ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಆಮಂತ್ರಣ ಪತ್ರಿಕೆ ವೈರಲ್! – ಇನ್ವಿಟೇಶನ್ ಕಾರ್ಡ್ ಜೊತೆ ಏನೆಲ್ಲಾ ಇದೆ?

ಸಿನಿಲೋಕದ ಸೆನ್ಸೇಷನಲ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸಂಬಂಧಪಟ್ಟ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ಅತಿಥಿಗಳಿಗೆ ನೀಡಲಾದ ಅವರ ಮದುವೆ ಇನ್ವಿಟೇಷನ್ ಕಾರ್ಡ್ ಈಗ ಸಖತ್ ವೈರಲ್ ಆಗಿದೆ. ಮದುವೆ ಕಾರ್ಡ್ ಜೊತೆಗೆ ಗಿಫ್ಟ್ ಕೂಡ ನೀಡಲಾಗಿದೆ.
ಇದನ್ನೂ ಓದಿ: ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ! – ಟಿಕೆಟ್ ಮಷಿನ್ ಕದ್ದೊಯ್ದ ಖದೀಮರು!
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆ.26ರಂದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯಲಿದೆ. ಇದೀಗ ಮದುವೆಯ ವೆಡ್ಡಿಂಗ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆ ಕಾರ್ಡ್ ಜೊತೆಗೆ ಅತಿಥಿಗಳಿಗೆ ಕೆಲವು ಗಿಫ್ಟ್ ಕೂಡ ನೀಡಲಾಗಿದೆ.
ರಶ್ಮಿಕಾ ವೆಡ್ಡಿಂಗ್ ಕಾರ್ಡ್ ಜೊತೆಗೆ ಒಂದು ಉಡುಗೊರೆಯ ಹ್ಯಾಂಪರ್ ಬಾಕ್ಸ್ ಅನ್ನು ಆಹ್ವಾನಿತರಿಗೆ ತಲುಪಿಸಲಾಗುತ್ತಿದೆ. ರಶ್ಮಿಕಾ ಹಾಗೂ ವಿಜಯ್ ಆಮಂತ್ರಣ ಬಾಕ್ಸ್ ಅತ್ಯಂತ ಸ್ಟೈಲಿಶ್ ಆಗಿದ್ದು, ಅದರಲ್ಲಿ ರಶ್ಮಿಕಾ ಮತ್ತು ವಿಜಯ್ ಇಬ್ಬರ ವೈಯಕ್ತಿಕ ಬ್ರ್ಯಾಂಡ್‌ಗಳಿಗೆ ಆದ್ಯತೆ ನೀಡಲಾಗಿದೆ. ಈ ಗಿಫ್ಟ್ ಬಾಕ್ಸ್‌ನ ಪ್ರಮುಖ ಆಕರ್ಷಣೆ ನ್ಯಾಷನಲ್ ಕ್ರಶ್ ಪರ್ಫ್ಯೂಮ್. ರಶ್ಮಿಕಾ ಮಂದಣ್ಣರನ್ನ ಅಭಿಮಾನಿಗಳು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುವುದರಿಂದ, ಅದೇ ಹೆಸರಿನ ಪರ್ಫ್ಯೂಮ್ ಅನ್ನು ಈ ಬಾಕ್ಸ್‌ನಲ್ಲಿ ಇರಿಸಲಾಗಿದೆ. ವಿಜಯ್ ದೇವರಕೊಂಡ ಅವರ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಆದ ‘ರೌಡಿ’ ಸಂಸ್ಥೆಯ ಹಳದಿ ಬಣ್ಣದ ಸ್ಟೈಲಿಶ್ ಟಿ-ಶರ್ಟ್ ಕೂಡ ಈ ಹ್ಯಾಂಪರ್‌ನಲ್ಲಿದೆ. ಪರಿಮಳದ ಜೊತೆಗೆ ಕೈ ಮತ್ತು ಪಾದಗಳ ಆರೈಕೆಗಾಗಿ ಹ್ಯಾಂಡ್ ಅಂಡ್ ಫೂಟ್ ಕ್ರೀಮ್ ಅನ್ನು ಸಹ ನೀಡಲಾಗಿದೆ. ಇದ್ರ ಜೊತೆಗೆ ಮದುವೆಯ ಸಂಪ್ರದಾಯದಂತೆ ಗೋಡಂಬಿ ಮತ್ತು ಸಿಹಿ ಪದಾರ್ಥಗಳನ್ನೊಳಗೊಂಡ ಬಾಕ್ಸ್ ಕೂಡ ಈ ಹ್ಯಾಂಪರ್‌ನಲ್ಲಿದೆ.
ವಿಜಯ್ ಮತ್ತು ರಶ್ಮಿಕಾ ಬಹುಕಾಲದಿಂದಲೂ ಪ್ರೀತಿಯಲ್ಲಿದ್ದರು. ಆದರೆ ಎಲ್ಲಿಯೂ ಈ ಜೋಡಿ ಈ ಕುರಿತು ಮಾಹಿತಿ ಹಂಚಿಕೊಂಡಿರಲಿಲ್ಲ. ಈಗಲೂ ಕೂಡ ಮದುವೆ ಬಗ್ಗೆ ಯಾವುದೇ ಮಾಹಿತಿಗಳನ್ನು ವಿಜಯ್ – ರಶ್ಮಿಕಾ ಎಲ್ಲಿಯೂ ಹೇಳಿಲ್ಲ.

ನೋಡಿರಿ

