ದಾಸನ ಹುಟ್ಟುಹಬ್ಬದಂದೇ ಪವಿತ್ರಾಗೆ ಶಾಕ್!‌ – ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ದಾಸನ ಹುಟ್ಟುಹಬ್ಬದಂದೇ ಪವಿತ್ರಾಗೆ ಶಾಕ್!‌ –  ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ A1 ಆರೋಪಿಯಾಗಿದ್ದಾರೆ. ಇದೀಗ ಜೈಲಿನಲ್ಲಿರೋ ಪವಿತ್ರಾ ಜಾಮೀನು ಪಡೆದು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಒಂದೊಂದು ಕಾರಣ ಕೊಟ್ಟು ಬೇಲ್‌ ಪಡೆಯಲು ಮುಂದಾಗಿದ್ದಾರೆ. ಇದೀಗ ಮಗಳ ಕಾರಣ ಕೊಟ್ಟು ಜಾಮೀನು ಮೂಲಕ ಹೊರ ಬರಲು ಪ್ರಯತ್ನಿಸಿದ್ದ ಪವಿತ್ರಾಗೆ ಹಿನ್ನಡೆಯಾಗಿದೆ. ಕೋರ್ಟ್‌ ಜಾಮೀನು ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ: ದರ್ಶನ್‌ ಮನೆ ಮುಂದೆ ರಂಪಾಟ! – ಹುಚ್ಚಾಟ ಮೆರೆದ ಅಭಿಮಾನಿಗೆ ಪೊಲೀಸರಿಂದ ಕಪಾಳಮೋಕ್ಷ!

ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬರಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈಗ ಮಗಳು ಹತ್ತನೇ ಕ್ಲಾಸ್.‌ ಆಕೆಗೆ ಪರೀಕ್ಷೆ ಸಮೀಪಿಸುತ್ತಿದೆ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್​​ನಲ್ಲಿ ಕೋರಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಜೈಲುವಾಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು, ಪವಿತ್ರಾ ಮಗಳಿಗೆ ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತ ಜಾಮೀನು ನೀಡಿ ಎಂದು ಕೋರ್ಟ್​ ಅಲ್ಲಿ ಮನವಿ ಮಾಡಿದ್ದರು. ಆದರೆ, ಇದನ್ನು ಕೋರ್ಟ್​ ನಿರಾಕರಿಸಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.

ಈ ಮೊದಲು ಪವಿತ್ರಾ ಅವರು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಜೈಲು ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದರು. ಕೆಲ ದಿನ ಇದಕ್ಕೆ ಅವಕಾಶ ಇತ್ತು. ನಂತರ ಇದನ್ನು ರದ್ದು ಮಾಡಲಾಯಿತು.

Shwetha M