ಹ್ಯಾಪಿ ಬರ್ತ್ಡೇ ಮೈ ಪ್ರಿನ್ಸೆಸ್! – ಮಹಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಪಾಂಡ್ಯ!

ಟೀಂ ಇಂಡಿಯಾ ಆಲ್ರೌಡರ್ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಟಿ 20 ವಿಶ್ವಕಪ್ನಲ್ಲೂ ಪಾಂಡ್ಯ ಉತ್ತಮ ಪ್ರದರ್ಶನದ ಮೂಲಕ ಶೈನ್ ಆಗ್ತಿದ್ದಾರೆ. ಹಾರ್ದಿಕ್ ವೃತ್ತಿ ಜೀವನ ಅಲ್ಲದೇ ವೈಯಕ್ತಿಕ ಜೀವನದಲ್ಲೂ ಸದ್ದು ಮಾಡ್ತಿದ್ದಾರೆ. ಇದೀಗ ಹಾರ್ದಿಕ್ ಬಾಳಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇದೀಗ ಮಹಿಕಾ ಶರ್ಮಾ ಪಾಂಡ್ಯ ಬಾಳಿಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಮಹಿಕಾ ಹುಟ್ಟುಹಬ್ಬಕ್ಕೆ ಪಾಂಡ್ಯ ಸ್ಪೆಷಲ್ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಕೊಟ್ರೂ ತಪ್ಪಲಿಲ್ಲ ಮಾಜಿ ಗಂಡನ ಕಾಟ! – 2ನೇ ಮದುವೆಯಾಗಿ ಗರ್ಭಿಣಿಯಾಗಿದ್ದಕ್ಕೆ ಕೊಂದೇ ಬಿಟ್ಟ ಪಾಪಿ!
ಹಾರ್ದಿಕ್ ಗೆಳತಿ ಮಹಿಕಾಗೆ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಹಾರ್ದಿಕ್ ಮಹಿಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಹಿಕಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಹಾರ್ದಿಕ್, “ಹ್ಯಾಪಿ ಬರ್ತ್ಡೇ ಮೈ ಪ್ರಿನ್ಸೆಸ್” (Happy birthday my princess) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಈ ಪೋಸ್ಟ್ನಲ್ಲಿ ಹಾರ್ದಿಕ್ ಮಹಿಕಾರನ್ನ ಹಗ್ ಮಾಡಿದ್ದಾರೆ.
ಅಂದ್ಹಾಗೆ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ವಿಚ್ಛೇದನದ ಬಳಿಕ, 2025ರ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ ಮಹಿಕಾ ಅವರು ಹಾರ್ದಿಕ್ ಹಾಗೂ ಅವರ ಮಗ ಅಗಸ್ತ್ಯ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ಮತ್ತೆ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಮಹಿಕಾ ಅವರೇ ಕಾರಣ ಎಂದು ಹಾರ್ದಿಕ್ ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ವ್ಯಾಲೆಂಟೈನ್ಸ್ ಡೇ ದಿನ ಹಾರ್ದಿಕ್ ಪಾಂಡ್ಯ ತಮ್ಮ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಸುದ್ದಿಯಾಗಿತ್ತು. ಇದರಲ್ಲಿ ಇಂಗ್ಲಿಷ್ನ ‘M’ ಅಕ್ಷರ (ಮಹಿಕಾ ಹೆಸರಿನ ಮೊದಲ ಅಕ್ಷರ) ಹಾಗೂ ಎರಡು ಚಿರತೆಗಳ ಚಿತ್ರವಿದೆ. ಇದು ಶಕ್ತಿ ಮತ್ತು ಪರಸ್ಪರ ಬೆಂಬಲದ ಸಂಕೇತವಾಗಿದೆ ಎಂದು ಹೇಳಲಾಗಿದೆ.

ನೋಡಿರಿ

