ತಾಂಡವ್ ಕ್ಷಮಿಸಿದ ಭಾಗ್ಯ.. ಕಟ್ಟಡದಿಂದ ಹಾರಿದ ಶ್ರೇಷ್ಠಾ ಬದುಕಲ್ಲ? – ಪ್ರಮುಖ ಪಾತ್ರವೇ ಎಂಡ್?

ತಾಂಡವ್‌ಗೆ ಡಿವೋರ್ಸ್ ಕೊಟ್ಟ ಮೇಲೆ ಭಾಗ್ಯ ಆತನನ್ನ ಮನೆಯಿಂದ ಮಾತ್ರವಲ್ಲ. ಮನಸ್ಸಿಂದ ಹೊರ ಹಾಕಿದ್ದಾಳೆ. ಇದೀಗ ಕುಸುಮಾ ಸೊಸೆಗೆ ಆದೀಶ್ವರ್ ಮೇಲೆ ಲವ್ ಆಗಿದೆ. ಆದ್ರೆ ತಾಂಡವ್ ನೀನೇ ಬೇಕು ಅಂತ ಭಾಗ್ಯ ಮನೆಗೆ ಬಂದಿದ್ದಾನೆ. ಭಾಗ್ಯ ಆತನನ್ನ ಕ್ಷಮಿಸಲ್ಲ. ಮನೆಗೆ ಸೇರಿಸಲ್ಲ ಎಂದು ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಈಗ ಭಾಗ್ಯ ತಾಂಡವ್‌ನ ಕ್ಷಮಿಸಿ ಆಗಿದೆ. ಇತ್ತ ತಾಂಡವ್ ದೂರ ಆದ ಎಂದು ಶ್ರೇಷ್ಠಾ ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ್ದಾಳೆ.
ಇದನ್ನೂ ಓದಿ: ಮಗನೇ ಇಲ್ಲ ಅಂದ್ಮೇಲೆ ಕಾರು ಯಾಕೆ? – 6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ!
ಭಾಗ್ಯಲಕ್ಷ್ಮೀ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಆದೀಶ್ವರ್ ಮಧ್ಯೆ ಪ್ರೀತಿ ಚಿಗುರಿದೆ. ಇನ್ನೇನು ಇಬ್ಬರು ಒಂದಾಗ್ಬೇಕು ಅನ್ನುವಷ್ಟರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶ್ರೇಷ್ಠಾ ಕೆಟ್ಟವಳು ಅಂತ ಗೊತ್ತಾಗ್ತಿದ್ದಂತೆ, ಭಾಗ್ಯ ವಾಲ್ಯೂ ಏನು ಅನ್ನೋದು ಆತನಿಗೆ ಅರಿವಾಗಿದೆ. ಹೀಗಾಗಿ ತಾಂಡವ್ ಮತ್ತೆ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ನೀನೆ ಬೇಕು ಅಂತ ಆತ ಬಂದಿದ್ದಾನೆ. ಆದ್ರೆ ಭಾಗ್ಯ ತಾಂಡವ್ ಮಾಡಿದ ಪ್ರತಿ ತಪ್ಪನ್ನ ಹೇಳಿ, ಯಾವ ತಪ್ಪಿಗೆ ನಿಮ್ಮನ್ನು ಕ್ಷಮಿಸಬೇಕು ಎಂದು ಪ್ರಶ್ನೆ ಮಾಡಿದ್ಲು. ಆಕೆಯ ಮಾತನ್ನು ಕೇಳಿದ ವೀಕ್ಷಕರು ಭಾಗ್ಯ ಯಾವುದೇ ಕಾರಣಕ್ಕೂ ಆತನನ್ನು ಒಳಗೆ ಸೇರಿಸಲ್ಲ ಅಂತ ಅಂದ್ಕೊಂಡಿದ್ರು. ಆದ್ರೀಗ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಭಾಗ್ಯ ಈಗ ತಾಂಡವ್‌ನ ಮನೆಗೆ ಸೇರಿಸಿಕೊಂಡಿದ್ದಾಳೆ. ಅದೂ ಕೂಡ ಮಗಳಿಗೋಸ್ಕರ.
ತಾಂಡವ್ ಬದಲಾದ ಎಂದು ಯಾರೂ ಕೂಡ ನಂಬುತ್ತಿಲ್ಲ. ಕುಸುಮಾಗೂ ತನ್ನ ಮಗ ಬದಲಾದ ಎಂದು ನಂಬಲು ಆಗುತ್ತಿಲ್ಲ. ಇನ್ನು ತಾಂಡವ್ ಹೀಗೆ ಬದಲಾಗಿರೋದು ಆದಿಗೂ ಕೂಡ ಆಶ್ಚರ್ಯ ತಂದಿದೆ. ಆದ್ರೆ ಭಾಗ್ಯ ಮಗಳು ತನ್ವಿಗೋಸ್ಕರ ತಾಂಡವ್‌ನ ಮನೆಗೆ ಸೇರಿಸಿದ್ದಾಳೆ. ಇದೀಗ ತಾಂಡವ್ ಅವರ ಜೊತೆ ಹೇಗಿರ್ತಾನೆ ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಿದೆ.
