ಸರಣಿಗಳ HERO.. ವಿಶ್ವಕಪ್ ZERO – ಅಭಿಷೇಕ್ ಶರ್ಮಾ Hat-Trick ಡಕ್
0 ಸುಳಿಯಲ್ಲಿ ಸ್ಪೋಟಕ ಬ್ಯಾಟರ್

ಸರಣಿಗಳ HERO.. ವಿಶ್ವಕಪ್ ZERO – ಅಭಿಷೇಕ್ ಶರ್ಮಾ Hat-Trick ಡಕ್0 ಸುಳಿಯಲ್ಲಿ ಸ್ಪೋಟಕ ಬ್ಯಾಟರ್

ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಎಲ್ಲವೂ ಓಕೆ ಅನ್ಸಿದ್ರೂ ಅಭಿಷೇಕ್ ಶರ್ಮಾ ಫಾರ್ಮ್​ದೇ ದೊಡ್ಡ ತಲೆಬಿಸಿಯಾಗಿದೆ. ಒಂದ್ಕಡೆ ಇಶಾನ್ ಕಿಶನ್ ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ರೆ ಅತ್ತ ಅಭಿಷೇಕ್ ಹ್ಯಾಟ್ರಿಕ್ ಡಕ್​ಔಟ್.. ಯಾರನ್ನ ಈ ಟೂರ್ನಿಯ ಹೈಯೆಸ್ಟ್ ರನ್ ಸ್ಕೋರರ್ ಆಗ್ತಾರೆ ಅಂತಾ ಪ್ರೆಡಿಕ್ಟ್ ಮಾಡಿದ್ರೋ ಅದೇ ಅಭಿಷೇಕ್ ಶರ್ಮಾ ವಿಶ್ವಕಪ್​ನಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. ಟಿ-20 ವಿಶ್ವಕಪ್​ನಲ್ಲಿ ಗ್ರೂಪ್​ ಸ್ಟೇಜ್​ನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನ ಗೆದ್ದು ಭಾರತ ಗ್ರ್ಯಾಂಡ್ ಆಗಿಯೇ ಸೂಪರ್ 8ಗೆ ಲಗ್ಗೆ ಇಟ್ಟಿದೆ. ಇನ್ನೇನಿದ್ರೂ ಸೆಮಿಫೈನಲ್​ ಟಿಕೆಟ್​​ಗಾಗಿ ಫೈಟ್ ಮಾಡ್ಬೇಕು. ಭಾನುವಾರ ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯಕ್ಕೆ ರೆಡಿಯಾಗ್ತಿದ್ದಾರೆ. ಆದ್ರೆ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಬಗ್ಗೆ ಚರ್ಚೆಯಾಗ್ತಿದೆ. ಆಡಿರುವಂಥ ಮೂರೂ ಪಂದ್ಯಗಳಲ್ಲೂ ಸೊನ್ನೆಗೆ ಔಟ್ ಆಗಿದ್ದಾರೆ.

ಇದನ್ನೂ ಓದಿ : ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ಕಲಿಗಳ ದಾಖಲೆ – 1035 ಬೃಹತ್ ಸ್ಕೋರ್

7 ಇನ್ನಿಂಗ್ಸ್ ಗಳಲ್ಲಿ 5 ಬಾರಿ ಡಕ್ ಔಟ್ ಆದ ಅಭಿಷೇಕ್!

ಟಿ-20ಐ ಫಾರ್ಮೆಟ್​ನಲ್ಲಿ ಸತತ ನಂಬರ್ 1 ರ್ಯಾಂಕ್​ನಲ್ಲೇ ಬ್ಯಾಟ್ ಬೀಸ್ತಿರೋ ಅಭಿಷೇಕ್ ಶರ್ಮಾ ಈ ಬಾರಿ ಚೊಚ್ಚಲ ಐಸಿಸಿ ವಿಶ್ವಕಪ್ ಆಡ್ತಿದ್ದಾರೆ. ಆದ್ರೆ ಈ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯ ಆಡಿದ್ದು ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಖಾತೆ ತೆರೆಯದೇ ಔಟ್ ಆಗಿದ್ದಾರೆ. ಯುಎಸ್​ಎ ವಿರುದ್ಧದ ಮೊದಲ ಮ್ಯಾಚಲ್ಲಿ ಗೋಲ್ಡನ್ ಡಕ್ ಔಟ್, ನೆಕ್ಸ್​​ಟ್ ಹೆಲ್ತ್ ಇಶ್ಯೂನಿಂದ ನಮೀವಿಯಾ ವಿರುದ್ಧ ಆಡಿರಲಿಲ್ಲ. ಆಮೇಲೆ ಪಾಕ್ ವಿರುದ್ಧದ ಮೂರನೇ ಪಂದ್ಯದಲ್ಲಿ ಮೊದಲ ಓವರ್​ನಲ್ಲೇ ಡಕ್ ಔಟ್, ಈಗ ನೆದರ್ ಲ್ಯಾಂಡ್ ವಿರುದ್ಧವೂ ಮೊದಲ ಓವರ್ ನಲ್ಲೇ ಡಕ್ ಔಟ್ ಆಗಿದ್ದಾರೆ. ಸೋ ಮೂರೂ ಪಂದ್ಯಗಳಿಂದ ಸೇರಿ ಒಂದು ರನ್ ಗಳಿಸೋಕೂ ಸಾಧ್ಯವಾಗಿಲ್ಲ. ಅಷ್ಟೇ ಅಲ್ದೇ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ  ಎರಡು ಬಾರಿ ಸೊನ್ನೆಗೆ ಔಟಾಗಿದ್ರು. ಅಂದ್ರೆ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ.

