ಒಂದಾದ ಆದಿ-ಭಾಗ್ಯ.. ತಾಂಡವ್‌ಗೆ ಶ್ರೇಷ್ಠಾಳೇ ಗತಿ! – ಭಾಗ್ಯಲಕ್ಷ್ಮೀ ಸೀರಿಯಲ್ ಎಂಡ್?

ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಅಂತಿಮ ಘಟ್ಟ ತಲುಪಿದೆ. ಒಂದ್ಕಡೆ ತಾಂಡವ್ ನೀನೇ ಬೇಕು ಅಂತ ಭಾಗ್ಯ ಹಿಂದೆ ಬಿದ್ದಿದ್ರೆ, ಮತ್ತೊಂದ್ಕಡೆ ಆದೀಶ್ವರ್ ಭಾಗ್ಯಳನ್ನು ಮದುವೆ ಅಗ್ಬೇಕು ಅಂತ ಹೊರಟಿದ್ದಾನೆ. ಇದೀಗ ಭಾಗ್ಯ ಯಾರನ್ನ ಒಪ್ಪಿಕೊಳ್ತಾಳೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಇವೆಲ್ಲದ್ರ ಮಧ್ಯೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಭಾಗ್ಯ ಲಕ್ಷ್ಮೀ ಸೀರಿಯಲ್ ಅಂತ್ಯ ಆಗಲಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಮಗಳನ್ನ ಮನೆಯಲ್ಲೇ ಲಾಕ್ ಮಾಡಿ ಸ್ಕೂಲ್‌ಗೆ ಹೊರಟ ತಾಯಿ! – ಅಯ್ಯಯೋ.. ಆಮೇಲೆ ಏನಾಯ್ತು?
ಕಳೆದ ಮೂರು ವರ್ಷಗಳಿಂದ ಭಾಗ್ಯಲಕ್ಷ್ಮೀ ಸೀರಿಯಲ್ ವೀಕ್ಷಕರನ್ನ ಮನರಂಜಿಸ್ತಾ ಬಂದಿದೆ. ಅಕ್ಟೋಬರ್ 10, 2022ರಲ್ಲಿ ಆರಂಭವಾದ ಈ ಸೀರಿಯಲ್ ಈಗಾಗಲೇ ಸಾವಿರಕ್ಕೂ ಅಧಿಕ ಎಪಿಸೋಡ್ಗಳು ಪ್ರಸಾರ ಕಂಡಿದೆ. ಇದೀಗ ಈ ಸೀರಿಯಲ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ ಎನ್ನಲಾಗ್ತಿದೆ. ಇತ್ತೀಚೆಗೆ ಸಕಲೇಶ್‌ಪುರದಲ್ಲಿ ಶೂಟಿಂಗ್ ನಡೆದಿದೆ. ಈ ಬೆನ್ನಲ್ಲೇ ಸೀರಿಯಲ್ ಮುಗಿಯುತ್ತಾ? ಕ್ಲೈಮ್ಯಾಕ್ಸ್‌ನಲ್ಲಿ ಏನಾಗಲಿದೆ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡಿದೆ.
ಭಾಗ್ಯ ಲಕ್ಷ್ಮೀ ಸೀರಿಯಲ್ ಕತೆ ಸದ್ಯ ರೋಚಕತೆಯಿಂದ ಕೂಡಿದೆ. ತಾಂಡವ್‌ನ ಬಿಟ್ಟು ಒಂಟಿಯಾಗಿದ್ದ ಭಾಗ್ಯ ಜೀವನಕ್ಕೆ ಆದೀಶ್ವರ್ ಎಂಟ್ರಿಕೊಟ್ಟಿದ್ದ. ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದವರು ದಿನ ಕಳೆದಂತೆ ಫುಲ್ ಕ್ಲೋಸ್ ಆದ್ರು. ಈ ಬೆನ್ನಲ್ಲೇ ಕುಸುಮಾ ಆದಿ, ಭಾಗ್ಯಳನ್ನ ಒಂದು ಮಾಡಲು ಕುಸುಮಾ ಪ್ಲ್ಯಾನ್ ಮಾಡಿದ್ಲು. ಆಕೆ ಅಂದುಕೊಂಡಂತೆ ಆದಿಗೆ ಭಾಗ್ಯ ಮೇಲೆ ಲವ್ ಆಗಿದೆ. ಆಕೆಗೆ ಪ್ರಪೋಸ್ ಕೂಡ ಮಾಡಿದ್ದಾನೆ. ಬಳಿಕ ಆದಿ ಭಾಗ್ಯಳನ್ನು ಮದುವೆಯಾಗಲು ಗುಂಡಣ್ಣನನ್ನ ಕೂಡ ಒಪ್ಪಿಸಿದ್ದಾನೆ. ಆದ್ರೆ ತನ್ವಿ ಹಾಗೂ ಸುನಂದಾಗೆ ಆದಿ ಭಾಗ್ಯ ಒಂದಾಗೋದು ಇಷ್ಟ ಇಲ್ಲ. ಇವೆಲ್ಲದ್ರ ಮಧ್ಯೆ ಭಾಗ್ಯಗೆ ಆದೀಶ್ವರ್ ಮೇಲೆ ಪ್ರೀತಿ ಮೂಡಿದೆ. ಆದಿಗೆ ಲವ್ ಲೆಟರ್ ಕೂಡ ಕೊಟ್ಟಿದ್ದಾಳೆ. ಆದ್ರೆ ಆದಿಗೆ ಲವ್ ಲೆಟರ್ ಸಿಕ್ಕಿಲ್ಲ. ಆಕೆ ಅದಿಗೆ ವಿಶ್ ಮಾಡಿದ್ದು ಮಾತ್ರ ಸಿಕ್ಕಿದೆ. ಇವೆಲ್ಲದ್ರ ಮಧ್ಯೆ ತಾಂಡವ್ ಕೂಡ ಭಾಗ್ಯಳೇ ನನಗೆ ಬೇಕು ಅಂತ ಹಠ ಹಿಡಿತಾ ಇದ್ದಾನೆ.
