ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಅಟ್ಯಾಕ್! – ಕೇಜ್ನಲ್ಲಿದ್ರೂ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದು ಹೇಗೆ?

ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದೆ. ವೀಕೆಂಡ್ ನಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಆದ್ರೀಗ ಜೈವಿಕ ಉದ್ಯಾನವನದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ದಿಢೀರ್ ದಾಳಿ ನಡೆಸಿದೆ.
ಇದನ್ನೂ ಓದಿ: ಮಗಳನ್ನ ಮನೆಯಲ್ಲೇ ಲಾಕ್ ಮಾಡಿ ಸ್ಕೂಲ್ಗೆ ಹೊರಟ ತಾಯಿ! – ಅಯ್ಯಯೋ.. ಆಮೇಲೆ ಏನಾಯ್ತು?
ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ (48) ಎಂಬುವವರೇ ಚಿರತೆ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ. ಎಂದಿನಂತೆ ಪ್ರಾಣಿಗಳ ಬೋನ್ ಸ್ವಚ್ಛಗೊಳಿಸುವ ಕಾಯಕದಲ್ಲಿ ಶಾಂತಪ್ಪ ತೊಡಗಿದ್ದರು. ನಿಯಮದಂತೆ ಸ್ವಚ್ಛತೆಗೂ ಮುನ್ನ ಚಿರತೆಯನ್ನು ಪಕ್ಕದ ಕೇಜ್ಗೆ ರವಾನಿಸಲಾಗಿತ್ತು. ಆದರೆ, ಶಾಂತಪ್ಪ ಅವರು ಕೇಜ್ ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ, ಪಕ್ಕದ ಕೇಜ್ನಲ್ಲಿದ್ದ ಚಿರತೆ ಏಕಾಏಕಿ ರೊಚ್ಚಿಗೆದ್ದಿದೆ. ಎರಡು ಕೇಜ್ಗಳ ನಡುವಿನ ಕಬ್ಬಿಣದ ಮೆಷ್ ಸಂದುಗಳಲ್ಲಿ ತನ್ನ ಉಗುರುಗಳನ್ನು ತೂರಿಸಿ ಶಾಂತಪ್ಪ ಅವರ ಮೇಲೆ ಎರಗಿದೆ.
ಚಿರತೆಯು ಮೆಸ್ ಮೂಲಕವೇ ಶಾಂತಪ್ಪ ಅವರನ್ನು ಉಗುರಿನಿಂದ ಪರಚಿದೆ. ಪರಿಣಾಮ ಶಾಂತಪ್ಪ ಅವರ ಕೆನ್ನೆ ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗಳಾಗಿವೆ. ಅದೃಷ್ಟವಶಾತ್ ಕಬ್ಬಿಣದ ಮೆಸ್ ಅಡ್ಡವಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಎಚ್ಚೆತ್ತ ಇತರೆ ಸಿಬ್ಬಂದಿ ಶಾಂತಪ್ಪ ಅವರನ್ನು ರಕ್ಷಿಸಿ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

ನೋಡಿರಿ

