ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್‌! – ಇನ್ಮುಂದೆ ಪ್ರಯಾಣಿಕರು ಇದಕ್ಕೂ ಹೆಚ್ಚುವರಿ ಶುಲ್ಕ ಪಾವತಿಸಬೇಕು!

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್‌! – ಇನ್ಮುಂದೆ ಪ್ರಯಾಣಿಕರು ಇದಕ್ಕೂ ಹೆಚ್ಚುವರಿ ಶುಲ್ಕ ಪಾವತಿಸಬೇಕು!

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕಿಂಗ್‌ ಸುದ್ದಿಯಿದೆ. ಇನ್ಮುಂದೆ ಪ್ರಯಾಣಿಕರು ಲಗೇಜ್‌ಗೂ ಹಣ ಪಾವತಿಸಬೇಕು ಎಂದು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಡಿಬಾಸ್‌ 49ನೇ ಹುಟ್ಟುಹಬ್ಬ –  ದರ್ಶನ್‌ ಬರ್ತ್‌ ಡೇಗೆ ವಿಜಯಲಕ್ಷ್ಮೀ, ವಿನೀಶ್‌ ಸ್ವೆಷಲ್‌ ವಿಶ್!‌

ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆಯಾಗಲಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ಆದ್ರೀಗ ಸಾರಿಗೆ ನಿಗಮ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ ಬದಲು ಲಗೇಜ್‌ ದರವನ್ನು ಏರಿಕೆ ಮಾಡಿದೆ. ಇಂದಿನಿಂದಲೇ (ಫೆ. 16) ಜಾರಿಗೆ ಬರುವಂತೆ ಲಗೇಜ್ ದರದಲ್ಲಿ ಏರಿಕೆ ಮಾಡಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

ಕಳೆದ ವರ್ಷ ಜನವರಿ 2025ರಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದ್ರೆ ಲಗೇಜ್ ದರವನ್ನು ಪರಿಷ್ಕರಿಸಿರಲಿಲ್ಲ. ಕೊನೆಯದಾಗಿ ಡಿಸೆಂಬರ್ 2021ರಲ್ಲಿ ಲಗೇಜ್ ದರವನ್ನು ಹೆಚ್ಚಿಸಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಮತ್ತೆ ದರ ಏರಿಕೆಯಾಗಿದೆ. ಹೊಸ ನಿಯಮದ ಪ್ರಕಾರ 30 ಕೆ.ಜಿ (30 KG) ತೂಕದವರೆಗಿನ ಲಗೇಜ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ಅದು ಸಂಪೂರ್ಣ ಉಚಿತವಾಗಿರುತ್ತದೆ. 30 ಕೆ.ಜಿ ಮೀರಿದ ಲಗೇಜ್‌ಗೆ ಮಾತ್ರ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ದರ ಏರಿಕೆಗೆ ಕಾರಣವೇನು?

ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡೀಸೆಲ್ ದರ, ಸಿಬ್ಬಂದಿ ವೇತನ ಹಾಗೂ ಇತರೆ ನಿರ್ವಹಣಾ ವೆಚ್ಚಗಳು ಹೆಚ್ಚಾಗಿವೆ. ಕಳೆದ ಬಾರಿ (ಜನವರಿ 2025) ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿತ್ತು. ನಿಯಮದ ಪ್ರಕಾರ ಬಸ್ ದರ ಎಷ್ಟು ಹೆಚ್ಚಾಗುತ್ತದೆಯೋ, ಲಗೇಜ್ ದರವೂ ಅಷ್ಟೇ ಪ್ರಮಾಣದಲ್ಲಿ (15%) ಹೆಚ್ಚಾಗಬೇಕು. ಹೀಗಾಗಿ ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಪರಿಷ್ಕೃತ ಲಗೇಜ್ ದರ ಪಟ್ಟಿ ಹೀಗಿದೆ

ಪ್ರಯಾಣಿಕರ ಸಹಿತ ಮತ್ತು ರಹಿತವಾಗಿ ಸಾಗಿಸುವ ಲಗೇಜ್‌ಗಳ ದರವನ್ನು ಪರಿಷ್ಕರಿಸಲಾಗಿದೆ.

1 ರಿಂದ 5 ಹಂತದವರೆಗೆಈ ಹಿಂದೆ ಇದ್ದ 5 ರೂ. ದರವನ್ನು 6 ರೂ.ಗೆ ಏರಿಸಲಾಗಿದೆ.

6 ರಿಂದ 12 ಹಂತದವರೆಗೆ ಈ ಹಿಂದೆ ಇದ್ದ 10 ರೂ. ದರವನ್ನು 12 ರೂ.ಗೆ ಏರಿಸಲಾಗಿದೆ.

ದೂರದ ಪ್ರಯಾಣ (156 ರಿಂದ 160 ಹಂತ) ಈ ಹಿಂದೆ ಇದ್ದ 123 ರೂ. ದರವನ್ನು ಬರೋಬ್ಬರಿ 145 ರೂ.ಗೆ ಏರಿಸಲಾಗಿದೆ.

Shwetha M