6 ಇನ್ನಿಂಗ್ಸ್ ಗಳಲ್ಲಿ 3 ಸಲ ಡಕ್ ಔಟ್ ಅಭಿಷೇಕ್ – ಸ್ಫೋಟಕ ಓಪನರ್ ಗೆ ಕನ್ಸಿಸ್ಟೆನ್ಸಿ ಪ್ರಾಬ್ಲಂ!

6 ಇನ್ನಿಂಗ್ಸ್ ಗಳಲ್ಲಿ 3 ಸಲ ಡಕ್ ಔಟ್ ಅಭಿಷೇಕ್ – ಸ್ಫೋಟಕ ಓಪನರ್ ಗೆ ಕನ್ಸಿಸ್ಟೆನ್ಸಿ ಪ್ರಾಬ್ಲಂ!

ಅಭಿಷೇಕ್ ಶರ್ಮಾ. ಮಾಡ್ರೆನ್ ಕ್ರಿಕೆಟ್​​ನ ಸೆನ್ಸೇಷನಲ್ ಬ್ಯಾಟರ್. ಇಡೀ ಕ್ರಿಕೆಟ್ ಜಗತ್ತೇ ಈತನ ಬ್ಯಾಟಿಂಗ್ ಬಗ್ಗೆ ಮಾತ್ನಾಡ್ತಿದೆ. ಪವರ್ ಪ್ಲೇನಲ್ಲೇ ಫೈರ್ ಬ್ರ್ಯಾಂಡ್ ಆಗಿ ಅಬ್ಬರಿಸೋ ಅಭಿಷೇಕ್ ಭಾರತದ ಪರ ಅದೆಷ್ಟೋ ಪಂದ್ಯಗಳಲ್ಲಿ ಸಿಂಗಲ್ಲಾಗಿ ನಿಂತು ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಅಭಿಷೇಕ್ ಸಿಡಿದ್ರೆ ಸಿಂಹ. ಇಲ್ದಿದ್ರೆ ಸೊಹ್ನೆ ಎನ್ನುವಂತಾಗಿದೆ. ಅಭಿಷೇಕ್ ಆಡ್ತಾರೆ ಹೌದು ಬಟ್ ಅವ್ರಲ್ಲಿ ಕನ್ಸಿಸ್ಟೆನ್ಸಿ ಇಲ್ಲ ಅನ್ನೋದೇ ಕೆಲವ್ರ ಆರೋಪ.

ಇದನ್ನೂ ಓದಿ : AUSಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – ಕೂಸಿನೆದುರು ಗೆದ್ದೇ ಇಲ್ಲ ಕಾಂಗರೂ

ಟೀಂ ಇಂಡಿಯಾ ಪರ ಫಿಯರ್ ಲೆಸ್ ಬ್ಯಾಟಿಂಗ್ ಮೂಲಕವೇ ಹಲ್​ಚಲ್ ಎಬ್ಬಿಸಿರೋ ಅಭಿಷೇಕ್ ಶರ್ಮಾ ಟಿ-20 ವಿಶ್ವಕಪ್​ನ ಸೆಂಟ್ರ್ ಆಫ್ ಅಟ್ಯಾಕ್ಷನ್. ಟೂರ್ನಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಈತನೇ ಅಂತಾ ಆಲ್ರೆಡಿ ಒಂದಷ್ಟು ಕ್ರಿಕೆಟಿಗರು ಪ್ರೆಡಿಕ್ಟ್ ಮಾಡಿದ್ರು. ಆದ್ರೆ ಯಂಗ್ ಡೈನಮೇಟ್ ಅಭಿಷೇಕ್ ಶರ್ಮಾ ಪಂದ್ಯದಿಂದ ಪಂದ್ಯಕ್ಕೆ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡ್ತಿಲ್ಲ. ಅದೆಲ್ಲಕ್ಕಿಂತ ಜಾಸ್ತಿ ಅವ್ರ ವೀಕ್​ನೆಸ್ ಏನು ಅನ್ನೋದು ಎದುರಾಳಿಗಳಿಗೆ ಗೊತ್ತಾಯ್ತಾ ಅನ್ನೋ ಚರ್ಚೆ ನಡೀತಿದೆ.

6 ಇನ್ನಿಂಗ್ಸ್ ಗಳಲ್ಲಿ 3 ಸಲ ಡಕ್ ಔಟ್ ಅಭಿಷೇಕ್!

