ದರ್ಶನ್‌ ಮನೆ ಮುಂದೆ ರಂಪಾಟ! – ಹುಚ್ಚಾಟ ಮೆರೆದ ಅಭಿಮಾನಿಗೆ ಪೊಲೀಸರಿಂದ ಕಪಾಳಮೋಕ್ಷ!

ದರ್ಶನ್‌ ಮನೆ ಮುಂದೆ ರಂಪಾಟ! – ಹುಚ್ಚಾಟ ಮೆರೆದ ಅಭಿಮಾನಿಗೆ ಪೊಲೀಸರಿಂದ ಕಪಾಳಮೋಕ್ಷ!

ಇಂದು ನಟ ದರ್ಶನ್‌ ಹುಟ್ಟುಹಬ್ಬ. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಸೇರುವಂತೆ ಆಗಿದೆ. ಇದೇ ಮೊದಲ ಬಾರಿಗೆ ದರ್ಶನ್‌ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದ್ರೆ ಫ್ಯಾನ್ಸ್‌ ದರ್ಶನ್‌ ಮನೆ ಮುಂದೆ ಜಮಾಯಿಸುತ್ತಿದ್ದಾರೆ. ಇದೀಗ ದರ್ಶನ್‌ ಫ್ಯಾನ್ಸ್‌ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್‌! – ಇನ್ಮುಂದೆ ಪ್ರಯಾಣಿಕರು ಇದಕ್ಕೂ ಹೆಚ್ಚುವರಿ ಶುಲ್ಕ ಪಾವತಿಸಬೇಕು!

ದರ್ಶನ್‌ ಹುಟ್ಟು ಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ರಾಜ್ಯಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಫ್ಯಾನ್ಸ್‌ ಮಾಡುತ್ತಿದ್ದಾರೆ. ಮತ್ತೊಂದ್ಕಡೆ ದರ್ಶನ್‌ ಜೈಲಿನಲ್ಲಿದ್ರೂ ಅವರ ಫ್ಯಾನ್ಸ್‌ ಮನೆ ಬಳಿ ಜಮಾಯಿಸುತ್ತಿದ್ದಾರೆ. ಆದ್ರೀಗ ದರ್ಶನ್ ಮನೆ ಬಳಿ ಹೋಗಲೇ ಬೇಕು ಎಂದು ಕಿರಿಕಿರಿ ಮಾಡ್ತಿದ್ದ ಅಭಿಮಾನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.

ಮೀತಿಮೀರಿದ ವರ್ತನೆ ತೋರಿದ ದರ್ಶನ್ ಅಭಿಮಾನಿಗೆ ಪೊಲೀಸರಿಂದ ಕಪಾಳ ಮೋಕ್ಷ ಆಗಿದೆ. ಕುಡಿದು ಬಂದು ದರ್ಶನ್ ಮನೆ ಬಳಿ ಹೋಗಬೇಕು ಎಂದು ಕೂಗಾಡ್ತಿದ್ದಾನೆ. ಪೊಲೀಸರು ಆತನನ್ನು ತಡೆಯಲು ಬಂದಾಗ ಆತ ದುರ್ವರ್ತನೆ ತೋರಿದ್ದಾನೆ. ಈ ವೇಳೆ ಕಪಾಳಮೋಕ್ಷ ಮಾಡಿದ್ದಾರೆ.

ಇನ್ನು ದರ್ಶನ್‌ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ. ಇನ್ನೂ ರಕ್ಷಿತಾ ಪ್ರೇಮ್, ಅನುಷಾ ರೈ, ಯಶಸ್ ಸೂರ್ಯ, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ನಟಿ ರಚಿತಾ ರಾಮ್ ಸೇರಿದಂತೆ ಹಲವು ತಾರೆಯರು ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯಗಳನ್ನ ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *