ಹುಟ್ಟು ಹಬ್ಬದಂದೇ ಯುವಕ ದುರಂತ ಅಂತ್ಯ! – ಪಾರ್ಟಿ ಮುಗಿಸಿ ಮನೆಗೆ ಬರುವಾಗ ಆಗಿದ್ದೇನು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಬರ್ತ್ಡೇ ದಿನವೇ ಯುವಕ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಚಾರ್ ಧಾಮ್ ಯಾತ್ರಿಗಳಿಗೆ ಬಿಗ್ಶಾಕ್! – ಇನ್ಮುಂದೆ ಬದರಿನಾಥ, ಕೇದಾರನಾಥ ದೇವಾಲಯಗಳ ಬಳಿ ಮೊಬೈಲ್ ಬಳಕೆ ನಿಷೇಧ!
ಸ್ನೇಹಿತರ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಯುವಕ ಮೃತಪಟ್ಟಿದ್ದಾನೆ. ಪವನ್ (24) ಮೃತಪಟ್ಟ ಯುವಕ.
ಅಷ್ಟಕ್ಕೂ ಆಗಿದ್ದೇನು?
ಪವನ್ ಬೆಂಗಳೂರು ಉತ್ತರ ತೋಟದ ಗುಡ್ಡದಹಳ್ಳಿ ನಿವಾಸಿ. ಈತ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಐವರ ಕಂಡಪುರದ ಬಳಿ ಅಪಘಾತದಲ್ಲಿ ನಿನ್ನೆ ಸಂಜೆ 5:45 ಕ್ಕೆ ಹುಟ್ಟುಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಅಶೋಕಾ ಲೈಲಾಂಡ್ ಡಿಕ್ಕಿಯಾಗಿದೆ. ಗೂಡ್ಸ್ ವಾಹನ ಓವರ್ ಸ್ಪೀಡ್ನಲ್ಲಿದ್ದ ಕಾರಣ ಬೈಕ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ನೋಡಿರಿ