ಟಿ-20ಐ ಫಾರ್ಮೆಟ್​ನಲ್ಲಿ ಅಭಿಷೇಕ್ ಶರ್ಮಾ ಅವ್ರ ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಹಬ್ಬ. ಬ್ಯಾಟ್ ಎತ್ತಿದ್ರೆ ಸಿಕ್ಸ್, ಫೋರ್ ಗಳಲ್ಲೇ ಡೀಲ್ ಮಾಡ್ತಾರೆ. ಸಿಂಗಲ್ಸ್ ಅಂತೂ ತೀರಾ ಕಮ್ಮಿ.  ಪವರ್ ಪ್ಲೇನಲ್ಲಿ ಕಂಪ್ಲೀಡ್ ಡಾಮಿನೇಷನ್ ಮಾಡೋ ಅಭಿಷೇಕ್ ಎದುರಾಳಿ ಬೌಲರ್​ಗಳ ಬೆವರಿಳಿಸ್ತಾರೆ. ಆದ್ರೆ ಇತ್ತಿಚೆಗೆ ಅಭಿಷೇಕ್ ಬ್ಯಾಟಿಂಗ್ ಬಗ್ಗೆ ಟೆನ್ಷನ್ ಶುರುವಾಗಿದೆ. ಆಡಿದ್ರೆ ಫಿಫ್ಟಿ ಇಲ್ದಿದ್ರೆ ಸೊಹ್ನೆ ಎನ್ನುವಂತಾಗಿದೆ. ಈ ಹಿಂದಿನ ರೆಕಾರ್ಡ್​​ಗಳೇ ಇದನ್ನ ಹೇಳ್ತಿದೆ. ಕಳೆದ 6 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಬರೋಬ್ಬರಿ 3 ಬಾರಿ ‘ಗೋಲ್ಡನ್ ಡಕ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಅಂದ್ರೆ ಖಾತೆ ತೆರೆಯೋ ಮುನ್ನವೇ ಫಸ್ಟ್ ಬಾಲ್​ನಲ್ಲೇ ಔಟ್ ಆಗಿ ಪೆವಿಲಿಯನ್ ಸೇರ್ಕೊಳ್ತಿದ್ದಾರೆ. ಹಾಗೇ 2 ಪಂದ್ಯಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆವರೇಜ್ ರನ್ಸ್ ಬಂದಿದೆ. ಈ ನಂಬರ್​ಗಳನ್ನ ನೋಡಿಯೇ ಅಭಿಷೇಕ್ ಶರ್ಮಾ ಕನ್ಸಿಸ್ಟೆನ್ಸಿ ಕಾಪಾಡಿಕೊಳ್ತಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ. ಅದ್ರಲ್ಲೂ ಇನ್​ಎಕ್ಸ್​ಪಿರಿಯನ್ಸ್ ಇರೋ ಅಮೆರಿಕ ಎದುರು ಅಭಿಷೇಕ್ ಸೆಂಚುರಿ ಹೊಡೆದ್ರೂ ಅಚ್ಚರಿ ಇಲ್ಲ ಎನ್ನುವಂತೆ ಪ್ರೆಡಿಕ್ಟ್ ಮಾಡಿದ್ರು. ಆದ್ರೆ ಅಮೆರಿಕ ಬೌಲರ್‌ಗಳ ತಂತ್ರಕ್ಕೆ ಅಭಿಷೇಕ್ ಸುಲಭವಾಗಿ ವಿಕೆಟ್ ಕೊಟ್ರು. ಅದೂ ಕೂಡ ಫಸ್ಟ್ ಬಾಲಲ್ಲೇ ತಮ್ಮ ಟ್ರೇಡ್ ಮಾರ್ಕ್ ಶಾಟ್ ಬಾರಿಸಲು ಹೋಗಿ ಡೀಪ್ ಕವರ್ಸ್‌ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ಅಮೆರಿಕನ್ನರ ರಣತಂತ್ರ ಸಕ್ಸಸ್ ಆಗಿತ್ತು.

 ಅಭಿಷೇಕ್ ಪ್ಲಸ್ & ಮೈನಸ್!

ಫಸ್ಟ್ ಬಾಲ್ ನಿಂದಲೇ ಅಗ್ರೆಸ್ಸಿವ್ ಪ್ಲಸ್ & ಮೈನಸ್

ಪವರ್ ಪ್ಲೇ ನಲ್ಲೇ ಪವರ್ ಶೋ ತೋರಿಸಿ ವಿಕೆಟ್

ತಾಳ್ಮೆಯಿಂದ ಆಡಿ ಆ ನಂತ್ರ ಬಿಗ್ ಹಿಟ್ ಬಾರಿಸ್ತಿಲ್ಲ

ಟ್ರೇಡ್ ಮಾರ್ಕ್ ಶಾಟ್ ಡೀಪ್ ಕವರ್ಸ್‌ ನಲ್ಲಿ ಕ್ಯಾಚ್

ಹೀಗೆ ಅಭಿಷೇಕ್ ಆಡಿದ್ರೆ ಬಿಗ್ ಹಿಟ್ ಇಲ್ದಿದ್ರೆ ಸೊಹ್ನೆ ಎನ್ನುವಂತಾಗಿದೆ. ಪ್ರಸ್ತುತ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆತನೇ ಹೈಯೆಸ್ಟ್ ಸ್ಕೋರರ್ ಆಗ್ತಾರೆ ಅಂತಾ ಮಾಜಿ ಕ್ರಿಕೆಟಿಗರು ಪ್ರೆಡಿಕ್ಟ್ ಮಾಡಿದ್ರು. ಬಟ್ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್. ಎರಡನೇ ಪಂದ್ಯದಲ್ಲಿ ಹೆಲ್ತ್ ಇಶ್ಯೂನಿಂದ ಬೆಂಚ್ ಕಾದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೇಗೆ ಕಂ ಬ್ಯಾಕ್ ಮಾಡ್ತಾರೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *