದ್ಧ ಗೆದ್ದು ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನ ಫೈನಲ್‌ಗೆ ಪ್ರವೇಶಿಸಿದ ಟೀಂ IND

ಶ್ರೀಲಂಕಾ ವಿರುದ್ಧ ಗೆದ್ದು ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನ ಫೈನಲ್‌ಗೆ ಪ್ರವೇಶಿಸಿದ  ಟೀಂ IND

ಬ್ಯಾಂಕಕ್‌ನ  ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಭಾರತ ಎ ತಂಡ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್‌ನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಭಾರತ ಎದುರಿಸಲಿದೆ. ಫೈನಲ್ ಪಂದ್ಯ ಫೆಬ್ರವರಿ 22 ರಂದು ನಡೆಯಲಿದೆ.

ನಿರ್ಣಾಯಕ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ನಾಯಕಿ ರಾಧಾ ಯಾದವ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 19 ರನ್‌ಗೆ ನಾಲ್ಕು ವಿಕೆಟ್ ಜತೆಗೆ 18 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಅಮೋಘ ಪ್ರದರ್ಶನ ತೋರಿದ್ದರು. ಉಳಿದಂತೆ ತನುಜಾ ಕನ್ವರ್ ಮತ್ತು ಪ್ರೇಮಾ ರಾವತ್ ತಲಾ ಎರಡು ವಿಕೆಟ್ ಪಡೆದರು

ಇದನ್ನೂ ಓದಿ: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್‌ಲೆಸ್ ರೈಲು! – ಏನಾಯ್ತು?

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎ ತಂಡವು 118 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 13.3 ಓವರ್‌ಗಳಲ್ಲಿ 5 ವಿಕೆಟ್‌ಗೆ 119 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್‌ ವೇಳೆ ಕನ್ನಡತಿ ವೃಂದಾ ದಿನೇಶ್‌ 42, ಅನುಷ್ಕಾ ಶರ್ಮಾ 27 ಮತ್ತು ರಾಧಾ ಯಾದವ್‌ ಅಜೇಯ 31 ರನ್‌ ಬಾರಿಸಿದರು. ಲಂಕಾ ಪರ ಬೌಲಿಂಗ್‌ನಲ್ಲಿ ಶಶಿನಿ ಗಿಮ್ಹಾನಿ 2 ವಿಕೆಟ್‌ ಕಿತ್ತರು. ಲಂಕಾ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸಂಜನಾ ಕವಿಂದಿ(31) ಮತ್ತು ಶಶಿನಿ ಗಿಮ್ಹಾನಿ (22) ರನ್‌ ಬಾರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ತಂಡದ ಪರ 7 ಮಂದಿ ಬ್ಯಾಟರ್‌ಗಳು ಒಂದಂಕಿಗೆ ಸೀಮಿತರಾದರು.

Kishor KV