ಹ್ಯಾಟ್ರಿಕ್ ಡಕ್ ನಲ್ಲೇ ವಿಶ್ವದಾಖಲೆ ಬರೆದ ಅಭಿಷೇಕ್!

ಇನ್ನು ಅಭಿಷೇಕ್ ಶರ್ಮಾ ಇದ್ದ ಫಾರ್ಮ್ ನೋಡಿದ್ರೆ ಈ ಸಲ ವಿಶ್ವಕಪ್​ನಲ್ಲಿ ರನ್ ಮಳೆಯೇ ಬರುತ್ತೆ ಅಂತಾ ಎಲ್ಲರ ನಿರೀಕ್ಷೆ ಇತ್ತು. ಆದ್ರೆ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಡಕ್ ಔಟ್ ಆದ ವಿಶ್ವದ ಮೊದಲ ಆಟಗಾರ ಅನ್ನೋ ಬೇಡದ ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ (3) ಶೂನ್ಯಕ್ಕೆ ಔಟಾದ ಆಟಗಾರ ಎಂಬ ಕುಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಅಭಿಷೇಕ್ ಶರ್ಮಾ ಅವರ ಈ ಡಗೌಟ್ ಸರಣಿ ಟಿ20 ವಿಶ್ವಕಪ್​ಗೆ ಮಾತ್ರ ಸೀಮಿತವಾಗಿಲ್ಲ. ಅಭಿಷೇಕ್ ಶರ್ಮಾ 38 ಟಿ20 ಇನ್ನಿಂಗ್ಸ್‌ಗಳಲ್ಲಿ ಆರು ಬಾರಿ 0 ಕ್ಕೆ ಔಟಾಗಿದ್ದಾರೆ. ಈ ಮೂಲಕ 54 ಇನ್ನಿಂಗ್ಸ್‌ಗಳಲ್ಲಿ ಐದು ಬಾರಿ ಸೊನ್ನೆಗೆ ಔಟಾಗಿರುವ ಕೆಎಲ್ ರಾಹುಲ್ ಅವರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ ಆಡಿರುವ 124 ಟಿ20 ಇನ್ನಿಂಗ್ಸ್​ನಲ್ಲಿ 10 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಟಿ-20ಐನ ಓಪನರ್ ಗಳಲ್ಲಿ ಒಬ್ರು ಪಾಸ್.. ಮತ್ತೊಬ್ರು ಫೇಲ್!

