ಸಿನಿಮಾ ಶೂಟಿಂಗ್ ವೇಳೆ ಬಿದ್ದ ಪ್ರಭಾಸ್ – ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಸ್ಥಿತಿ ಈಗ ಹೇಗಿದೆ?

ಟಾಲಿವುಡ್‌ನ ಟಾಪ್ ಹೀರೋ, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಹನು ರಾಘವಪೂಡಿ ನಿರ್ದೇಶನದಲ್ಲಿ ಫೌಜೀ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಕೆಳಗೆ ಬಿದ್ದ ಪ್ರಭಾಸ್ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಫ್ಯಾನ್ಸ್ ಮನಗೆದ್ದ ರಾಜಾ ಸಾಬ್ – ಡೈನೋಸಾರ್ ಪ್ರಭಾಸ್ ನಟನೆಗೆ ಫುಲ್ ಮಾರ್ಕ್ಸ್
ಟಾಲಿವುಡ್ ಹೀರೋ ಪ್ರಭಾಸ್ ಹೊಸ ಸಿನಿಮಾ ಫೌಜೀ ಶೂಟಿಂಗ್‌ನಲ್ಲಿ ಸಣ್ಣ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಕುದುರೆ ಸವಾರಿ ಸೀನ್ ಶೂಟ್ ಮಾಡುತ್ತಿದ್ದಾಗ ಪ್ರಭಾಸ್ ಕೆಳಗೆ ಬಿದ್ದಿದ್ದಾರೆ, ಬಿದ್ದಿರೋ ರಭಸಕ್ಕೆ ಪ್ರಭಾಸ್ ಅವರಿಗೆ ಗಾಯಗಳು ಆಗಿವೆ ಎಂದು ಮಾಹಿತಿ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕೈಗಳಿಗೆ ಗಾಯವಾಗಿರುವುದರಿಂದ ವೈದ್ಯರು ಒಂದು-ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಹೇಳಲಾಗಿದೆ. ಪ್ರಭಾಸ್ ಶೀಘ್ರದಲ್ಲೇ ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತಾರೆ ಎಂದು ಚಿತ್ರ ತಂಡ ಹೇಳಿದೆ.
ಫೌಜೀ ಸಿನಿಮಾ ದೊಡ್ಡ ಮಟ್ಟದಲ್ಲಿ ಆಕ್ಷನ್ ಡ್ರಾಮಾ ಆಗಿ ಬರುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಬ್ರಿಟಿಷ್ ಸೈನಿಕನಾಗಿ ಕಾಣಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಪಾತ್ರ ಪ್ರಭಾಸ್ ಹಿಂದೆ ಮಾಡಿರದ ರೀತಿಯಲ್ಲಿ ಇರಲಿದೆ, ಕುದುರೆ ಸವಾರಿ ಸನ್ನಿವೇಶಗಳು ಸಿನಿಮಾದಲ್ಲಿ ಹೈಲೈಟ್ ಆಗುತ್ತವೆ ಎಂದು ಹೇಳಲಾಗಿದೆ. ಸಿನಿಮಾ ಶೂಟಿಂಗ್ ಗಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಇಮಾನ್‌ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಬೇಗ ಮುಗಿಸಿ ಈ ವರ್ಷ ದಸರಾ ಸಮಯದಲ್ಲಿ ಫೌಜೀ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ನೋಡಿರಿ

