ಗೆಲುವಿನೊಂದಿಗೆ ಗುಡ್ಬೈ ಹೇಳಿದ ಅಫ್ಟಾನಿಸ್ತಾನ – ಟಿ20 ವಿಶ್ವಕಪ್ನಲ್ಲಿ ಗೆಲುವಿಲ್ಲದೇ ಗಂಟು ಮೂಟೆ ಕಟ್ಟಿದ ಕೆನಡಾ

ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ಮತ್ತು ಕೆನಡಾ ತಂಡಗಳ ಅಭಿಯಾನ ಅಂತ್ಯಗೊಂಡಿದೆ. ಗೆಲುವಿನೊಂದಿಗೆ ಅಫ್ಘಾನಿಸ್ತಾನ ತನ್ನ ಅಭಿಯಾನವನ್ನು ಕೊನೆಗೊಳಿಸಿದರೆ, ಕೆನಡಾ ಗೆಲುವಿನ ಖಾತೆ ತೆರೆಯದೇ ಗಂಟು ಮೂಟೆ ಕಟ್ಟಿದೆ.
ಇದನ್ನೂ ಓದಿ:ಸರಣಿಗಳ HERO.. ವಿಶ್ವಕಪ್ ZERO – ಅಭಿಷೇಕ್ ಶರ್ಮಾ Hat-Trick ಡಕ್
ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ತಂಡವು ಕೆನಡಾವನ್ನು 82 ರನ್ಗಳಿಂದ ಸೋಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯನ್ನು ಕೊನೆಗೊಳಿಸಿತು. ಎರಡೂ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಈ ಪಂದ್ಯವು ಕೇವಲ ಔಪಚಾರಿಕವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಾಲ್ಕು ವಿಕೆಟ್ಗಳ ನಷ್ಟಕ್ಕೆ 200 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಕೆನಡಾ 20 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟಕ್ಕೆ 118 ರನ್ಗಳನ್ನು ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.
ಗುರುವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ 39 ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.ಅಫ್ಘಾನಿಸ್ತಾನ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಕೆನಡಾ ತಂಡವು 48 ರನ್ಗಳಿಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅಲ್ಲಿಂದ ಸಾದ್ ಬಿನ್ ಜಾಫರ್, ಹರ್ಷ್ ಠಾಕೂರ್ ಅವರೊಂದಿಗೆ ಆರನೇ ವಿಕೆಟ್ಗೆ 37 ಎಸೆತಗಳಲ್ಲಿ 53 ರನ್ಗಳನ್ನು ಸೇರಿಸಿದರು, ತಂಡವನ್ನು 100 ದಾಟಿಸಿದರು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಹರ್ಷ್ 24 ಎಸೆತಗಳಲ್ಲಿ 30 ರನ್ಗಳಿಗೆ ಔಟಾದರು, ಆದರೆ ಸಾದ್ ತಂಡದ ಖಾತೆಗೆ 28 ರನ್ಗಳ ಕೊಡುಗೆ ನೀಡಿದರು. ಅಫ್ಘಾನಿಸ್ತಾನ ಪರ, ಮೊಹಮ್ಮದ್ ನಬಿ ಏಳು ರನ್ಗಳಿಗೆ ನಾಲ್ಕು ವಿಕೆಟ್ಗಳನ್ನು ಪಡೆದರು. ರಶೀದ್ ಖಾನ್ ಎರಡು ವಿಕೆಟ್ಗಳನ್ನು ಪಡೆದರು.

ನೋಡಿರಿ