ಟೀಂ ಇಂಡಿಯಾದ ಟಿ-20ಐ ಟೀಂ ವೆರಿ ಡೇಂಜರಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಓಪನರ್ಸ್ ಜೋಡಿ ಮಾತ್ರ ಒಬ್ರು ಹಿಟ್ಟರ್ ಮತ್ತೊಬ್ರು ಫೇಲ್ಯೂರ್ ಆಗ್ತಿದ್ದಾರೆ. ಕಳೆದ ಒಂದು ವರ್ಷದಿಂದಲೂ ಅದೇ ಕಥೆಯಾಗಿದೆ. 2024ರ ಟಿ-20 ವಿಶ್ವಕಪ್ ಆದ್ಮೇಲೆ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಓಪನ್ ಮಾಡ್ತಿದ್ರು. ಆ ಟೈಮಲ್ಲಿ ಇಬ್ರೂ ಡೇಂಜರಸ್ ಆಗೇ ಇದ್ರು. ಆದ್ರೆ ಯಾವಾಗ ಶುಭ್​ಮನ್ ಗಿಲ್ ತಂಡಕ್ಕೆ ಎಂಟ್ರಿಯಾದ್ರೋ ಅಲ್ಲಿಂದ ಓಪನರ್ಸ್ ಜೋಡಿಯ ಲೆಕ್ಕಾಚಾರಗಳೇ ಉಲ್ಟಾ ಆಗಿವೆ. ಏಷ್ಯಾಕಪ್ ನಲ್ಲಿ ಓಪನರ್ ಆಗಿ ತಂಡಕ್ಕೆ ಬಂದ ಗಿಲ್ ಕಂಪ್ಲೀಟ್ ಡಲ್ ಆಗಿದ್ರು. ಒಂದ್ಕಡೆ ಅಭಿಷೇಕ್ ಅಬ್ಬರಿಸ್ತಿದ್ರೆ ಗಿಲ್ ಪೆವಿಲಿಯನ್ ಪರೇಡ್ ನಡೆಸ್ತಿದ್ರು. ಆಮೇಲೆ ಸಂಜು ಮತ್ತು ಅಭಿಷೇಕ್ ಇನ್ನಿಂಗ್ಸ್ ಓಪನ್ ಮಾಡ್ತಿದ್ರು. ಈ ಟೈಮಲ್ಲಿ ಅಭಿಷೇಕ್ ಸಿಡಿದ್ರೆ ಸಂಜು ಮತ್ತೆ ಸೈಲೆಂಟ್ ಆಗಿದ್ರು. ಈ ವಿಶ್ವಕಪ್​ನಲ್ಲಿ ಕಿಶನ್ ಮತ್ತು ಅಭಿಷೇಕ್ ಇನ್ನಿಂಗ್ಸ್ ಓಪನ್ ಮಾಡ್ತಿದ್ದಾರೆ. ಬಟ್ ಕಿಶನ್ ಆರ್ಭಟ ಮಾಡ್ತಿದ್ದಾರೆ. ಆದ್ರೆ ಅಭಿಷೇಕ್ ಡಕ್ ಔಟ್ ಆಗ್ತಿದ್ದಾರೆ.

ಸ್ಟ್ರೈಕರ್ ಅಥವಾ ನಾನ್ ಸ್ಟ್ರೈಕರ್ ಓಪನರ್ ನಲ್ಲೂ ಅಭಿಷೇಕ್ ಫೇಲ್!

ಸದ್ಯ ಅಭಿಷೇಕ್ ಶರ್ಮಾ ಹ್ಯಾಟ್ರಿಕ್ ಡಕ್ ಬಳಿಕ ಒಂದಷ್ಟು ಚರ್ಚೆಗಳಾಗ್ತಿವೆ. ಅಭಿಷೇಕ್​ಗೆ ಇನ್ನಿಂಗ್ಸ್​ನ ಫಸ್ಟ್ ಬಾಲ್ ಫೇಸ್ ಮಾಡೋಕೆ ಬಿಡ್ತಿರೋದೇ ಔಟ್ ಆಗೋಕೆ ಕಾರಣ ಅನ್ನೋ ಚರ್ಚೆಯೂ ನಡೀತಿದೆ. ಆದ್ರೆ ಅಭಿಷೇಕ್ ಓಪನರ್​ ಆಗಿ ಸ್ಟ್ರೈಕ್​ನಲ್ಲೇ ಬರ್ಲಿ ಅಥವಾ ನಾನ್​ಸ್ಟ್ರೈಕ್​ನಲ್ಲೇ ಇರಲಿ ಅವರ ಫೇಲ್ಯೂರ್ ಮಾತ್ರ ಕಡಿಮೆ ಆಗಿಲ್ಲ. ಕಳೆದ 8 ಇನ್ನಿಂಗ್ಸ್​ಗಳ ನಂಬರೇ ಸಾಕ್ಷಿ.

ಸ್ಟ್ರೈಕರ್ & ನಾನ್ ಸ್ಟ್ರೈಕರ್ ನಲ್ಲೂ ಫೇಲ್!

ಎದುರಾಳಿ                        ಓಪನರ್ ಮಾದರಿ                    ರನ್ಸ್

ನ್ಯೂಜಿಲೆಂಡ್ 1                  ನಾನ್ ಸ್ಟ್ರೈಕರ್                       84(35)

ನ್ಯೂಜಿಲೆಂಡ್ 2                  ನಾನ್ ಸ್ಟ್ರೈಕರ್                         0

ನ್ಯೂಜಿಲೆಂಡ್ 3                 ನಾನ್ ಸ್ಟ್ರೈಕರ್                      68(20)

ನ್ಯೂಜಿಲೆಂಡ್ 4                  ಸ್ಟ್ರೈಕರ್                             0

ನ್ಯೂಜಿಲೆಂಡ್ 5                 ಸ್ಟ್ರೈಕರ್                            30 (16)

