ಡಿಬಾಸ್‌ 49ನೇ ಹುಟ್ಟುಹಬ್ಬ –  ದರ್ಶನ್‌ ಬರ್ತ್‌ ಡೇಗೆ ವಿಜಯಲಕ್ಷ್ಮೀ, ವಿನೀಶ್‌ ಸ್ವೆಷಲ್‌ ವಿಶ್!‌

ಡಿಬಾಸ್‌ 49ನೇ ಹುಟ್ಟುಹಬ್ಬ –  ದರ್ಶನ್‌ ಬರ್ತ್‌ ಡೇಗೆ ವಿಜಯಲಕ್ಷ್ಮೀ, ವಿನೀಶ್‌ ಸ್ವೆಷಲ್‌ ವಿಶ್!‌

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಾಸ ಜೈಲಿನಲ್ಲಿದ್ರೂ ಅವರ ಫ್ಯಾನ್ಸ್‌ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಇದೀಗ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ, ಅವರ ಮಗ ವಿನೀಶ್‌, ರಕ್ಷಿತಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಶ್‌ ಮಾಡಿದ್ದಾರೆ.

ಇದನ್ನೂ ಓದಿ: ಒಂದಾದ ಆದಿ-ಭಾಗ್ಯ.. ತಾಂಡವ್‌ಗೆ ಶ್ರೇಷ್ಠಾಳೇ ಗತಿ! – ಭಾಗ್ಯಲಕ್ಷ್ಮೀ ಸೀರಿಯಲ್‌ ಎಂಡ್?

ದರ್ಶನ್ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆ ಇದೆ. ಇದೀಗ ದಾಸನ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮೀ ಸ್ಪೆಷಲ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ ವಿಜಯಲಕ್ಷ್ಮೀ, ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ.

ತಂದೆಗೆ ವಿನೀಶ್ ವಿಶ್‌!

ಇನ್ನು ದರ್ಶನ್‌ ಮಗ ವಿನೀಶ್‌ ಕೂಡ ವಿಶ್‌ ಮಾಡಿದ್ದಾರೆ. ತಂದೆ ಜೊತೆ ಕಳೆದ ಸುಂದರ ಕ್ಷಣ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್‌ ಹೊರಗಡೆ ಇದ್ದಾಗ ವಿನೀಶ್‌ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದರು. ಕೊನೆಗೆ ತಂದೆಗೆ ವಿನೀಶ್ ಹುಟ್ಟುಹಬ್ಬದ ಶುಭಾಶಯ ಕೋರಿರುವ ಆಡಿಯೋ ಕೇಳಬಹುದು.

ದರ್ಶನ್ಗೆ ಧನ್ವೀರ್ವಿಶ್‌!

ಇನ್ನು ಧನ್ವೀರ್ ಕೂಡ ನೆಚ್ಚಿನ ಅಣ್ಣನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಈ ಹಿಂದಿನ ಬರ್ತ್ ಡೇ ಸೆಲೆಬ್ರೇಷನ್ ಮಾಡಿರೋ ವಿಡಿಯೋ ಒಂದನ್ನು ಕೂಡ ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) ಅಂತಲೂ ಬರೆದುಕೊಂಡಿದ್ದಾರೆ.

ದರ್ಶನ್ ಬರ್ತ್​​ಡೇಗೆ ರಕ್ಷಿತಾ ಭಾವುಕ ಪೋಸ್ಟ್

ದಾಸನ ಹುಟ್ಟುಹಬ್ಬಕ್ಕೆ ರಕ್ಷಿತಾ ಪ್ರೇಮ್‌ ಕೂಡ ವಿಶ್‌ ಮಾಡಿದ್ದಾರೆ. ದರ್ಶನ್, ರಕ್ಷಿತಾ ಹಾಗೂ ಪ್ರೇಮ್ ಒಟ್ಟಾಗಿ ಇರೋ ಪೋಸ್ಟ್​​ನ ರಕ್ಷಿತಾ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ. ನನ್ನ ಪ್ರೀತಿ ಪಾತ್ರನಿಗೆ ಜನ್ಮದಿನದ ಶುಭಾಶಯ ಎಂದು ರಕ್ಷಿತಾ ವಿಶ್ ಮಾಡಿದ್ದಾರೆ. ಮತ್ತೊಂದು ಇನ್​​ಸ್ಟಾ ಸ್ಟೋರಿಯಲ್ಲಿ, ನಾನು ನಿನ್ನನ್ನು ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನೀನು ಮತ್ತೆ ಖುಷಿಯಾಗಿ ಇರೋದನ್ನು ನೋಡುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಬರೆದಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಡಿ ಉತ್ಸವ ಮಾಡಲು ತಯಾರಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ಅನೇಕ ನಗರಗಳಲ್ಲಿ ಅಭಿಮಾನಿ ಸಂಘಗಳು ಈಗಾಗಲೇ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಅಳವಡಿಸಿ ಸಂಭ್ರಮಕ್ಕೆ ಸಜ್ಜಾಗಿವೆ. ಕೆಲವೆಡೆ ದರ್ಶನ್‌ ಅವರ ಹಳೆಯ ಹಿಟ್‌ ಸಿನಿಮಾಗಳ ವಿಶೇಷ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡಿ ಬಾಸ್ ಅಭಿಮಾನಿಗಳು ಬೃಹತ್‌ ಬ್ಯಾನರ್‌ಗಳು, ಪೋಸ್ಟರ್‌ಗಳು ಅಳವಡಿಸಿ ಹುಟ್ಟುಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಕೆಲವೆಡೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯೂ ರೂಪುಗೊಂಡಿದೆ ಎನ್ನಲಾಗಿದೆ. ನಟ ದರ್ಶನ್‌ ಅವರ ಹುಟ್ಟುಹಬ್ಬ ಈ ಬಾರಿ ಬೇಸರದ ಪರಿಸ್ಥಿತಿಯಲ್ಲಿ ಬಂದಿದ್ದರೂ, ಅಭಿಮಾನಿಗಳ ಪ್ರೀತಿ ಮತ್ತು ನಿಷ್ಠೆ ಮಾತ್ರ ಅಷ್ಟೇ ಗಟ್ಟಿಯಾಗಿ ಕಾಣಿಸಿಕೊಂಡಿದೆ.

Shwetha M