ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿ! – ಸಿಎಂ ಸಿದ್ದರಾಮಯ್ಯಗೆ  ಮನವಿ ಮಾಡಿದ ಶಾಸಕ!

ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿ! – ಸಿಎಂ ಸಿದ್ದರಾಮಯ್ಯಗೆ  ಮನವಿ ಮಾಡಿದ ಶಾಸಕ!

ಈಗೀಗ ಮದುವೆಯಾಗಲು ಹೆಣ್ಣು ಸಿಗ್ತಿಲ್ಲ ಅನ್ನೋದು ಯುವಕರಿಗೆ ಗೋಳು. ರೈತರ ಮಕ್ಕಳಿಗಂತೂ ಹೆಣ್ಣು ಕೊಡುವುದೇ ಇಲ್ಲ. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು ಎಂದು ಯುವಕರು ಹೇಳುತ್ತಿದ್ದಾರೆ. ಇದೀಗ ರೈತ ಪುರುಷರನ್ನು ಮದುವೆಯಾಗುವ ಮಹಿಳೆಯರಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಯೋಜನೆಯನ್ನು ಘೋಷಿಸುವಂತೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಮೆಟ್ರೋದಲ್ಲಿ ಮದ್ಯದ ಬಾಟಲ್​​ ಸಾಗಾಟಕ್ಕೆ ಅನುಮತಿ?

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ರೈತರನ್ನು ಮದುವೆಯಾಗಲು ಬಯಸುವುದಿಲ್ಲ. ರೈತ ಮಕ್ಕಳಿಗೆ ವಧುಗಳ ಕೊರತೆ ಎದುರಾಗಿದೆ ಎಂದು ರಂಗನಾಥ್ ತಿಳಿಸಿದ್ದಾರೆ. ಮಹಿಳೆಯರು ರೈತರನ್ನು ಮದುವೆಯಾಗಿ ಹಳ್ಳಿಗಳಿಗೆ ಏಕೆ ಹೋಗಬೇಕು ಎಂದು ಕೇಳುತ್ತಿದ್ದಾರೆ. ಇದು ವಾಸ್ತವ. ಕೃಷಿ ಕುಟುಂಬಗಳ ಜೀವನವನ್ನು ಸುಧಾರಿಸಲು ನಮ್ಮ ಸರ್ಕಾರ ಏನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಮಾರ್ಚ್ 6 ರಂದು 2026-27ರ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರನ್ನು ಪ್ರೋತ್ಸಾಹಕ ಯೋಜನೆಯನ್ನು ರೂಪಿಸುವಂತೆ ಕೇಳಿಕೊಂಡಿದ್ದೇನೆ ಎಂದು ರಂಗನಾಥ್ ಹೇಳಿದರು. ಕೃಷಿ ಕುಟುಂಬದಲ್ಲಿ ಮದುವೆಯಾಗುವ ಯಾವುದೇ ಮಹಿಳೆಗೆ ಪ್ರೋತ್ಸಾಹಧನ ನೀಡಬೇಕು” ಎಂದು ರಂಗನಾಥ್ ಹೇಳಿದರು.

ಕೃಷಿ ಕುಟುಂಬದ ಸೊಸೆಗೆ ಪ್ರೋತ್ಸಾಹ ಧನ ನೀಡಬೇಕು. ನಾನು ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದೇನೆ” ಎಂದು ಅವರು ಹೇಳಿದರು. ರೈತರ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ ನಂತರ ರಂಗನಾಥ್ ಈ ವಿಷಯ ಪ್ರಸ್ತಾಪಿಸಿದ್ದಾರೆ.

Shwetha M

Leave a Reply

Your email address will not be published. Required fields are marked *