ಡಿವೋರ್ಸ್ ಕೊಟ್ರೂ ತಪ್ಪಲಿಲ್ಲ ಮಾಜಿ ಗಂಡನ ಕಾಟ! – 2ನೇ ಮದುವೆಯಾಗಿ ಗರ್ಭಿಣಿಯಾಗಿದ್ದಕ್ಕೆ ಕೊಂದೇ ಬಿಟ್ಟ ಪಾಪಿ!

ಕಿರುಕುಳ ನೀಡಿದ ಗಂಡನಿಂದ ದೂರವಾದ ಮಹಿಳೆಯೊಬ್ಬರು ಎರಡನೇ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದರು. ಆದ್ರೆ ಆ ಪಾಪಿಗೆ ಇದನ್ನೂ ಸಹಿಸಿಕೊಳ್ಳಲು ಆಗಿಲ್ಲ. ಇದೀಗ ಎರಡನೇ ಮದುವೆಯಾದ ಪತ್ನಿ ಗರ್ಭಿಯಾಗಿದ್ದಕ್ಕೆ ಮಾಜಿ ಪತಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿ! – ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಶಾಸಕ!
ಹೈದರಾಬಾದ್‌ನ ವನಸ್ಥಲೀಪುರಂನಲ್ಲಿ ಈ ಭಯಾನಕ ಘಟನೆ ನಡೆದಿದೆ. 29 ವರ್ಷದ ಸುನೀತಾ ಕೊಲೆಯಾದ ಮಹಿಳೆ. ದೇವರಕೊಂಡ ಮಹೇಶ್ ಕೊಲೆ ಮಾಡಿದ ಮಾಜಿ ಪತಿ.
ಸುನೀತಾ ಹಾಗೂ ಮಹೇಶ್ 2022 ರಲ್ಲಿ ಮದುವೆಯಾಗಿದ್ದರು. ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಮದುವೆಯ ನಂತರ ಅವರು ಕೆನಡಾಗೆ ಹೋಗಿದ್ದರು. ಆದ್ರೆ ಆರಂಭದಿಂದಲೂ ಇಬ್ಬರ ನಡುವೆ ಸಂಬಂಧ ಚೆನ್ನಾಗಿರಲಿಲ್ಲ. ಹೀಗಾಗಿ ಸುನೀತಾ ಆತನ ವಿರುದ್ಧ ದೂರು ನೀಡಿದ್ದರು. ಬಳಿಕ ಸುನೀತಾ 2024ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಭಾರತಕ್ಕೆ ಬಂದಿದ್ದರು. ಕೌಟುಂಬಿಕ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೆಸರಿನಲ್ಲಿ ಲುಕೌಟ್ ನೋಟೀಸ್ ಜಾರಿಯಾಗಿದ್ದರಿಂದ ದೇವರಕೊಂಡ ಮಹೇಶ್‌ನನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಜೊತೆಗೆ ಆತನ ಪಾಸ್‌ಪೋರ್ಟ್ ವಶಕ್ಕೆ ಪಡೆದಿದ್ದರು. ಇತ್ತ ಸುನೀತಾ ಡಿವೋರ್ಸ್ ಪಡೆದು, 2025ರಲ್ಲಿ ಬೇರೆ ವ್ಯಕ್ತಿ ಜೊತೆ ಮದುವೆಯಾಗಿ ಹೈದರಾಬಾದ್‌ನ ವನಸ್ಥಳೀಪುರಂನಲ್ಲಿ ವಾಸಿಸುತ್ತಿದ್ದರು.
ಇತ್ತ ಲುಕೌಟ್ ನೊಟೀಸ್‌ನಿಂದ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗದ ಕಾರಣ, ಮಹೇಶ್ ನಿರಾಶೆಗೊಂಡಿದ್ದ. ಇತ್ತ ಸುನೀತಾ ಮರು ಮದುವೆಯಾಗಿದ್ದರಿಂದ ಆತ ಸುನೀತಾ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾನೆ. ಬುಧವಾರ ಮಧ್ಯಾಹ್ನ ಆರೋಪಿ ಗ್ರೀನ್ ಸಿಟಿ ಕಾಲೋನಿಯಲ್ಲಿರುವ ಸುನಿತಾ ಅವರು ವಾಸವಿದ್ದ ಅವರ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾನೆ. ನೇರವಾಗಿ ಸುನೀತಾ ಇದ್ದ ಇದ್ದ ಕೋಣೆಗೆ ಹೋಗಿ ಒಳಗಿನಿಂದ ಲಾಕ್ ಮಾಡಿದ್ದಾನೆ . ಅವನ ಬಳಿ ಎರಡು ಚಾಕುಗಳು, ಒಂದು ಪೆಟ್ರೋಲ್ ಬಾಟಲಿ ಮತ್ತು ಒಂದು ಮರ ಕತ್ತರಿಸುವ ಸಣ್ಣ ಕೈ ಗರಗಸವಿತ್ತು. ಆರಂಭದಲ್ಲಿ ಮಹೇಶ್ ಆಕೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಕೆಲವೇ ನಿಮಿಷಗಳಲ್ಲಿ ಸುನೀತಾಳ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ.
ಸುನೀತಾ ತಮ್ಮ ಮನೆಯಿಂದಲೇ ಕಂಪನಿಯೊಂದಕ್ಕೆ (ವರ್ಕ್ ಫ್ರಮ್ ಹೋಮ್) ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಆಕೆಯ ಅತ್ತೆ ಟೆರೇಸ್ ಮೇಲೆ ಬಟ್ಟೆ ಒಣ ಹಾಕುತ್ತಿದ್ದರೆ ಮಾವ ಮತ್ತೊಂದು ಕೋಣೆಯಲ್ಲಿದ್ದರು. ಸುನೀತಾ ಕಿರುಚಾಟ ಕೇಳಿ ಇತರ ಕುಟುಂಬ ಸದಸ್ಯರು ಆಕೆಯ ಕೋಣೆಗೆ ಓಡಿ ಬಂದಿದ್ದು, ಸುನೀತಾ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ.. ಆ ಹೊತ್ತಿಗೆ ಆರೋಪಿಯು ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಎಂದು ವರದಿಯಾಗಿದೆ.

ನೋಡಿರಿ

