ಟೀಂ ಇಂಡಿಯಾಗೆ ಪ್ರತೀಕಾ ರಾವಲ್ ಕಂಬ್ಯಾಕ್ – ಮಹಿಳಾ ತಂಡಕ್ಕೆ ಮತ್ತಷ್ಟು ಪವರ್

2025ರ ಮಹಿಳಾ ವಿಶ್ವಕಪ್ ಸಮಯದಲ್ಲಿ ಗಾಯಗೊಂಡು ಸುದೀರ್ಘ ವಿಶ್ರಾಂತಿ ಪಡೆದಿದ್ದ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಸರಣಿಯ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯಾವಳಿ ಸಮಯದಲ್ಲಿ ಉಂಟಾದ ಪಾದದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ರಾವಲ್ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (COE) ನಲ್ಲಿ ತಮ್ಮ ಪುನರ್ವಸತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ” ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಖ್ಯಾತ ನಟಿ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್! – ಆ ದಿನ ಆಗಿದ್ದೇನು?
ವಿಶ್ವಕಪ್‌ನ ಬಾಂಗ್ಲಾದೇಶ ವಿರುದ್ಧ ಮಳೆಯಿಂದ ಅಡಚಣೆಯಾಗಿದ್ದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಾವಲ್ ಗಾಯಗೊಂಡು ಟೂರ್ನಿಯಿಂ ಹೊರಬಿದ್ದಿದ್ದರು. ಸೆಮಿಫೈನಲ್‌ಗೆ ಮುನ್ನ ಅವರ ಬದಲಿಗೆ ಶಫಾಲಿ ವರ್ಮಾ ತಂಡಕ್ಕೆ ಆಯ್ಕೆಯಾದರು. ರಾವಲ್ ದೀರ್ಘ ಚೇತರಿಕೆ ಕಂಡ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಆರಂಭದಲ್ಲಿ ಅವರನ್ನು ಆಸ್ಟ್ರೇಲಿಯಾದ ಏಕೈಕ ಟೆಸ್ಟ್ ಪಂದ್ಯಕ್ಕೆ ಮಾತ್ರ ತಂಡದಲ್ಲಿ ಹೆಸರಿಸಲಾಗಿತ್ತು. ಇದೀಗ ಏಕದಿನ ಸರಣಿಗೂ ಸೇರಿಸಿಕೊಳ್ಳಲಾಗಿದೆ. ಇದೇ ವರ್ಷದ ಆರಂಭದಲ್ಲಿ ನಡೆದಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅವರನ್ನು ಯುಪಿ ವಾರಿಯರ್ಜ್ ತಂಡ ಹರಾಜಿನಲ್ಲಿ ಆಯ್ಕೆ ಮಾಡಿತ್ತು. ಆದರೆ ಅವರು ಸಂಪೂರ್ಣ ಚೇತರಿಕೆ ಕಾಣದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ.

ನೋಡಿರಿ

