ಕೆನಡಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು – ಸೂಪರ್‌ 8ಗೆ ಎಂಟ್ರಿ ಕೊಟ್ಟ ನ್ಯೂಜಿಲೆಂಡ್‌!

ಕೆನಡಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು – ಸೂಪರ್‌ 8ಗೆ ಎಂಟ್ರಿ ಕೊಟ್ಟ ನ್ಯೂಜಿಲೆಂಡ್‌!

ಗ್ಲೆನ್‌ ಫಿಲಿಪ್ಸ್‌ ಹಾಗೂ ರಚಿನ್‌ ರವೀಂದ್ರ ಅವರ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌   ಟೂರ್ನಿಯ ಪಂದ್ಯದಲ್ಲಿ ಕೆನಡಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು ಹಾಗೂ ಟೂರ್ನಿಯ ಸೂಪರ್‌-8ಕ್ಕೆ ಪ್ರವೇಶ ಮಾಡಿತು. ಕಿವೀಸ್‌ ತಂಡದ ಗೆಲುವಿನ ಮೂಲಕ ಅಫ್ಘಾನಿಸ್ತಾನ ತಂಡದ ಟೂರ್ನಿಯಿಂದ ಅಧಿಕೃತವಾಗಿ ಹೊರ ನಡೆಯಿತು. ಆದರೆ, ಯುವರಾಜ್‌ ಶರ್ಮಾ  ಅವರ ದಾಖಲೆಯ ಶತಕದ ಹೊರತಾಗಿಯೂ ಕೆನಡಾ ತಂಡ ತನ್ನ ಬೌಲಿಂಗ್‌ ವೈಫಲ್ಯದಿಂದ ಈ ಪಂದ್ಯದಲ್ಲಿ ಸೋಲು ಅನುಭವಿಸಿತು. ಆಡಿದ ಮೂರೂ ಪಂದ್ಯಗಳನ್ನು ಸೋತ ಕೆನಡಾ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಎಲಿಮಿನೇಟ್‌ ಆಯಿತು.

ಇದನ್ನೂ ಓದಿ: ಫೆ 28ರಿಂದ ಮಾ.17ರ ವರೆಗೆ ದ್ವಿತೀಯ ಪಿಯುಸಿ – ಮಾ. 18 ರಿಂದ ಏ.2ಕ್ಕೆSSLC ಎಕ್ಸಾಂ

ಮಂಗಳವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಡಿ ಗುಂಪಿನ ಪಂದ್ಯದಲ್ಲಿ 174 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ರಚಿನ್‌ ರವೀಂದ್ರ (59 ರನ್‌) ಹಾಗೂ ಗ್ಲೆನ್‌ ಫಿಲಿಪ್ಸ್‌ (76 ರನ್‌) ಅರ್ಧಶತಕಗಳ ಬಲದಿಂದ 15.1 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಕಿವೀಸ್‌, ಗೆಲುವಿನ ಲಯಕ್ಕೆ ಮರಳಿತು. ಸ್ಪೋಟಕ ಬ್ಯಾಟಿಂಗ್‌ ನಡೆಸಿ ಕಿವೀಸ್‌ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಗ್ಲೆನ್‌ ಫಿಲಿಪ್ಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Kishor KV

Leave a Reply

Your email address will not be published. Required fields are marked *