ಹೌದು. ಆಧಿ ಭಾಗ್ಯ ಒಂದಾಗೋ ಟೈಮ್‌ನಲ್ಲೇ ತಾಂಡವ್‌ಗೆ ಶ್ರೇಷ್ಠಾ ನರಿ ಬುದ್ದಿ ಗೊತ್ತಾಗಿದೆ. ಈ ಬೆನ್ನಲ್ಲೇ ತಾಂಡವ್‌ಗೆ ತನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಭಾಗ್ಯ ಮನೆಗೆ ವಾಪಾಸ್ ಬಂದಿದ್ದಾನೆ. ಆದ್ರೆ ಭಾಗ್ಯ ತಾಂಡವ್‌ನ ಪ್ರತಿ ತಪ್ಪುಗಳನ್ನ ಹೇಳಿ ಈತನನ್ನ ನಾನು ಮತ್ತೆ ಗಂಡ ಅಂತ ಒಪ್ಪಿಕೊಳ್ಳೋಕೆ ಸಾಧ್ಯನೇ ಇಲ್ಲ ಅಂತ ಹೇಳಿದ್ದಾಳೆ. ತಾಂಡವ್ ತಂದೆ ತಾಯಿ, ಗುಂಡಣ್ಣ ಕೂಡ ಭಾಗ್ಯಗೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೆ ತನ್ವಿ ಹಾಗೂ ಸುನಂದ ತಾಂಡವ್ ಪರ ವಹಿಸಿದ್ದಾರೆ. ತಾಂಡವ್‌ನ ಒಪ್ಪಿಕೊಳ್ಳಬೇಕು ಅಂತ ಫೋರ್ಸ್ ಮಾಡ್ತಿದ್ದಾರೆ. ಇದೀಗ ಭಾಗ್ಯ ಯಾರನ್ನ ಒಪ್ಪಿಕೊಳ್ಳುತ್ತಾಳೆ ಅನ್ನೋದು ಕ್ಯೂರಿಯಾಸಿಟಿ ಮೂಡಿದೆ. ಇವೆಲ್ಲದ್ರ ಮಧ್ಯೆ ಸೀರಿಯಲ್ ಕೂಡ ಮುಕ್ತಾಯ ಆಗ್ತಿದೆ ಎನ್ನಲಾಗ್ತಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ಕ್ಲೈಮ್ಯಾಕ್ಸ್ ಶೂಟಿಂಗ್ ಆಗಿದೆ ಎಂದು ಹೇಳಲಾಗ್ತಿದೆ. ಇದೀಗ ಸೀರಿಯಲ್ ಕ್ಲೈಮಾಕ್ಸ್‌ನಲ್ಲಿ ಆದಿ ಭಾಗ್ಯ ಒಂದಾಗಿರ್ಬೋದು. ತಾಂಡವ್ ಒಂಟಿಯಾದ್ರೆ, ಶ್ರೇಷ್ಠಾ ಜೈಲು ಸೇರಿರಬಹುದು ಎಂದು ಕೆಲ ವೀಕ್ಷಕರು ಕಮೆಂಟ್ ಮಾಡ್ತಿದ್ರೆ, ಇನ್ನು ಕೆಲವರು ಭಾಗ್ಯ ಇಬ್ಬರಲ್ಲಿ ಯಾರನ್ನೂ ಒಪ್ಪಿಕೊಳ್ಳಲ್ಲ. ಭಾಗ್ಯ ಮಕ್ಕಳೊಂದಿಗೆ ಇರ್ತಾಳೆ ಅಂತ ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

