ಬಿರಿಯಾನಿ, ಕಬಾಬ್ ಪ್ರಿಯರೇ ಎಚ್ಚರ! – ಬೆಂಗಳೂರಿನ ಫೇಮಸ್‌ ಹೋಟೆಲ್‌ನಲ್ಲಿ ಅಡುಗೆಗೆ ಕೊಳೆತ ಚಿಕನ್ ಬಳಕೆ!

ಬಿರಿಯಾನಿ, ಕಬಾಬ್ ಪ್ರಿಯರೇ ಎಚ್ಚರ! – ಬೆಂಗಳೂರಿನ ಫೇಮಸ್‌ ಹೋಟೆಲ್‌ನಲ್ಲಿ ಅಡುಗೆಗೆ ಕೊಳೆತ ಚಿಕನ್ ಬಳಕೆ!

ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಊಟ ಮಾಡುವಾಗ ಎಚ್ಚರ.. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವಕ್ಕೆ ಅಪಾಯ ಎದುರಾಗ್ಬೋದು. ಜನಪ್ರಿಯ ಹೋಟೆಲ್‌ನಲ್ಲಿ ಕೊಳೆತ ಚಿಕನ್‌ ಬಳಕೆ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ! – ಇನ್ಮುಂದೆ ಸಿನಿಮಾ ನಿರ್ದೇಶನ ಮಾಡ್ತಾರೆ ಕಾಮಿಡಿ ಕಿಂಗ್!‌

ಬೆಂಗಳೂರಿನಲ್ಲಿ ಜಿಬಿಎ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರು ದಕ್ಷಿಣದಲ್ಲಿ ಜಿಬಿಎ ಆರೋಗ್ಯ ಅಧಿಕಾರಿಗಳು ನಡೆಸಿದ ನಿಯಮಿತ ತಪಾಸಣೆಯಲ್ಲಿ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ತಿಲಕ್ ನಗರದಲ್ಲಿರುವ ಜನಪ್ರಿಯ ಬಿರಿಯಾನಿ ಅಂಗಡಿಯಲ್ಲಿ ಕೆಟ್ಟ ವಾಸನೆ ಬೀರುವ, ಕೊಳೆತ ಕೋಳಿ ಮಾಂಸವನ್ನು ಅಡುಗೆಗೆ ಬಳಸುತ್ತಿರುವುದು ಪತ್ತೆಯಾಗಿದೆ.

ಜನಪ್ರಿಯ ಬಿರಿಯಾನಿ ಹೋಟೇಲ್ ಅಂಬೂರ್ ಧಮ್ ಬಿರಿಯಾನಿ ಹೋಟೇಲ್ ನಲ್ಲಿ ಕೆಟ್ಟ ವಾಸನೆ ಬೀರುವ ಕೋಳಿ ಮಾಂಸದ ಬಳಕೆ ಮಾಡುತ್ತಿರುವುದನ್ನು ಜಿಬಿಎ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಫ್ರೀಜರ್ ಒಳಗೆ ದೊಡ್ಡ ಪ್ರಮಾಣದಲ್ಲಿ ಕೊಳೆತ ಕೋಳಿ ಮಾಂಸವನ್ನು ಸಂಗ್ರಹಿಸಿ ಇಡಲಾಗಿದೆ. ಕೋಳಿ ಮಾಂಸ ಕೆಟ್ಟ ವಾಸನೆಯನ್ನು ಬರುತ್ತಿತ್ತು. ಆದ್ರೂ ಹೋಟೆಲ್‌ ಸಿಬ್ಬಂದಿ  ಹಾಳಾದ ಕೋಳಿ ಮಾಂಸವನ್ನು ಬಿರಿಯಾನಿ ಮತ್ತು ಕಬಾಬ್‌ಗಳನ್ನು ತಯಾರಿಸಲು ಬಳಸಲಾಗುತ್ತಿದ್ದರು ಎಂದು ಗೊತ್ತಾಗಿದೆ. ಇದೀಗ ಹೋಟೆಲ್‌ ಮಾಲೀಕರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಜಿಬಿಎ ಆರೋಗ್ಯ ಇಲಾಖೆಯು ಆಹಾರ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಗಾಗಿ ಹೋಟೆಲ್‌ಗೆ ₹1 ಲಕ್ಷ ದಂಡ ವಿಧಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮಗಳನ್ನೂ ಪ್ರಾರಂಭಿಸಲಾಯಿತು.  GBA ಈ ದಾಳಿ ಬಗ್ಗೆ ವಿಡಿಯೋ ಸಮೇತ ಟ್ವೀಟ್ ಮಾಡಿ ಜನರಿಗೆ ಮಾಹಿತಿ ನೀಡಿದೆ. ಜೊತೆಗೆ ದಂಡದ ಬಿಲ್ ಅನ್ನು ಟ್ವೀಟರ್ ನಲ್ಲಿ ಪ್ರಕಟಿಸಿದೆ.

ಕೊಳೆತ ಮಾಂಸವನ್ನು ಸಂಗ್ರಹಿಸಿ ಅಡುಗೆಗೆ ಬಳಸುವ ಮೂಲಕ ಹೋಟೆಲ್ ಮೂಲಭೂತ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಅಭ್ಯಾಸಗಳು ಆಹಾರ ವಿಷ ಮತ್ತು ಗಂಭೀರ ಸೋಂಕುಗಳು ಸೇರಿದಂತೆ ತೀವ್ರ ಆರೋಗ್ಯ ಅಪಾಯಗಳನ್ನುಂಟುಮಾಡುತ್ತವೆ.

Shwetha M

Leave a Reply

Your email address will not be published. Required fields are marked *