ರಾಯನ ಡಬಲ್ ರೋಲ್ ಹವಾ – ಐ ಆ್ಯಮ್ ಹೋಮ್ ಡ್ಯಾಡಿ ಎಂದಿದ್ದು ಯಾರು?

ರಾಯನ ಡಬಲ್ ರೋಲ್ ಹವಾ –  ಐ ಆ್ಯಮ್ ಹೋಮ್ ಡ್ಯಾಡಿ ಎಂದಿದ್ದು ಯಾರು?

ಬಹುನಿರೀಕ್ಷೆಯ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಟಾಕ್ಸಿಕ್ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ  ಟೀಸರ್ ಹಲ್​ಚ​​ಲ್​ ಸೃಷ್ಟಿ ಮಾಡಿದ್ದು ರಾಯ ಡಬಲ್ ರೋಲ್‌ನಲ್ಲಿರೋದು ಪಕ್ಕಾ ಆಗಿದೆ.

ಇದನ್ನೂ ಓದಿ: ಫಾರಿನ್‌ನಲ್ಲೂ ಟಾಕ್ಸಿಕ್ BIG ಡೀಲ್ – ರಿಲೀಸ್‌ಗೂ ಮುಂಚೆಯೇ 1000 ಕೋಟಿ ಕಲೆಕ್ಷನ್‌?

ಟಾಕ್ಸಿಕ್ ಸಿನಿಮಾ ಟೀಸರ್ ನೋಡಿ ಯಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಒಂದು ಗಂಟೆಯೊಳಗೆ ಹಲ್​ಚ​​ಲ್ ಎಬ್ಬಿಸಿದೆ. ರಾಯನಾಗಿ ಯಶ್ ಲುಕ್ ಭಯಂಕರವಾಗಿದೆ. ರಾಯನಿಗೆ ಎದುರಾಗಿ ನಿಂತವರು ಉಳಿಯೋದೇ ಇಲ್ಲ ಅನ್ನೋ ಸೂಚನೆ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್​ಗಿಂತ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಯಶ್ ಅವರ ರಾ ಲುಕ್ ಗಮನ ಸೆಳೆದಿದೆ. ಈ ಸಲ ಯುದ್ಧನೇ ಬೇರೆ ಎಂಬ ಡೈಲಾಗ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೊತೆಗೆ ರಾಯ ಹಠಗಾರ, ಛಲಗಾರ, ಎದುರಿಗಿದ್ದವರನ್ನು ಧ್ವಂಸ ಮಾಡುವ ರಣಬೇಟೆಗಾರ ಎಂಬುದು ಟೀಸರ್‌ನಲ್ಲಿ ರಿವೀಲ್ ಆಗಿದೆ.

ಟಾಕ್ಸಿಕ್ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್​​ನಲ್ಲಿ ಯಶ್ ಯಂಗ್ ಲುಕ್​​ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ  ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್​​ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ. ಅಂತೂ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದ್ದು, ಯಶ್ ಹೊಸ ಲುಕ್ ಕೊನೇಯಲ್ಲಿ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ಥ್ರಿಲ್ ನೀಡಿದೆ. ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ.

Sulekha

Leave a Reply

Your email address will not be published. Required fields are marked *