ಸೂಪರ್ 8 ಗೆ ಎಂಟ್ರಿ ಕೊಟ್ಟ ಪಾಕಿಸ್ತಾನ – ನಮೀಬಿಯಾ ವಿರುದ್ಧ ಭರ್ಜರಿ 102 ರನ್‌ಗಳಿಂದ ಗೆದ್ದ ಪಾಕ್

ಸೂಪರ್ 8 ಗೆ ಎಂಟ್ರಿ ಕೊಟ್ಟ ಪಾಕಿಸ್ತಾನ – ನಮೀಬಿಯಾ ವಿರುದ್ಧ ಭರ್ಜರಿ 102 ರನ್‌ಗಳಿಂದ ಗೆದ್ದ ಪಾಕ್

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ನಮೀಬಿಯಾ ವಿರುದ್ಧ 102 ರನ್​ಗಳಿಂದ ಗೆದ್ದ ಪಾಕಿಸ್ತಾನ ತಂಡ ಸೂಪರ್ 8 ಪ್ರವೇಶಿಸಿದೆ.

ಇದನ್ನೂ ಓದಿ:ಡಚ್ಚರ ವಿರುದ್ಧ ಶಿವತಾಂಡವ – ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದ ಭಾರತ

ಪಾಕಿಸ್ತಾನ ತಂಡ ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ನಮೀಬಿಯಾ ವಿರುದ್ಧ  ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್​ 8 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗಿದ್ದವು.  ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು 199 ರನ್​ಗಳಿಸಿತ್ತು. ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅಜೇಯ ಶತಕ ಗಳಿಸಿದ್ದರು. ಆರಂಭಿಕ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ 58 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ, 100 ರನ್ ಗಳಿಸಿದ್ದರು. ಸೆಂಚುರಿ ಸಿಡಿಸುವ ಮೂಲಕ ಪಾಕ್ ತಂಡಕ್ಕೆ ನೆರವಾದರು. ಇವರಿಗೆ ಸಾಥ್ ನೀಡಿದ್ದ ಶದಾಬ್ ಖಾನ್ 22 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 36 ರನ್ ಗಳಿಸಿದರು. ನಾಯಕ ಸಲ್ಮಾನ್ ಅಲಿ ಅಘಾ 23 ಎಸೆತಗಳಲ್ಲಿ 38 ರನ್​ಗಳಿಸಿದ್ದರು. ನಮೀಬಿಯಾ ಪರ, ಜ್ಯಾಕ್ ಬ್ರೆಸೆಲ್ ಎರಡು ವಿಕೆಟ್ ಕಬಳಿಸಿದರೆ, ನಾಯಕ ಗೆರ್ಹಾರ್ಡ್ ಎರಾಸ್ಮಸ್ ಒಂದು ವಿಕೆಟ್ ಪಡೆದರು. ಪಾಕಿಸ್ತಾನ 102 ರನ್​ಗಳಿಂದ ಗೆಲ್ಲುವ ಮೂಲಕ ವಿಶ್ವಕಪ್​​ನಲ್ಲಿ ಸೂಪರ್ 8ಕ್ಕೆ ಅರ್ಹತೆ ಪಡೆದುಕೊಂಡಿದೆ.

ಗುರಿ ಬೆನ್ನಟ್ಟಿದ ನಮೀಬಿಯಾ ಕೇವಲ 97 ರನ್ ಗಳಿಸಿ ಆಲೌಟ್ ಆಗಿದೆ. 200 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ನಮೀಬಿಯಾ ಆರಂಭದಿಂದಲೇ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಮೊದಲ ವಿಕೆಟ್​ ಜೊತೆಯಾಟದಲ್ಲಿ 32 ರನ್​ಗಳ ಜೊತೆಯಾಟ ನಡೆಸಿತು. ಆದರೆ ಮೊದಲ ಜಾನ್ ಫ್ರೈಲಿಂಕ್​(9) ವಿಕೆಟ್ ಪತನದೊಂದಿಗೆ ನಮೀಬಿಯಾ ತಂಡ ಪೆವಿಲಿಯನ್ ಪರೇಡ್ ನಡೆಸಿತು. ಇಡೀ ತಂಡದಲ್ಲಿ ಆರಂಭಿಕ ಲಾರೆನ್ ಸ್ಟೀನ್​ಕ್ಯಾಪ್​ 23 ಹಾಗೂ ಅಲೆಕ್ಸಾಂಡರ್ ಫೋಲ್​ಶೆಂಕ್​ 20 ರನ್​ಗಳಿಸಿ ಎರಡಂಕಿ ದಾಟಿದ ಆಟಗಾರರಾದರು. ಉಳಿದವರೆಲ್ಲಾ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಪಾಕಿಸ್ತಾನದ ಪರ ಉಸ್ಮಾನ್ ತಾರಿಕ್ 16ಕ್ಕೆ4, ಶಾದಬ್ ಖಾನ್ 19ಕ್ಕೆ3, ಮೊಹಮ್ಮದ್ ನವಾಜ್ 22ಕ್ಕೆ1 ಹಾಗೂ ಸಲ್ಮಾನ್ ಅಲಿ ಆಘಾ 11ಕ್ಕೆ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

Sulekha