10 ದಿನಗಳ ಡೆಡ್ ಲೈನ್.. ಮಾತು ಕೇಳದಿದ್ರೆ ಯುದ್ಧ ಫಿಕ್ಸ್ – ಇರಾನ್ ಗೆ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್

10 ದಿನಗಳ ಡೆಡ್ ಲೈನ್.. ಮಾತು ಕೇಳದಿದ್ರೆ ಯುದ್ಧ ಫಿಕ್ಸ್ – ಇರಾನ್ ಗೆ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್

ಬಾಯಿ ಬಿಟ್ರೆ ನೊಬೆಲ್ ಶಾಂತಿ ಪ್ರಶಸ್ತಿ ಕೇಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡೋ ಹುಚ್ಚಾಟ ಒಂದೆರಡಲ್ಲ. ಇಷ್ಟು ದಿನ ನಾನೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ಅಂತಾ ಬಡಾಯಿ ಕೊಟ್ಟಿಕೊಳ್ತಿದ್ದ. ಆದ್ರೆ ಈಗ ಇರಾನ್ ಗೆ 10 ದಿನಗಳ ಡೆಡ್ ಲೈನ್ ಕೊಟ್ಟು ಮಾತು ಕೇಳದಿದ್ರೆ ಯುದ್ಧ ಗ್ಯಾರಂಟಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಶುದ್ಧ ನಂದಿನಿ ತುಪ್ಪ ಹೆಸರಲ್ಲಿ ನಕಲಿ ದಂಧೆಗೆ ಬ್ರೇಕ್‌ ಹಾಕಲು KMF ಹೊಸ ಪ್ಲ್ಯಾನ್!‌

ಜಗತ್ತಿನ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳೋ ಅಮೆರಿಕ ದೇಶಕ್ಕೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷನಾದ ಮೇಲೆ ತಲೆ ಬುಡ ಇಲ್ಲದ ನಿರ್ಧಾರ ಮಾಡುತ್ತಿದ್ದಾರೆ. ಈಗ ಇರಾನ್ ಗೆ ಬೆದರಿಕೆ ಹಾಕಿದ್ದಾರೆ. ಜಗತ್ತಿನ ಎಲ್ಲಾ ದೇಶಗಳು ತಮ್ಮ ಕಂಟ್ರೋಲ್ ನಲ್ಲೇ ಇರಬೇಕು ತಾವು ಹೇಳಿದಂತೆಯೇ ಕೇಳಬೇಕು ಅನ್ನೋ ಮೈಂಡ್ ಸೆಟ್ ನಲ್ಲಿರೋ ಟ್ರಂಪ್ ಇರಾನ್ ಗೆ ಡೆಡ್ ಲೈನ್ ಕೊಟ್ಟಿದ್ದಾರೆ. ಗುರುವಾರ ನಡೆದ ಗಾಜಾ ಶಾಂತಿ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಟೆಹ್ರಾನ್​​ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ, ಇರಾನ್‌ನೊಂದಿಗೆ ಒಪ್ಪಂದವಾಗುತ್ತದೆಯೇ ಅಥವಾ ಯುದ್ಧವಾಗುತ್ತದೆಯೇ ಎಂಬುದು ಇಡೀ ಜಗತ್ತಿಗೆ ತಿಳಿಯಲಿದೆ. ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಮುಂದಿನ ಹೆಜ್ಜೆ ಎಂದರೆ ಇರಾನ್​​ನ ಪರಮಾಣು ಸೌಲಭ್ಯಗಳ ಮೇಲೆ ನೇರವಾಗಿ ದಾಳಿ ಮಾಡುವುದು ಎಂದರ್ಥ.

ವಾಷಿಂಗ್ಟನ್‌ನಲ್ಲಿ ನಡೆದ ಗಾಜಾ ಶಾಂತಿ ಮಂಡಳಿ ಕಾರ್ಯಕ್ರಮದಲ್ಲಿ ಭಾರತದ ಬಗ್ಗೆಯೂ ಮಾತನಾಡಿರೋ ಟ್ರಂಪ್ ನಾನು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದೆ. ಇಬ್ಬರೂ ಹೋರಾಡಲು ಸಿದ್ಧರಾಗಿದ್ದರು. ಆದರೆ ನಾನು ಹೇಳಿದೆ  ನೀವು ಯುದ್ಧ ಮುಂದುವರಿಸಿದರೆ ಎರಡೂ ದೇಶಗಳ ಮೇಲೆ 200% ಸುಂಕ ಹಾಕುತ್ತೇನೆ. ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಅದಾದ ನಂತರ ಇಬ್ಬರೂ ಮೃದುವಾದರು ಮತ್ತು ಸಂಘರ್ಷ ನಿಂತಿತು ಎಂದು ಹೇಳಿದ್ದಾರೆ.

ಇನ್ನು ಇರಾನ್ ತನ್ನ ಕ್ಷಿಪಣಿಗಳು ಮತ್ತು ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ಕೆಡವಬೇಕು, ಇಲ್ಲದಿದ್ದರೆ ಅಮೆರಿಕ ದಾಳಿಗೆ ಸಿದ್ಧವಾಗಿದೆ ಎಂಬುದು ಟ್ರಂಪ್ ಅವರ ನೇರ ಸಂದೇಶವಾಗಿದೆ. ಗುಪ್ತಚರ ವರದಿಗಳು ಮತ್ತು ದಿ ಟೆಲಿಗ್ರಾಫ್‌ನ ಮಾಹಿತಿ ಪ್ರಕಾರ, ಶನಿವಾರದೊಳಗೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸೇನೆಗೆ ಹಸಿರು ನಿಶಾನೆ ಸಿಕ್ಕಿದೆ. ಅಮೆರಿಕದ ಅತ್ಯಂತ ಆಧುನಿಕ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಮುಂದಿನ ಕೆಲವು ದಿನಗಳಲ್ಲಿ ಮೆಡಿಟರೇನಿಯನ್ ಸಮುದ್ರಕ್ಕೆ ಆಗಮಿಸಲಿದ್ದು, ಇರಾನ್ ಮೇಲೆ 24/7 ನಿರಂತರ ಬಾಂಬ್ ದಾಳಿ ಮಾಡುವ ಸಾಮರ್ಥ್ಯವನ್ನು ಅಮೆರಿಕಕ್ಕೆ ನೀಡುತ್ತದೆ.

Shantha Kumari

Leave a Reply

Your email address will not be published. Required fields are marked *