ಸಿಂಹಿಣಿ ಸಿಟ್ಟಾದ್ರೆ ಸಿಂಹನೂ ಸೈಲೆಂಟ್! – ಕಾದಾಟದಲ್ಲಿ ಸೋತ ಕಾಡಿನ ರಾಜ!

ಕಾಡು ಪ್ರಾಣಿಗಳನ್ನು ನೋಡಲು ಹೋಗುವ ಪ್ರವಾಸಿಗರಿಗೆ ಸಾಕಷ್ಟು ಸಲ ನಿರಾಸೆ ಎದುರಾಗುತ್ತದೆ. ಅದೇ ಕೆಲವೊಮ್ಮೆ ಜಾಕ್ಪಾಟ್ ಹೊಡೆಯುತ್ತದೆ. ಹೌದು, ವನ್ಯಜೀವನ ಕಾಳಗ, ಮುದ್ದಾದ ಮರಿಗಳ ಜೊತೆಗಿನ ಆಟ.. ಹೀಗೆ ನಾನಾ ರೀತಿಯ ದೃಶ್ಯಗಳು ನೋಡಲು ಸಿಗತ್ತವೆ. ಈಗಲೂ ಸಹ ಸಫಾರಿಗೆ ಹೋದವರಿಗೆ ಇಂತಹದ್ದೇ ದೃಶ್ಯವೊಂದು ಕಣ್ಣಿಗೆ ಬಿದ್ದಿದ್ದು, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದೀಗ ಸಿಂಹ ಹಾಗೂ ಸಿಂಹಿಣಿ ನಡುವೆ ನಡೆದ ಕಾದಟದಲ್ಲಿ ಸಿಂಹ ಸೋಲೊಪ್ಪಿಕೊಂಡಿದೆ. ಇದ್ರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಫಸ್ಟ್ ಬಿಲ್ಡಪ್.. ಈಗ ಶೇಪ್ ಔಟ್ – PAK ಸೋಲ್ತಿದ್ದಂತೆ ಕಾಲ್ಕಿತ್ತ ನಖ್ವಿ
ಸಿಂಹ ಕಾಡಿನ ರಾಜ. ಆದರೆ ಇಲ್ಲಿ ಸಿಂಹಿಣಿಯೊಬ್ಬಳು ತನ್ನ ಬಲಶಾಲಿ ಯಿಂದ ಸ್ವತಃ ಗಂಡು ಸಿಂಹವನ್ನೇ ಧೃತಿಗೆಡುವಂತೆ ಮಾಡಿದ್ದು ಸಿಂಹಿಣಿ ಮತ್ತು ಗಂಡು ಸಿಂಹದ ನಡುವಿನ ತೀವ್ರವಾದ ಮುಖಾಮುಖಿಯನ್ನು ಸೆರೆಹಿಡಿಯಲಾಗಿದೆ. ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಬಂದ ಅಪರೂಪದ ಕ್ಷಣವೊಂದು ಸಾಮಾಜಿಕ ಮಾಧ್ಯಮ ದಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸುವಂತೆ ಮಾಡಿದೆ.
ವೈಲ್ಡ್‌ಲೈಫ್ ಫೋಟೋ ಗ್ರಾಫರ್ ಉರ್ಮಿಳ್ ಝವೇರಿ ಸೆರೆಹಿಡಿದ ಈ ವಿಡಿಯೋ, ಮೊದಲಿಗೆ ಗಂಡು ಸಿಂಹ ತನ್ನ ಘರ್ಜನೆಯ ಮೂಲಕ ಹಿಮ್ಮೆಟ್ಟಲು ಪ್ರಯತ್ನಿಸುತ್ತದೆ. ಆದರೆ ಇದಕ್ಕೆ ಒಂಚೂರು ಹೆದರದ ಸಿಂಹಿಣಿ, ಕ್ಷಣಾರ್ಧದಲ್ಲಿ ಮರು ಘರ್ಜನೆ ಮಾಡಿ ಗಂಡು ಸಿಂಹವನ್ನು ಹೆದರಿಸುತ್ತದೆ. ಸಿಂಹಿಣಿ ತನ್ನದೇ ಆದ ಘರ್ಜನೆಯನ್ನು ಮಾಡಿದ ನಂತರ ಗಂಡು ಸಿಂಹ ಇದ್ದಕ್ಕಿದ್ದಂತೆ ವಿರಾಮ ಗೊಳಿಸುತ್ತದೆ. ಗಂಡು ಸಿಂಹ, ತಕ್ಷಣ ಸುಮ್ಮನಾಗಿ ಹಿಂದೆ ಸರಿಯುವ ದೃಶ್ಯ ನೋಡುಗರನ್ನು ಮುಕವಿಸ್ಮಿತರನ್ನಾಗಿ ಮಾಡುತ್ತದೆ.ಇದಕ್ಕೆ ಗುಜರಾತ್ ಪ್ರವಾಸೋದ್ಯಮವು “ರಾಜನಿಗೂ” ಕೂಡ ಯಾವಾಗ ಹಿಂದೆ ಸರಿಯಬೇಕೆಂದು ತಿಳಿದಿದೆ ಎಂದು ಸೂಚಿಸುವ ಹಾಸ್ಯಮಯ ಶೀರ್ಷಿಕೆ ಯೊಂದಿಗೆ ಇದನ್ನು ಮರು ಪೋಸ್ಟ್ ಮಾಡಿದೆ.
ಕೆಲವರು ಇದನ್ನು ಮರೆಯಲಾಗದ ವನ್ಯಜೀವಿ ಕ್ಷಣ ಎಂದು ಬಣ್ಣಿಸಿದರು. ಇನ್ನು ಕೆಲವರು ಈ ದೃಶ್ಯವನ್ನು ಸಂಪೂರ್ಣವಾಗಿ ಸೆರೆಹಿಡಿದಿದ್ದಕ್ಕಾಗಿ ಛಾಯಾಗ್ರಾಹಕನನ್ನು ಹೊಗಳಿದ್ದಾರೆ. ತಜ್ಞರ ಪ್ರಕಾರ ಸಂಯೋಗದ ಸಮಯದಲ್ಲಿ ಸಿಂಹಿಣಿಯು ಗಂಡು ಸಿಂಹದ ಶಕ್ತಿ ಮತ್ತು ಸಹನೆಯನ್ನು ಪರೀಕ್ಷಿಸಲು ಹೀಗೆ ಮಾಡುತ್ತದೆ. ಇನ್ನು ಕೆಲವೊಮ್ಮೆ ಸಿಂಹಿಣಿಗಳು ಗಂಡು ಸಿಂಹವು ತನ್ನ ಭವಿಷ್ಯದ ಮರಿಗಳನ್ನು ರಕ್ಷಿಸಲು ಸಮರ್ಥವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದಿದ್ದಾರೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಹೆಚ್ಚಿನವರು ಸಿಂಹಿಣಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