ಇನ್ನೊಂದ್ಕಡೆ, ಆದೀಶ್ವರ್ ಭಾಗ್ಯಳನ್ನು ಮದುವೆ ಆಗ್ಬೇಕು ಅಂತ ಅಂದ್ಕೊಂಡಿದ್ದ. ಆದರೆ ತಾಂಡವ್ ಈಗ ಮನೆಗೆ ಬಂದಿರೋದು ಆದಿಗೆ ಇರಿಸುಮುರಿಸು ತಂದಿದೆ. ಆದಿಗೂ ಮುಂದೆ ಏನು ಮಾಡಬೇಕು ಅನ್ನೋದು ಗೊತ್ತಾಗ್ತಿಲ್ಲ. ಇದೀಗ ತಾಂಡವ್ ಬಂದ ಅಂತ ಆದೀಶ್ವರ್ ಭಾಗ್ಯಳಿಂದ ದೂರ ಆಗ್ತಾನಾ ಅನ್ನೋ ಪ್ರಶ್ನೆ ಕೂಡ ಕಾಡ್ತಿದೆ. ಇವೆಲ್ಲದ್ರ ಮಧ್ಯೆ ಶ್ರೇಷ್ಠಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ತಾಂಡವ್‌ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂದು ಗೊತ್ತಿದ್ರೂ ಶ್ರೇಷ್ಠಾ ಆತನ ಹಿಂದೆ ಬಿದ್ದಿದ್ಲು. ತಂದೆ-ತಾಯಿ, ಇಡೀ ಸಮಾಜದ ವಿರೋಧ ಕಟ್ಟಿಕೊಂಡು ಶ್ರೇಷ್ಠಾ, ತಾಂಡವ್‌ನನ್ನು ಮದುವೆಯಾದಳು. ಅವಳಿಗೆ ತಾಂಡವ್ ಹಣ ಮಾತ್ರ ಬೇಕಿತ್ತು, ತಾಂಡವ್ ಮಕ್ಕಳು ಬೇಕಿರಲಿಲ್ಲ. ಶ್ರೇಷ್ಠಾ ಕೆಟ್ಟವಳು ಅಂತ ಗೊತ್ತಾಗ್ತಿದ್ದಂತೆ ತಾಂಡವ್ ದೂರ ಮಾಡಿದ್ದ. ತಾಂಡವ್‌ನ ಮತ್ತೆ ಕರ್ಕೊಂಡು ಹೋಗಲು ಬಂದಾಗಲೂ ಆತ ಹೋಗೋಕೆ ರೆಡಿ ಇಲ್ಲ. ಭಾಗ್ಯ ವಿರುದ್ದ ಮಾತನಾಡಿದ್ದಕ್ಕೆ ಆಕೆಗೆ ಕಪಾಳಮೋಕ್ಷ ಮಾಡಿದ್ದ. ಇದ್ರಿಂದ ನೊಂದ ಶ್ರೇಷ್ಠಾ ಈಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಶ್ರೇಷ್ಠಾ ಈಗ ಬಿಲ್ಡಿಂಗ್‌ನಿಂದ ಕೆಳಗಡೆ ಹಾರಿದ್ದಾಳೆ. ಇದೀಗ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡ್ಲಾ? ಶ್ರೇಷ್ಠಾ ಪಾತ್ರ ಮುಗಿಯತ್ತಾ ಎಂಬ ಪ್ರಶ್ನೆ ಎದ್ದಿದೆ. ಇದೀಗ ಶ್ರೇಷ್ಠಾ ಸಾಯೋದು ಡೌಟ್. ಆಕೆ ತಾಂಡವ್ ವಾಪಾಸ್ ಬರಲು ಏನಾದ್ರೂ ಡ್ರಾಮಾ ಮಾಡಿರ್ತಾರೆ. ಒಂದ್ವೇಳೆ ಆಕೆ ಸಾಯಲು ಹೋದಾಗ ಯಾರಾದ್ರೂ ಒಂದು ಕಾಪಾಡಿರಬಹುದು ಎಂದು ಕೆಲವರು ಕಮೆಂಟ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ನಿಂದ ಕೂಡಿರಲಿದೆ.

ನೋಡಿರಿ