ಯುಎಸ್ ಎ                    ನಾನ್ ಸ್ಟ್ರೈಕರ್                        0

ಪಾಕಿಸ್ತಾನ                        ನಾನ್ ಸ್ಟ್ರೈಕರ್                       0

ನೆದರ್ಲ್ಯಾಂಡ್                    ಸ್ಟ್ರೈಕರ್                              0

ಈ ನಂಬರ್​ಗಳನ್ನ ನೋಡಿದ್ರೇನೆ ಗೊತ್ತಾಗುತ್ತೆ ಅಭಿಷೇಕ್ ಶರ್ಮಾಗೆ ಸ್ಟ್ರೈಕರ್ ಅಥವಾ ನಾನ್ ಸ್ಟ್ರೈಕರ್ ಓಪನರ್ ಆಗಿ ಕಣಕ್ಕಿಳಿಸ್ತಾ ಇರೋದು ಮ್ಯಾಟ್ರ್ ಆಗ್ತಿಲ್ಲ. ಬಟ್ ಅವ್ರ ಬ್ಯಾಟಿಂದ ರನ್ಸ್ ಬರ್ತಿಲ್ಲ. ಇದು ಔಟ್ ಆಫ್ ಫಾರ್ಮ್ ಅಥವಾ ಔಟ್ ಆಫ್ ರನ್ಸಾ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ. ಅದೇನೇ ಇದ್ರೂ ರನ್ಸ್ ಬರ್ತಿಲ್ಲ ಅನ್ನೋದಂತೂ ಸತ್ಯ. 2025ರಲ್ಲಿ ಭಾರತದ ಟಿ-20ಐ ಟೀಮ್​ನ ಗೇಮ್ ಚೇಂಜರ್ ಹಾಗೇ ಮ್ಯಾಚ್ ವಿನ್ನರ್ ಆಗಿದ್ದ ಅಭಿಷೇಕ್ 2026ರಲ್ಲಿ ಆಡಿರುವಂಥ 8 ಇನ್ನಿಂಗ್ಸ್​ಗಳಲ್ಲಿ 5 ಸಲ ಡಕ್ ಔಟ್ ಆಗಿದ್ದಾರೆ. ಹೀಗಾಗಿ ಸಾಮಾನ್ಯವಾಗೇ ಮ್ಯಾನೇಜ್​ಮೆಂಟ್​ಗೂ ತಲೆಬಿಸಿಯಾಗ್ತಿದೆ. ಅಭಿಷೇಕ್ ಶರ್ಮಾ ಫಾರ್ಮ್ ಬಗ್ಗೆ ಮಾತನಾಡಿರೋ ದಿಗ್ಗಜ ಸುನಿಲ್ ಗವಾಸ್ಕರ್, “ಅಭಿಷೇಕ್ ಮೊದಲು ಸಿಂಗಲ್ ರನ್ ತೆಗೆದುಕೊಂಡು ಖಾತೆ ತೆರೆಯುವತ್ತ ಗಮನಹರಿಸಬೇಕು. ನಂತರ ತಮ್ಮ ಶೈಲಿಯ ಆಟ ಆಡಲಿ ಎಂದು ಸಜೇಷನ್​ ಕೊಟ್ಟಿದ್ದಾರೆ. ಈಗ ಆಲ್ರೆಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಷೇಕ್ ವಿರುದ್ಧ ಪೋಸ್ಟ್ ವಾರ್ ಸ್ಟಾರ್ಟ್ ಆಗಿದೆ. ಇನ್ನೊಂದಷ್ಟು ಜನ ಅಭಿಗಿಂತ ಸಂಜುನೇ ಬೆಟರ್ ಅಂತಿದ್ದಾರೆ. ಸಂಜು ಅಟ್​ಲೀಸ್ಟ್ 10, 20 ರನ್ಸ್ ಆದ್ರೂ ಹೊಡೀತಿದ್ರು ಅವ್ರನ್ನೇ ಆಡ್ಸಿ ಅನ್ನೋಕೆ ಶುರು ಮಾಡಿದ್ದಾರೆ. ಅದೆಲ್ಲಾ ಏನೇ ಇದ್ರೂ ಅಭಿಷೇಕ್ ಈಗ ಗ್ರೂಪ್ ಸ್ಟೇಜಲ್ಲೇ ಅದೂ ವೀಕ್ ಟೀಂಗಳ ಎದುರಲ್ಲೇ ಸೊನ್ನೆ ಸುತ್ತಿದ್ದು ನೆಕ್ಸ್​ಟ್ ಸೂಪರ್ 8ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಹೆಗೆ ಕಂ ಬ್ಯಾಕ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಇದೆ.

Shantha Kumari

Leave a Reply

Your email address will not be published. Required fields are marked *